Hamsalekha: ವಿಚಾರಣೆಗೆ ಹಾಜರಾದ ಹಂಸಲೇಖ, ಓಡೋಡಿ ಬಂದ ನಟ ಚೇತನ್; ಠಾಣೆಯ ಬಳಿ ಉದ್ವಿಗ್ನ ಪರಿಸ್ಥಿತಿ | Hamsalekha attends to notice sent by Basavanagudi police station and Chethan Ahimsa joined him

ಬೆಂಗಳೂರು: ನಾದಬ್ರಹ್ಮ ಹಂಸಲೇಖ ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟೀಸ್ ನೀಡಲಾಗಿತ್ತು. ಇಂದು (ನವೆಂಬರ್ 25) ಅವರು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಈ  ವೇಳೆ ಹಂಸಲೇಖ ಅವರೊಂದಿಗಿರುವುದಾಗಿ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಓಡೋಡಿ ಬಂದಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯ ಮುಂದೆ ಸೇರಿದ್ದ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಠಾಣೆಯ ಮುಂದೆ ಹಂಸಲೇಖ ಪರ- ವಿರೋಧ ಪ್ರತಿಭಟನೆ ನಡೆಯುತ್ತಿದೆ. ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಭಜರಂಗದಳವು ನಟ ಚೇತನ್ ಮಧ್ಯಪ್ರವೇಶಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಟ ಚೇತನ್ ಕನ್ನಡಪರ ಸಂಘಟನೆಗಳ ಸರ್ಪಗಾವಲಿನಲ್ಲಿ ಠಾಣೆಗೆ ಆಗಮಿಸಿದ್ದಾರೆ.

TV9 Kannada

Leave a comment

Your email address will not be published. Required fields are marked *