Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್​ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್ | Hardik Pandya Loved Entrepreneur Veera Pahariyas Gift Post IPL 2022 Win

Hardik Pandya: ಐಪಿಎಲ್‌ಗೂ ಮುನ್ನ ನಿರಂತರವಾಗಿ ಪ್ರಶ್ನೆಗೆ ಒಳಗಾಗಿದ್ದ ಹಾರ್ದಿಕ್, ಆಲ್‌ರೌಂಡರ್ ಮಾತ್ರವಲ್ಲದೆ ನಾಯಕನಾಗಿಯೂ ತನ್ನನ್ನು ತಾನು ಸಾಬೀತುಪಡಿಸಿದ್ದರು.

Jun 05, 2022 | 3:30 PM

TV9kannada Web Team

| Edited By: pruthvi Shankar

Jun 05, 2022 | 3:30 PM
ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡಿದ ಹಾರ್ದಿಕ್ ಪಾಂಡ್ಯ ಈ ದಿನಗಳಲ್ಲಿ ವಿಶೇಷ ಗೆಲುವಿನ ಸಂಭ್ರಮದಲ್ಲಿದ್ದಾರೆ. ಐಪಿಎಲ್‌ಗೂ ಮುನ್ನ ನಿರಂತರವಾಗಿ ಪ್ರಶ್ನೆಗೆ ಒಳಗಾಗಿದ್ದ ಹಾರ್ದಿಕ್, ಆಲ್‌ರೌಂಡರ್ ಮಾತ್ರವಲ್ಲದೆ ನಾಯಕನಾಗಿಯೂ ತನ್ನನ್ನು ತಾನು ಸಾಬೀತುಪಡಿಸಿದ್ದರು.

ಈ ಗೆಲುವಿಗೆ ಪ್ರತಿಯಾಗಿ ಹಾರ್ದಿಕ್​ಗೆ ವಿಶೇಷ ಉಡುಗೊರೆ ಸಿಕ್ಕಿದೆ. ವೀರ್ ಪಹಾಡಿಯಾ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ಉದ್ಯಮಿ. ಅವರು ಹಾರ್ದಿಕ್‌ಗೆ ಗುಜರಾತ್ ಟೈಟಾನ್ಸ್‌ನ ಲಾಂಛನದ ವಿನ್ಯಾಸದಲ್ಲಿ ಮಾಡಿದ ಲಾಕೆಟ್ ಅನ್ನು ಉಡುಗೊರೆಯಾಗಿ ನೀಡಿದರು.

Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್​ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್

ಈ ಉಡುಗೊರೆಯ ವೀಡಿಯೊವನ್ನು ಹಂಚಿಕೊಂಡ ಹಾರ್ದಿಕ್, ನನಗೆ ಇದು ತುಂಬಾ ಇಷ್ಟವಾಗಿದೆ. ಧನ್ಯವಾದ ನನ್ನ ಸಹೋದರ ವೀರ್ ಪಹಾಡಿಯಾ ಎಂದು ಬರೆದಿದ್ದಾರೆ. ಲಾಕೆಟ್‌ನಲ್ಲಿ ಗುಜರಾತ್ ಟೈಟಾನ್ಸ್‌ನ ಲಾಂಛನವನ್ನು ಒಂದು ಬದಿಯಲ್ಲಿ ಮುದ್ರಿಸಲಾಗಿದ್ದರೆ, ಮತ್ತೊಂದೆಡೆ ‘ಈ ತಂಡವು ಐಪಿಎಲ್ 2022 ರ ಚಾಂಪಿಯನ್’ ಎಂದು ಬರೆಯಲಾಗಿದೆ.

Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್​ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್

ಇದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಇಡೀ ತಂಡವನ್ನು ಭೇಟಿಯಾಗಿದ್ದರು ಮತ್ತು ಈ ಸಂದರ್ಭದಲ್ಲಿ ಅವರು ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಐಪಿಎಲ್ ಚಾಂಪಿಯನ್ ಆದ ನಂತರ ಗುಜರಾತ್ ಟೈಟಾನ್ಸ್ ಅಹಮದಾಬಾದ್‌ನಲ್ಲಿ ರೋಡ್ ಶೋ ನಡೆಸುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿತು.

Hardik Pandya: ಐಪಿಎಲ್ ಚಾಂಪಿಯನ್ ಹಾರ್ದಿಕ್​ಗೆ ಉದ್ಯಮಿಯೊಬ್ಬರಿಂದ ಸಿಕ್ತು ಸ್ಪೆಷಲ್ ಗಿಫ್ಟ್; ಫೋಟೋ ವೈರಲ್

ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರಲ್ಲಿ ಹಾರ್ದಿಕ್ ಕೂಡ ಒಬ್ಬರು. ಅವರು 44.27 ರ ಬ್ಯಾಟಿಂಗ್ ಸರಾಸರಿಯಲ್ಲಿ 487 ರನ್ ಗಳಿಸಿದರು. ಈ ವೇಳೆ ಹಾರ್ದಿಕ್ ಸ್ಟ್ರೈಕ್ ರೇಟ್ ಕೂಡ 131.26 ಆಗಿತ್ತು. ಈ ಋತುವಿನಲ್ಲಿ ಅವರು ನಾಲ್ಕು ಅರ್ಧಶತಕಗಳನ್ನು ಗಳಿಸಿದರು. ಈ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾದಲ್ಲಿಯೂ ಸ್ಥಾನ ಪಡೆದರು.

Most Read Stories

TV9 Kannada

Leave a Reply

Your email address will not be published.