Happy Teachers Day: ಬರಹಕ್ಕೆ ಸ್ಪೂರ್ತಿ ನೀಡಿದ ಗುರುವನ್ನು ಮರೆಯಲು ಸಾಧ್ಯವೇ | Happy Teachers Day: Can you forget the teacher who inspired you to write?


ಡಿಗ್ರಿ ಲೈಫ್ ಅದೊಂಥರಾ ಮೋಜು ಮಸ್ತಿ ಸ್ವಲ್ಪ ಕುಸ್ತಿ ನಗುವೇ ಜಾಸ್ತಿ. ಕ್ಯಾಪಸ್​ನಲ್ಲಿ ಸುತ್ತಾಟ ಅಲೆದಾಟ ಕ್ಲಾಸ್ ಗೆ ಹೋಗದೆ ಕೆಲವೊಮ್ಮೆ ಹುಡುಗಾಟ ಹೀಗೆ ಡಿಗ್ರಿ ಕಾಲೇಜಿನಲ್ಲಿ ನಾ ಕಳೆದ ಅಂದಿನ ದಿನಗಳು ಇಂದು ನೆನಪಾಗುತ್ತದೆ.

ಗುರುವು ಬಾಳಿಗೆ ಕನ್ನಡಿ ಹಿಡಿದು ಶಿಕ್ಷಣವೆಂಬ ಮಂತ್ರವನ್ನು ಭೋಧಿಸಿ ನಮ್ಮೆಲ್ಲರನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡು ಹೋಗುವ ದಾರಿ ದೀಪ. ಜ್ಞಾನವೆಂಬ ಜ್ಯೋತಿ ಮನದೊಳಗೆ ಹಚ್ಚಿ ಅದು ಆರದಂತೆ ಸದಾ ಜೋಪಾನ ಮಾಡುವ ಜೀವ ಗುರು. ಇಂಥಹಾ! ಗುರುವಿನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಮನೆಯು ಮೊದಲ ಪಾಠಶಾಲೆಯಾದರೆ ತಾಯಿ ಮೊದಲ ಗುರು. ಆದರೆ ಬದುಕಿನ ತಿರುವಿಗೆ ಮುಖ್ಯ ಕಾರಣವಾಗುವ ಇನ್ನೊಂದು ಶಕ್ತಿ ಯಾವುದಾದರು ಇದ್ದರೆ ಕೇಳಿದರೆ ಅದು ಶಿಕ್ಷಕರು. ನಾನು ಅಂಗನವಾಡಿಯಿಂದ ಡಿಗ್ರಿ ಕಾಲೇಜಿನವರೆಗೆ ಅನೇಕ ಶಿಕ್ಷಕರನ್ನು ಕಣ್ತುಂಬಿಕೊಂಡಿದ್ದೇನೆ. ಅದರಲ್ಲೂ ಪ್ರಮುಖವಾಗಿ ನಾನು ಈಗ ಬರೆಯುತ್ತಿರುವ ಪದಗಳ ಹಿಂದೆ ಅಡಗಿರುವ ಪ್ರೇರಣೆ ಸದಾ ಪ್ರೋತ್ಸಾಹ ಕೊಡುವ ಆ ನನ್ನ ನೆಚ್ಚಿನ ಗುರುಗಳ ಬಗ್ಗೆ ವಿವರಿಸಲು ಹೆಮ್ಮೆ ಪಡುವೇ .

ಡಿಗ್ರಿ ಲೈಫ್ ಅದೊಂಥರಾ ಮೋಜು ಮಸ್ತಿ ಸ್ವಲ್ಪ ಕುಸ್ತಿ ನಗುವೇ ಜಾಸ್ತಿ. ಕ್ಯಾಪಸ್​ನಲ್ಲಿ ಸುತ್ತಾಟ ಅಲೆದಾಟ ಕ್ಲಾಸ್ ಗೆ ಹೋಗದೆ ಕೆಲವೊಮ್ಮೆ ಹುಡುಗಾಟ ಹೀಗೆ ಡಿಗ್ರಿ ಕಾಲೇಜಿನಲ್ಲಿ ನಾ ಕಳೆದ ಅಂದಿನ ದಿನಗಳು ಇಂದು ನೆನಪಾಗುತ್ತದೆ. ಡಿಗ್ರಿ ಕಾಲೇಜಿನಲ್ಲಿ ಎಲ್ಲಾ ಗುರುಗಳು ಕಂಡರೆ ಅಚ್ಚು ಮೆಚ್ಚು ಆದರೆ ಬಾಳೆಂಬ ಪಯಣಕ್ಕೆ ಹೊಸ ಮೆರುಗನ್ನು ನೀಡಿದ ಕೀರ್ತಿ ನಾನಾಯಿತು ನನ್ನ ಪಾಡಾಯಿತು ಎನ್ನುವ ನನಗೆ ನಿನ್ನೊಳಗೂ ಒಂದು ಪ್ರತಿಭೆಯಿದೆ ಗಿರೀಶ್ ಎಂದು ಬೆನ್ನುತಟ್ಟಿದವರು. ನನ್ನ ಬರವಣಿಗೆ ಕೌಶಲ್ಯವನ್ನು ಅರಿತು ಅಕ್ಷರ ಭಂಡಾರದ ಆಳ ಅಗಲವನ್ನು ತಿಳಿಸಿದವರು ಬದುಕು ಬಂಗಾರ ಮಾಡಿದ ದೇವರು ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರು ಇಲ್ಲಿನ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಗುರು ಸಾರ್.

ನಿಜಕ್ಕೂ ನನಗೆ ಬರವಣಿಗೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ ಕೊರಾನ ಕಾಲದಲ್ಲಿ ಬೋರ್ ಆಗ್ತಿತ್ತು ಅದಕ್ಕೆ ಹಾಗೊಂದು ಹೀಗೊಂದು ಕವನ ಬರೆದು ಸರ್​ಗೆ ಕಳಿಸುತ್ತಿದ್ದೆ. ಇದನ್ನು ಓದಿ ಅವರು ಚೆನ್ನಾಗಿದೆ, ನೀನು ಕವನದ ಜೊತೆ ಲೇಖನ ಬರಿ. ಕಥೆ ಕಾದಂಬರಿ ಹೆಚ್ಚು ಹೆಚ್ಚು ಓದು. ಲೇಖನ ಸತ್ಯಾಂಶಗಳಿಂದ ಕೂಡಿರಬೇಕು. ಎನ್ನುವ ವಚನ ಬಾಳು ಬೆಳಗುವಂತೆ ಮಾಡಿತು. ಒಂದೊಂದೇ ಲೇಖನಗಳನ್ನು ಬರೆಯಲು ಶುರು ಮಾಡಿದೆ.

ಆರಂಭದಲ್ಲಿ ಹಲವಾರು ತಪ್ಪುಗಳಾದವು ಮುಂದೆ ಸರಿಯಾಯ್ತು. ಇದಕ್ಕೆ ಸಾರ್ ನಿಂದ ಅಕ್ಷರ ತಪ್ಪಿಗೆ ಬೈಗುಳ ತಿಂದಿದ್ದೇನೆ ಆದರೆ ಪತ್ರಿಕೆಗಳಲ್ಲಿ ಅಂತರ್ಜಾಲಗಳಲ್ಲಿ ನನ್ನ ಲೇಖನ ಪ್ರಕಟವಾದಾಗ ತುಂಬಾನೇ ಖುಷಿಯಾಗುತ್ತಿತ್ತು. ಅದನ್ನು ಸಾರ್ ಮೊದಲೇ ವಾಟ್ಸಪ್ ಸ್ಟೇಟಸ್ ಹಾಕುತ್ತಿದ್ದರು. ಕಾಲೇಜು ಗೆಳೆಯರು ನನ್ನ ಲೇಖನವನ್ನು ನೋಡಿ ನನ್ನನ್ನು ಕವಿ ಎಂದು ಕರೆಯುತ್ತಿದ್ದರು. ಅಧ್ಯಾಪಕರು ನನ್ನ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಕೆಂಪು ಕೋಟೆ ವಿಶ್ವ ವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಗಿರೀಶ್ ಪಿಎಂ ಎನ್ನುವ ಲೇಖಕನ ಉಗಮಕ್ಕೆ ಗುರು ಪ್ರಸಾದ್ ಸಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾಲೇಜಿನಲ್ಲಿ ಏನಾದರೂ ಹೆಸರು ಮಾಡಿದ್ರೆ ಅದು ನೀವು ಕೊಟ್ಟ ಬರಹದ ದೀಕ್ಷೆ ಸರ್. ನಿಮ್ಮ ಸೇವೆಯನ್ನು ಅನುದಿನವು ಈ ಮನ ನೆನೆಯುತ್ತದೆ ಮಿಸ್ ಯು ಸಾರ್ .

ಗಿರೀಶ್ ಪಿಎಂ, ತೃತೀಯ ಬಿಎ ಪತ್ರಿಕೋದ್ಯಮ ವಿಭಾಗ

ವಿಶ್ವವಿದ್ಯಾಲಯ ಕಾಲೇಜು ಮಂಗಳೂರು

ತಾಜಾ ಸುದ್ದಿ

TV9 Kannada


Leave a Reply

Your email address will not be published.