Handwriting; ಹ್ಯಾಂಡ್​ರೈಟಿಂಗ್​ ಕೂಡ ವ್ಯಕ್ತಿತ್ವವನ್ನು ಹೇಳುತ್ತದೆ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ | Handwriting can tell the the people personality


Handwriting; ಹ್ಯಾಂಡ್​ರೈಟಿಂಗ್​ ಕೂಡ ವ್ಯಕ್ತಿತ್ವವನ್ನು ಹೇಳುತ್ತದೆ, ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಪ್ರಾತಿನಿಧಿಕ ಚಿತ್ರ

ಮನುಷ್ಯನ ಪ್ರತಿಯೊಂದು ನಡೆಯು ಆತನ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಮಾತು, ನಡೆ, ಹಾವ, ಭಾವ ಎಲ್ಲವೂ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದೇ ರೀತಿ ಹಸ್ತಾಕ್ಷರ, ಬರವಣಿಗೆ ಅಥವಾ ಹ್ಯಾಂಡ್​ ರೈಟಿಂಗ್ (Handwriting )​ ಕೂಡ ಒಬ್ಬ ವ್ಯಕ್ತಿಯ ವ್ಯಕ್ತಿವನ್ನು ಸೂಚಿಸುತ್ತದೆ. ಹೌದು ಗ್ರಾಫಾಲಜಿ ತಜ್ಞ (Graphology Expert) ಸುಧೀರ್​ ಕೋವೆ(Sudhir Kove) ಪ್ರಕಾರ ಒಬ್ಬ ವ್ಯಕ್ತಿಯ ಕೈಬರಹ ಆತನ ವ್ಯಕ್ತಿತ್ವವನ್ನು ಹೇಳುತ್ತದೆ. ಸುಧೀರ್ ಅವರ ಪ್ರಕಾರ, ಕೈಬರಹವನ್ನು ಬ್ರೈನ್‌ರೈಟಿಂಗ್ (Brainwriting) ಎಂದು ಕೂಡ ಕರೆಯುತ್ತಾರೆ. ನಮ್ಮ ಸ್ನಾಯುಗಳು ನರಮಂಡವು ಸೂಚನೆಗಳನ್ನು ರವಾನಿಸುವ ಮೆದುಳಿನ ಮೇಲೆ ಅವಲಂಬಿತವಾಗಿರುತ್ತದೆ. ಸಂದೇಶವು ನರಮಂಡಲದ ಮೂಲಕ ಚಲಿಸುತ್ತದೆ. ಹೀಗಾಗಿ ಪ್ರತಿಯೊಬ್ಬರ ಕೈಬರವೂ ಕೂಡ ವಿಭಿನ್ನವಾಗಿರುತ್ತದೆ. ಮೆದಳಿನ ಸರ್ಕ್ಯೂಟ್ ಮೂಲಕ ಹಾದುಹೋಗುವ ವಿದ್ಯುತ್ ಪ್ರಚೋದನೆಯನ್ನು ಬಿಡುಗಡೆ ಮಾಡುತ್ತದೆ. ಇದು ಹೆಚ್ಚು ಬರೆಯುವ ಬಯಕೆಯನ್ನು ಹುಟ್ಟುಹಾಕುತ್ತದೆ. ಇದು ಸ್ನಾಯುಗಳ ಸೆಳೆತಕ್ಕೆ ಕಾರಣವಾಗಿ ಬರವಣಿಗೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ಹಾಗಾದರೆ ಯಾವ ರೀತಿಯ  ಕೈಬರಹ ಯಾವ ಗುಣಗಳನ್ನು ತಿಳಿಸುತ್ತದೆ? ಇಲ್ಲಿದೆ ಮಾಹಿತಿ.

ಕರ್ಸಿವ್​ ರೈಟಿಂಗ್​​
ಸುಧೀರ್​ ಅವರ ಪ್ರಕಾರ್  ಕರ್ಸಿವ್​ ರೈಟಿಂಗ್​​ ರೀತಿಯ ಕೈಬರಹ ಹೊಂದಿರುವವರು ಸಂವಹನದಲ್ಲಿ ಉತ್ತಮವಾಗಿರುತ್ತಾರೆ. ಹೊಸ ಜನರನ್ನು ಭೇಟಿಯಾಗಿ, ಮಾತಿಗೆಳೆದು ವಿಷಯಗಳನ್ನು ತಿಳಿದುಕೊಳ್ಳುವ ಮನಸ್ಥಿತಿಯವರಾಗಿರುತ್ತಾರೆ. ಆದರೆ ಗಣಿತ ಹಾಗೂ ತಕ್ಷಣದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಹಿಂದುಳಿದವರಾಗಿರುತ್ತಾರೆ.

ಮುದ್ರಣ ಬರವಣಿಗೆ
ಇಂಡಿಯಾ,ಕಾಮ್​ ವರದಿ ಪ್ರಕಾರ ವಿಭಿನ್ನವಾಗಿ ಯೋಚಿಸುವ ಹಾಗೂ 24 ಗಂಟೆಯೂ ಕ್ರಿಯೇಟಿವ್​ ಆಗಿರುವ ವ್ಯಕ್ತಿತ್ವ ಮುದ್ರಣ ಬರವಣಿಗೆಯನ್ನು ಹೊಂದಿರುವ ವ್ಯಕ್ತಿಗಳದ್ದಾಗಿದೆ.ಆದರೆ ಸಂವಹನದಲ್ಲಿ ಅಷ್ಟೇನು ಪ್ರಬಲರಾಗಿರುವುದಿಲ್ಲ ಅದೇ ರೀತಿ ಇವರ ಮೆಮೋರಿ ಸ್ಕಿಲ್​ ಕೂಡ ಉತ್ತಮವಾಗಿರುವುದಿಲ್ಲ ಎನ್ನಲಾಗುತ್ತದೆ.

ರೈಟ್ ಸ್ಲ್ಯಾಂಟ್ ಬರವಣಿಗೆ
ಈ ರೀತಿಯ ಬರವಣಿಗೆಯನ್ನು ಹೊಂದಿರುವವರು ಎದುರಿಗಿರುವ ಹುಡುಗ ಅಥವಾ ಹುಡುಗಿಯೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು ತಿಳಿದುಕೊಂಡಿರುತ್ತಾರೆ. ಅದೇ ರೀತಿ ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದು, ಸಹಾಯಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ರೈಟ್ ಸ್ಲ್ಯಾಂಟ್ ಬರವಣಿಗೆ ಮಾಡುವ ವ್ಯಕ್ತಿಗಳು ಹಠದ ಗುಣ ಹೊಂದಿರುವವರಾಗಿದ್ದು, ಅಂದುಕೊಂಡ ಕೆಲಸವನ್ನು ಸಾಧಿಸುವವರಾಗಿರುತ್ತಾರೆ,

ಲೆಫ್ಟ್​ ಸ್ಲ್ಯಾಂಟ್​ ಬರವಣಿಗೆ
ಲೆಫ್ಟ್​ ಸ್ಲ್ಯಾಂಟ್​ ಬರವಣಿಗೆಯನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಇತರರಲ್ಲಿ ಹೇಳಿಕೊಳ್ಳುವುದಿಲ್ಲ. ಅಲ್ಲದೆ ಇತರರೊಂದಿಗೆ ಬೆರೆಯುವ ಪ್ರವೃತ್ತಿಯೂ ಹೆಚ್ಚಾಗಿ ಇರದ ಕಾರಣ ಒಬ್ಬರೇ ಇರಲು ಇಚ್ಛಿಸುತ್ತಾರೆ.

ದೊಡ್ಡ ಅಕ್ಷರದ ಬರವಣಿಗೆ
ದೊಡ್ಡ ಅಕ್ಷರದ ಬರವಣಿಗೆ ಹೊಂದಿರುವ ವ್ಯಕ್ತಿಗಳು ಶೋ ಅಪ್​ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ ಆಗಿರುತ್ತಾರಂತೆ, ಅವರು ಚಾಟ್​ ಮಾಡುವುದು, ಪಾರ್ಟಿಗಳಿಗೆ ಹೋಗಿ ಎಂಜಾಯ್​ ಮಾಡುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ರೀತಿಯ ಅಕ್ಷರದ ವ್ಯಕ್ತಿಗಳು ಎಲ್ಲರ ಗಮನ ಸೆಳೆಯಲು ಬಯಸುತ್ತಾರೆ ಜತೆಗೆ ಕೆಲಸದ ಫಲಿತಾಂಶ ಬೇಗನೆ ಸಿಗಬೇಕೆಂದು ಅಂದುಕೊಳ್ಳುತ್ತಾರೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ವಯಕ್ತಿಕ ಅಭಿಪ್ರಾಯವಾಗಿರುವುದಿಲ್ಲ. ಇಂಡಿಯಾ.ಕಾಮ್​ಗೆ ಗ್ರಾಫಾಲಜಿ ತಜ್ಞ ಸುಧೀರ್​ ಕೋವೆ ನೀಡಿದ ಮಾಹಿತಿಯನ್ನು ಆಧರಿಸಿದೆ.)

TV9 Kannada


Leave a Reply

Your email address will not be published. Required fields are marked *