GT vs RR Prediction Playing XI IPL 2022 Final: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಏಳು ವಿಕೆಟ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರಾಜಸ್ಥಾನ ನೀಡಿದ 189 ರನ್ಗಳ ಗುರಿಯನ್ನು ಗುಜರಾತ್ ತಂಡ 19.3 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ ಸಾಧಿಸಿತು.
ಐಪಿಎಲ್ 2022 ರ ಅಂತಿಮ ಪಂದ್ಯವು ( final match of IPL 2022) ಭಾನುವಾರ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Gujarat Titans and Rajasthan Royals) ನಡುವೆ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಅಮೋಘ ಪಂದ್ಯ ನಡೆಯಲಿದೆ. ಗುಜರಾತ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, 14 ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದ್ದಾರೆ. ಅದೇ ಸಮಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 14 ಪಂದ್ಯಗಳಲ್ಲಿ 9 ರಲ್ಲಿ ಜಯಗಳಿಸುವ ಮೂಲಕ ಎರಡನೇ ಸ್ಥಾನ ಗಳಿಸಿತು. ಮೊದಲ ಕ್ವಾಲಿಫೈಯರ್ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದರೂ ಗೆಲುವು ಗುಜರಾತ್ನ ಕೈ ಸೇರಿದ್ದರಿಂದ ಮೊದಲ ಸೀಸನ್ನಲ್ಲಿಯೇ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಏಳು ವಿಕೆಟ್ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ರಾಜಸ್ಥಾನ ನೀಡಿದ 189 ರನ್ಗಳ ಗುರಿಯನ್ನು ಗುಜರಾತ್ ತಂಡ 19.3 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ ಸಾಧಿಸಿತು. ಗುಜರಾತ್ ಪರ ಡೇವಿಡ್ ಮಿಲ್ಲರ್ ಅತಿ ಹೆಚ್ಚು ರನ್ ಗಳಿಸಿದರು. ಅವರು 38 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಉಳಿದರು.