GT vs RR, Playoff Prediction: ಫೈನಲ್ ಸುತ್ತು, ಪೈಪೋಟಿ ಗುಜರಾತ್ ಜೊತೆ; ರಾಜಸ್ಥಾನದ ಕಾಯುವಿಕೆ ಕೊನೆಗೊಳ್ಳುತ್ತಾ? | Who will win rt vs rr IPL Playoff Match Today Preview Prediction Gujarat Titans vs Rajasthan Royals 24 may in kannada


GT vs RR IPL 2022 Playoff Prediction: ಪ್ಲೇಆಫ್‌ನ ಸ್ವರೂಪದ ಪ್ರಕಾರ, ಈ ಪಂದ್ಯವು ತುಂಬಾ ವಿಶೇಷವಾಗಿದೆ ಏಕೆಂದರೆ ಗೆಲ್ಲುವ ತಂಡವು ಪ್ರಯೋಜನವನ್ನು ಪಡೆಯುತ್ತದೆ. ಆದರೆ ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ.

ಈಗ ಐಪಿಎಲ್ 2022 (IPL 2022) ಪ್ಲೇ ಆಫ್ ಹಂತಕ್ಕೆ ಬಂದಿದೆ, ಇಲ್ಲಿಂದ ಪ್ರಶಸ್ತಿಗಾಗಿ ನಿಜವಾದ ಹೋರಾಟ ಪ್ರಾರಂಭವಾಗಲಿದೆ. ಈಗ ಪ್ಲೇಆಫ್ (IPL Playoff) ಗಾಗಿ ಪಂದ್ಯಗಳು ಪ್ರಾರಂಭವಾಗಲಿದ್ದು, ಇದಕ್ಕಾಗಿ 10 ತಂಡಗಳು 58 ದಿನಗಳು ಮತ್ತು 70 ಪಂದ್ಯಗಳಿಗೆ ಸಂಪೂರ್ಣ ಒತ್ತು ನೀಡಿವೆ. ಪ್ಲೇಆಫ್‌ನ ಮೊದಲ ಪಂದ್ಯವು ಮಂಗಳವಾರ ಮೇ 24 ರಂದು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ನಡೆಯಲಿದೆ. ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದ್ದ ಈ ಎರಡೂ ತಂಡಗಳು ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಾಗಿವೆ. ಹೀಗಿರುವಾಗ ಈ ಪಂದ್ಯವೂ ರೋಚಕವಾಗುವ ನಿರೀಕ್ಷೆ ಇದೆ. ರಾಜಸ್ಥಾನ ಸಂಪೂರ್ಣ ತಂಡವಾಗಿ ಕಂಡರೂ, ಪ್ರತಿ ಪಂದ್ಯದಲ್ಲೂ ವೈಯಕ್ತಿಕ ಆಟಗಾರರ ಬಲಿಷ್ಠ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನ ಪಡೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್‌ ಇಲ್ಲಿ ಗೆಲ್ಲುವ ಫೆವರೆಟ್ ಆಗಿದೆ.

ಪ್ಲೇಆಫ್‌ನ ಸ್ವರೂಪದ ಪ್ರಕಾರ, ಈ ಪಂದ್ಯವು ತುಂಬಾ ವಿಶೇಷವಾಗಿದೆ ಏಕೆಂದರೆ ಗೆಲ್ಲುವ ತಂಡವು ಪ್ರಯೋಜನವನ್ನು ಪಡೆಯುತ್ತದೆ. ಆದರೆ ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಅಂದರೆ ಗೆಲ್ಲುವ ತಂಡ ನೇರವಾಗಿ ಫೈನಲ್ ತಲುಪಲಿದೆ, ಆದರೆ ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದ್ದು, ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಬುಧವಾರ ಮೇ 24 ರಂದು ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *