Happy Hormones: ಹ್ಯಾಪಿ ಹಾರ್ಮೋನ್​ಗಳು ಎಂದರೇನು? ಹೆಚ್ಚಿಸಿಕೊಳ್ಳುವುದು ಹೇಗೆ? | Happy Hormones: What They Are and How to Boost Them Know More


Happy Hormones:ತೂಕ ಇಳಿಕೆಯಿಂದ ಹಿಡಿದು ಒತ್ತಡ ನಿರ್ವಹಣೆಯವರೆಗೂ ಹಾರ್ಮೋನ್​( Hormone)ಗಳು ಪ್ರಮುಖ ಪಾತ್ರವಹಿಸುತ್ತವೆ. ಹಾರ್ಮೋನ್​ಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿವೆ.

ತೂಕ ಇಳಿಕೆಯಿಂದ ಹಿಡಿದು ಒತ್ತಡ ನಿರ್ವಹಣೆಯವರೆಗೂ ಹಾರ್ಮೋನ್​( Hormone)ಗಳು ಪ್ರಮುಖ ಪಾತ್ರವಹಿಸುತ್ತವೆ. ಹಾರ್ಮೋನ್​ಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿವೆ. ಮಾನಸಿಕ ಆರೋಗ್ಯ ವಿಚಾರಕ್ಕೆ ಬರುವುದಾದರೆ ಹಾರ್ಮೋನ್​ಗಳು ನಿಮ್ಮ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ.

ನಮಗೆ ಹಸಿವಾಗುವಂತೆ, ಹೊಟ್ಟೆ ತುಂಬಿದಂತೆನಿಸುವುದು, ಕೆಲಸ ಮಾಡುವ ಉತ್ಸಾಹ, ನಿರುತ್ಸಾಹ, ನಿದ್ರೆ, ಕಿರಿಕಿರಿ ಸೇರಿದಂತೆ ಬಹುತೇಕ ಮೂಡ್‌ಗಳು, ಕನಸುಗಳು, ನೆನಪುಗಳು, ಗುರಿಯೆಡೆ ಗಮನ, ಕಡೆಗೆ ಸಂತೋಷವನ್ನು ಕೂಡಾ ನಿಯಂತ್ರಿಸುವುದು ಕೆಮಿಕಲ್ಹಾ ಮೆಸೆಂಜರ್ಗಳಾದ ಹಾರ್ಮೋನ್‌ಗಳು.

ಸಂತೋಷದ ವಿಷಯವೆಂದರೆ ನಮ್ಮ ದೇಹದಲ್ಲಿ ಸಂತೋಷ ಉಕ್ಕಿಸುವ ಹಾರ್ಮೋನ್‌ಗಳು ನಾಲ್ಕು ರೀತಿಯವು ಇವೆ. ನ್ಯೂರೋಟ್ರಾನ್ಸ್‌ಮಿಟರ್‌ಗಳ ಈ ಬ್ಯಾಂಡ್‌ಗಳನ್ನು ಮೆದುಳು ಉತ್ಪಾದಿಸುತ್ತದೆ.

ನಾಲ್ಕು ಹ್ಯಾಪಿ ಹಾರ್ಮೋನ್​ಗಳ ಕುರಿತು ಮಾಹಿತಿ
ಸೆರಟೋನಿನ್
ಇದು ನಮ್ಮ ಮೂಡ್, ನಿದ್ದೆ, ಹಸಿವು, ಜೀರ್ಣಕ್ರಿಯೆ, ಕಲಿವ ಸಾಮರ್ಥ್ಯ, ನೆನಪಿನ ಶಕ್ತಿಯನ್ನು ನಿಯಂತ್ರಿಸಬಲ್ಲದು. ಸೆರಟೋನಿನ್ ಕಡಿಮೆಯಾದಾಗಲೇ ನಾವು ಖಿನ್ನತೆಯತ್ತ ಜಾರುವುದು. ಹಾಗಾಗಿ ಆ್ಯಂಟಿ ಡಿಪ್ರೆಸೆಂಟ್ ಮಾತ್ರೆಗಳಲ್ಲಿ ಸೆರಟೋನಿನ್ ಬಳಸಲಾಗುತ್ತದೆ.

– ಚೆನ್ನಾಗಿ ವರ್ಕೌಟ್ ಮಾಡಿ ಇಲ್ಲವೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ.

– ಟ್ರಿಪ್ಟೋಫಾನ್ ಹೆಚ್ಚಿರುವ ಆಹಾರಗಳಾದ ಹಾಲನ್ನು ಹೆಚ್ಚಾಗಿ ಸೇವಿಸಿ. ಅದರಲ್ಲೂ ಮಲಗುವ ಮುನ್ನ ಸೇವಿಸುವುದೊಳಿತು.

– ಒಮೆಗಾ 3 ಹೆಚ್ಚಿರುವ ಆಹಾರಗಳಾದ ತುಪ್ಪ, ನಟ್ಸ್, ಬೇಳೆಕಾಳುಗಳನ್ನು ಹೆಚ್ಚು ಸೇವಿಸಿ.

– ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಡಿ.

ಡೋಪಮೈನ್
ಇದು ಫೀಲ್ ಗುಡ್ ಹಾರ್ಮೋನ್. ಕಲಿಯುವಿಕೆ, ನೆನಪುಗಳು, ಮೋಟಾರ್ ಚಟುವಟಿಕೆಗಳಲ್ಲೆಲ್ಲ ಸಂತೋಷ ಸಿಗಲು ಈ ಹಾರ್ಮೋನ್ ಬಿಡುಗಡೆಯೇ ಕಾರಣ. ಹಲವಾರು ಗುರಿಗಳನ್ನು ಹೊಂದುವುದು, ಅವನ್ನು ಸಾಧಿಸುತ್ತಾ ಹೋಗುವುದರರಿಂದ ಡಿಲಿಶಿಯಸ್ ಡೋಪಮಿನ್ ಬಿಡುಗಡೆ ಹೆಚ್ಚುತ್ತದೆ. ಇದನ್ನು ಹೆಚ್ಚಿಸಲು

– ಪ್ರಾಣಾಯಾಮ ಅಭ್ಯಾಸ ಮಾಡಿ.

– ಚೆನ್ನಾಗಿ ನಿದ್ರಿಸಿ.

– ಪನೀರ್, ನಟ್ಸ್, ಬೀನ್ಸ್ ಹೆಚ್ಚಾಗಿ ಸೇವಿಸಿ.

– ಸೂರ್ಯನ ಬೆಳಕಿನಲ್ಲಿ ಹೆಚ್ಚು ಸಮಯ ಕಳೆಯಿರಿ.

– ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಕೆಲಸಗಳಲ್ಲಿ ತೊಡಗಿಕೊಳ್ಳಿ.

ಆಕ್ಸಿಟೋಸಿನ್
ಲವ್ ಹಾರ್ಮೋನ್ ಎಂಬ ಹೆಗ್ಗಳಿಕೆ ಪಡೆದಿರುವ ಆಕ್ಸಿಟೋಸಿನ್ ಮಗುವಿಗೆ ಜನ್ಮ ಕೊಡಲು, ಎದೆಹಾಲು ಕೊಡಲು, ಗಟ್ಟಿಯಾದ ಪೇರೆಂಟ್- ಚೈಲ್ಡ್ ಬಾಂಡಿಂಗ್ ಬೆಳೆಯಲು ಬೇಕಾಗುತ್ತದೆ. ನಂಬಿಕೆ, ಸಹಾನುಭೂತಿ, ಸಂಬಂಧಗಳ ಬಾಂಡಿಂಗ್ ಎಲ್ಲದರಲ್ಲೂ ಈ ಹಾರ್ಮೋನ್‌ಗಳ ಪಾತ್ರವಿರುತ್ತದೆ. ಅಂದರೆ, ಸಂಬಂಧಗಳನ್ನು ಬೆಸೆವಲ್ಲಿ ಆಕ್ಸಿಟೋಸಿನ್ ಎತ್ತಿದ ಕೈ. ಮುದ್ದಾಡುವುದು, ಮುತ್ತು ಕೊಡುವುದು, ಸೆಕ್ಸ್ ಸೇರಿದಂತೆ ದೈಹಿಕವಾಗಿ ಪ್ರೀತಿ ತೋರಿದಂತೆಲ್ಲ ಆಕ್ಸಿಟೋಸಿನ್ ಮಟ್ಟ ಹೆಚ್ಚುತ್ತದೆ.

– ವಾರಕ್ಕೊಮ್ಮೆಯಾದರೂ ಮಸಾಜ್ ಮಾಡಿಸಿಕೊಳ್ಳಿ.

– ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ.

– ಯೋಗ ಮತ್ತು ರಿಲ್ಯಾಕ್ಸೇಶನ್ ಅಭ್ಯಾಸ ಮಾಡಿ.

– ಪ್ರೀತಿಪಾತ್ರರೊಂದಿಗೆ ಕುಳಿತು ಆಹಾರ ಸೇವಿಸಿ.

ಎಂಡೋರ್ಫಿನ್
ಒತ್ತಡ ಅಥವಾ ಕಿರಿಕಿರಿಯಾದಾಗ ಇವು ಬಿಡುಗಡೆಯಾಗಿ ಸಮಾಧಾನ ಮಾಡುತ್ತವೆ. ತಿನ್ನುವುದು, ವರ್ಕೌಟ್, ಸಂಭೋಗ ಸಮಯದಲ್ಲೂ ಇವುಗಳ ಉತ್ಪತ್ತಿ ಹೆಚ್ಚುತ್ತದೆ. ಇವು ದೇಹದ ನೈಸರ್ಗಿಕ ಪೇನ್ ಕಿಲ್ಲರ್ ಇದ್ದಂತೆ.

– ಖಾರಖಾರವಾದ ಆಹಾರ ಸೇವಿಸಿ.

– ಪ್ರತಿದಿನ ವರ್ಕೌಟ್ ಮಾಡಿ

ಈ ಮೇಲಿನ ಲೇಖನದಲ್ಲಿರುವ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *