Post Office: ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲು, ಎಲ್ಲಾ ಅಂಚೆ ಕಛೇರಿಗಳು 2022 ರ ಸ್ವಾತಂತ್ರ್ಯ ದಿನದವರೆಗೆ ಪ್ರತಿ ದಿನವೂ, ರಜೆ ಇಲ್ಲದೆ ಕೆಲಸ ಮಾಡುತ್ತದೆ.

ಆಗಸ್ಟ್ 15 ರವರೆಗೆ ಎಲ್ಲಾ ಅಂಚೆ ಕಚೇರಿಗಳು ಎಲ್ಲಾ ದಿನಗಳಲ್ಲೂ ಕಾರ್ಯನಿರ್ವಹಿಸುತ್ತವೆ
ಹರ್ ಘರ್ ತಿರಂಗ ಅಭಿಯಾನ: ಸ್ವಾತಂತ್ರ್ಯ ದಿನದವರೆಗೆ ಎಲ್ಲಾ ದಿನಗಳಲ್ಲಿ ಅಂಚೆ ಕಚೇರಿಗಳು (Post Office) ತೆರೆದಿದ್ದು, ಕಾರ್ಯ ನಿರ್ವಹಿಸುತ್ತವೆ. ಇದು ಹರ್ ಘರ್ ತಿರಂಗಾ ಅಭಿಯಾನದ (Har Ghar Tiranga Campaign) ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ (National Flags) ಮಾರಾಟ ಮತ್ತು ವಿತರಣೆಯನ್ನು ಸುಗಮಗೊಳಿಸುತ್ತದೆ (Independence Day 2022).
ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರೀಯ ಧ್ವಜಗಳ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲು, ಎಲ್ಲಾ ಅಂಚೆ ಕಛೇರಿಗಳು 2022 ರ ಸ್ವಾತಂತ್ರ್ಯ ದಿನದವರೆಗೆ ಪ್ರತಿ ದಿನವೂ, ರಜೆ ಇಲ್ಲದೆ ಕೆಲಸ ಮಾಡುತ್ತದೆ.
ದೇಶದಾದ್ಯಂತ ಎಲ್ಲಾ ವಿತರಣಾ ಸೇವಾ ಅಂಚೆ ಕಚೇರಿಗಳು ಮತ್ತು ಇತರ ಪ್ರಮುಖ ಅಂಚೆ ಕಚೇರಿಗಳು ಈ ಸಾರ್ವಜನಿಕ ಅಭಿಯಾನವನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಸಾರ್ವಜನಿಕ ರಜಾ ದಿನಗಳಲ್ಲಿ ಅಂದರೆ 7, 9 ಮತ್ತು 14ನೇ ಆಗಸ್ಟ್ 2022 ರಂದು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಎಲ್ಲಾ ಅಂಚೆ ವಿತರಣೆ ಸೇವಾ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಅಂಚೆ ಇಲಾಖೆ ತಿಳಿಸಿದೆ.