mithali raj
ಭಾರತ ಮಹಿಳಾ ತಂಡ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj:) ಶುಕ್ರವಾರ 39ನೇ ವರ್ಷಕ್ಕೆ ಕಾಲಿಟ್ಟರು. ಭಾರತ ಅಲ್ಲದೆ, ವಿಶ್ವದೆಲ್ಲೆಡೆಯಿಂದ ಹಿರಿಯ ಆಟಗಾರ್ತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 1999ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಬಳಿಕ, ಹಂತ ಹಂತವಾಗಿ ಉನ್ನತಿಯತ್ತ ಹೆಜ್ಜೆಹಾಕಿದ ಮಿಥಾಲಿ, ಭಾರತ ಕಂಡ ಅತ್ಯಂತ ಯಶಸ್ವಿ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೀಗ ಹಿರಿಯ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ 39ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ಗಳಿಸಿರುವ ಭಾರತೀಯ ಬ್ಯಾಟರ್ ಎನಿಸಿಕೊಂಡಿರುವ ಮಿಥಾಲಿ ರಾಜ್ ಹುಟ್ಟುಹಬ್ಬಕ್ಕೆ ಭಾರತದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.
2005 ಹಾಗೂ 2019ರಲ್ಲಿ ವಿಶ್ವಕಪ್ ಫೈನಲ್ ತಲುಪಿದ ಮಿಥಾಲಿ ನೇತೃತ್ವದ ಭಾರತ ಮಹಿಳಾ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇತ್ತೀಚೆಗಷ್ಟೆ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಸಾಧನೆಯನ್ನು ಕೂಡ ಮಿಥಾಲಿ ರಾಜ್ ಮಾಡಿದ್ದರು.
321 international matches 👍
10,454 international runs 🙌
Leading run-getter in WODIs 🔝Here’s wishing the legendary @M_Raj03 – #TeamIndia‘s WODI and WTest Captain – a very happy birthday. 🎂 👏 pic.twitter.com/wYIWKCtTga
— BCCI Women (@BCCIWomen) December 3, 2021
ಹೈದರಾಬಾದ್ ಮೂಲದ ಮಿಥಾಲಿ ರಾಜ್, ತಮ್ಮ 16ನೇ ವಯಸ್ಸಿಗೆ 1999ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಜತೆಗೆ ಐರ್ಲೆಂಡ್ ಎದುರು ಅಜೇಯ 114 ರನ್ ಬಾರಿಸಿದ್ದರು. ಬಳಿಕ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು.
ಮಿಥಾಲಿ ಒಟ್ಟು 220 ಏಕದಿನ, 89 ಟಿ20 ಹಾಗೂ 12 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಇದುವರೆಗೂ 7,391 ರನ್ ಸಿಡಿಸಿರುವ ಮಿಥಾಲಿ, 200 ಏಕದಿನ ಪಂದ್ಯಗಳನ್ನಾಡಿದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 7 ಶತಕ, 59 ಅರ್ಧಶತಕ ಬಾರಿಸಿದ್ದಾರೆ. ಟಿ20 ಪಂದ್ಯದಲ್ಲಿ ಅಜೇಯ 97 ಮತ್ತು ಟೆಸ್ಟ್ನಲ್ಲಿ ಅಜೇಯ 214 ರನ್ ಇವರ ಬೆಸ್ಟ್ ಸ್ಕೋರ್ ಆಗಿದೆ.
India vs New Zealand: ಕೊಹ್ಲಿ ಪಡೆಗೆ ಬಿಗ್ ಶಾಕ್: 2ನೇ ಟೆಸ್ಟ್ನಿಂದ ಟೀಮ್ ಇಂಡಿಯಾದ 3 ಆಟಗಾರರು ಹೊರಕ್ಕೆ
(Mithali Raj is celebrating 39th birthday today)