GT vs RR IPL 2022 Final Live Streaming: ಗುಜರಾತ್- ರಾಜಸ್ಥಾನ ಫೈನಲ್ ವಾರ್! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ | GT vs RR Final Live Streaming When and Where to Watch Gujarat Titans Vs Rajasthan Royals Final Cricket Match Today in kannada


GT vs RR IPL 2022 Final Live Streaming: ಗುಜರಾತ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಆಡುತ್ತಿದೆ. ಮೊದಲ ಟೂರ್ನಿಯಲ್ಲೇ ಅದ್ಭುತ ಆಟ ಪ್ರದರ್ಶಿಸಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದೆ.

ಐಪಿಎಲ್-2022ರ (IPL 2022) ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಈ ಸೀಸನ್​ನ ಎರಡು ಫೈನಲಿಸ್ಟ್ ತಂಡಗಳನ್ನು ನಿರ್ಧರಿಸಲಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ- ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್​ನ ಎರಡು ಅಗ್ರ ತಂಡಗಳ ನಡುವೆ ಪ್ರಶಸ್ತಿ ರೇಸ್ ನಡೆಯಲಿದೆ. ಈ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ನಡೆಯಲಿದೆ. ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಕ್ವಾಲಿಫೈಯರ್-1ರಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಗುಜರಾತ್ ಗೆದ್ದು ನೇರವಾಗಿ ಅಂತಿಮ ಟಿಕೆಟ್ ಕಾಯ್ದಿರಿಸಿತ್ತು. ಅದೇ ಸಮಯದಲ್ಲಿ ರಾಜಸ್ಥಾನ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆಯಿತು. ಇದೀಗ ಈ ಎರಡು ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.

ಗುಜರಾತ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಆಡುತ್ತಿದೆ. ಮೊದಲ ಟೂರ್ನಿಯಲ್ಲೇ ಅದ್ಭುತ ಆಟ ಪ್ರದರ್ಶಿಸಿ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಫೈನಲ್ ಪ್ರವೇಶಿಸಿದೆ. ತಮ್ಮ ನಾಯಕತ್ವದಲ್ಲಿ ಶೇನ್ ವಾರ್ನ್ ಮಾತ್ರ ಮಾಡಲು ಸಾಧ್ಯವಾಗಿದ್ದನ್ನು ಸಂಜು ಸ್ಯಾಮ್ಸನ್ ಈಗ ಮಾಡಲು ರಾಜಸ್ಥಾನದ ಪರ ಸಿದ್ದರಿದ್ದಾರೆ. ಈ ಲೀಗ್‌ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ ಫೈನಲ್‌ ಪ್ರವೇಶಿಸಿ ಗೆದ್ದಿತ್ತು. ಆ ವರ್ಷದ ನಂತರ ರಾಜಸ್ಥಾನ ಈ ವರ್ಷ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶೇನ್ ವಾರ್ನ್ ನಾಯಕತ್ವದಲ್ಲಿ ಮಾಡಿದ ಕೆಲಸವನ್ನು ಈ ತಂಡ ಮಾಡಲು ಸಾಧ್ಯವೇ ಎಂಬುದನ್ನು ಈಗ ನೋಡಬೇಕು.

TV9 Kannada


Leave a Reply

Your email address will not be published. Required fields are marked *