Hansika Motwani: ಒಟಿಟಿಯಲ್ಲಿ ನೇರ ಪ್ರಸಾರ ಆಗಲಿದೆಯಾ ‘ಬಿಂದಾಸ್​’ ನಟಿ ಹನ್ಸಿಕಾ ಮೋಟ್ವಾನಿ ಮದುವೆ? – Hansika Motwani and Sohail Kathuria wedding will reportedly live streamed on OTT

Hansika Motwani Marriage: ಹನ್ಸಿಕಾ ಮೋಟ್ವಾನಿ ಮದುವೆಯ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ವಿವಾಹ ನೇರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ.

Nov 13, 2022 | 7:21 PM

TV9kannada Web Team

| Edited By: Madan Kumar

Nov 13, 2022 | 7:21 PM

ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಉದ್ಯಮಿ ಸೊಹೈಲ್​ ಜೊತೆ ಅವರು ಮದುವೆ ಆಗಲಿದ್ದಾರೆ.

ಕೆಲವೇ ದಿನಗಳ ಹಿಂದೆ ಹನ್ಸಿಕಾ ಅವರು ತಮ್ಮ ಎಂಗೇಜ್​ಮೆಂಟ್​ ಸುದ್ದಿ ಹಂಚಿಕೊಂಡರು. ಪ್ಯಾರಿಸ್​​ನಲ್ಲಿ ಸೊಹೈಲ್​ ಪ್ರಪೋಸ್​ ಮಾಡಿದ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುವ ಮೂಲಕ ಶುಭ ಸಮಾಚಾರ ತಿಳಿಸಿದರು.

ಮೂಲಗಳ ಪ್ರಕಾರ ಡಿಸೆಂಬರ್​ 4ರಂದು ಹನ್ಸಿಕಾ ಮೋಟ್ವಾನಿ ಅವರ ಮದುವೆ ನಡೆಯಲಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದ್ದು, ಬಹಳ ಅದ್ದೂರಿಯಾಗಿ ವಿವಾಹ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

ಸ್ಟಾರ್​ ನಟಿಯ ಮದುವೆ ಕ್ಷಣಗಳನ್ನು ಪ್ರಸಾರ ಮಾಡಲು ಒಟಿಟಿ ಸಂಸ್ಥೆಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ವಿವಾಹ ನೇರ ಪ್ರಸಾರ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.

ಬಹುಭಾಷೆಯಲ್ಲಿ ಹನ್ಸಿಕಾ ಫೇಮಸ್​ ಆಗಿದ್ದಾರೆ. ‘ಬಿಂದಾಸ್​’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ನಟಿಸುವ ಮೂಲಕ ಕರುನಾಡಿನ ಪ್ರೇಕ್ಷಕರಿಗೂ ಹನ್ಸಿಕಾ ಪರಿಚಿತರಾದರು. ಈಗ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.

Most Read Stories

TV9 Kannada

Leave a Reply

Your email address will not be published.