Hardik Pandya: ರೋಡ್​ನಲ್ಲಿ ಐಪಿಎಲ್ ಕಪ್ ಹಿಡಿದು ಹಾರ್ದಿಕ್ ಪಾಂಡ್ಯ ಏನು ಮಾಡಿದ್ರು ನೋಡಿ | Hardik Pandya with Gujarat Titans players celebrate their triumph in the IPL 2022 with a roadshow Photo Viral


Hardik Pandya: ರೋಡ್​ನಲ್ಲಿ ಐಪಿಎಲ್ ಕಪ್ ಹಿಡಿದು ಹಾರ್ದಿಕ್ ಪಾಂಡ್ಯ ಏನು ಮಾಡಿದ್ರು ನೋಡಿ

Gujarat Titans Roadshow IPL 2022

Gujarat Titans, IPL 2022 Final: ಸೋಮವಾರ ಕೂಡ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಸಂಭ್ರಮಾಚರಣೆ ಭರ್ಜರಿ ಆಗಿ ನಡೆಯಿತು. ಹಾರ್ದಿಕ್ ಪಾಂಡ್ಯ ಐಪಿಎಲ್ ಕಪ್ ಎತ್ತಿ ಹಿಡಿದು ಇತರೆ ಆಟಗಾರರೊಂದಿಗೆ ರೋಡ್ ಶೋ ನಡೆಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ​ ಚಾಂಪಿಯನ್ ಪಟ್ಟಕ್ಕೆ ಹೊಸ ತಂಡವೊಂದು ಸೇರ್ಪಡೆಯಾಗಿದೆ. ತನ್ನ ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡ ಕಪ್ ಎತ್ತಿ ಹಿಡಿದಿದೆ. ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರು ತಂಡದಲ್ಲಿ ಇಲ್ಲದಿದ್ದರೂ, ಅನುಭವಿ ನಾಯಕ ಆಗಿರದಿದ್ದರೂ ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ತೋರಿದ ಜಿಟಿ ಫೈನಲ್​​ನಲ್ಲೂ ಗೆದ್ದು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ್ ರಾಯಲ್ಸ್ (Rajastan Royals) ವಿರುದ್ಧ 7 ವಿಕೆಟ್​ಗಳಿಂದ ಗೆದ್ದು ಬೀಗಿದ ಜಿಟಿ ಆಟಗಾರರ ಖುಷಿಗೆ ಪಾರವೇ ಇರಲಿಲ್ಲ. ಹಾರ್ದಿಕ್ ಪತ್ನಿ ನತಾಶ ಮೈದಾನಕ್ಕೆ ಓಡಿ ಬಂದು ಪಾಂಡ್ಯ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಪಂದ್ಯ ಮುಗಿದ ಬಳಿಕ, “ನೀವು ಒಂದು ತಂಡವಾಗಿ ಆಡಿದರೆ, ನಿಮ್ಮ ಜೊತೆಗಿರುವ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ ಏನು ಬೇಕಾದರೂ ಸಾಧಿಸಿಬಹುದು. ವಿಶ್ವದ ಯಾವುದೇ ತಂಡಕ್ಕೆ ಇದೊಂದು ಉತ್ತಮ ಉದಾಹರಣೆ,” ಎಂದು ಹಾರ್ದಿಕ್ ಹೇಳಿದರು.

ಸೋಮವಾರ ಕೂಡ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಸಂಭ್ರಮಾಚರಣೆ ಭರ್ಜರಿ ಆಗಿ ನಡೆಯಿತು. ಹಾರ್ದಿಕ್ ಪಾಂಡ್ಯ ಐಪಿಎಲ್ ಕಪ್ ಎತ್ತಿ ಹಿಡಿದು ಇತರೆ ಆಟಗಾರರೊಂದಿಗೆ ರೋಡ್ ಶೋ ನಡೆಸಿದರು. ಸಬರ್ಮತಿ ನದಿ ಮಾರ್ಗದಲ್ಲಿ ಸಾಗಿದ ರೋಡ್ ಶೋನಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಬಳಿಕ ಗುಜರಾತ್‌ ಮುಖ್ಯಮಂತ್ರಿ ಭುಪೇಂದ್ರಭಾಯ್‌ ಪಟೇಲ್‌ ಅವರು ವಿಜೇತ ತಂಡವನ್ನು ಸಮ್ಮಾನಿಸಿದರು.

IPL 2022: ಮೆಗಾ ಹರಾಜಿನಲ್ಲಿ ಅಧಿಕ ಹಣಕ್ಕೆ ಹರಾಜಾಗಿದ್ದ ಈ 6 ಆಟಗಾರರ ಪ್ರದರ್ಶನ ಹೇಗಿತ್ತು? ಈ ರಿಪೋರ್ಟ್​ ನೋಡಿ

ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ಹಾರ್ದಿಕ್, “ನಾನು ಮತ್ತು ಆಶಿಶ್ ನೆಹ್ರಾ ಸರಿಯಾದ ಬ್ಯಾಟರ್ ಮತ್ತು ಬೌಲರ್​ಗಳನ್ನು ಆಡಿಸುವ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ನಾನು ನೋಡಿದ ಹಾಗೆ ಟಿ20 ಕ್ರಿಕೆಟ್ ಬ್ಯಾಟರ್​ಗಳ ಪಂದ್ಯ. ಆದರೆ, ಬೌಲರ್​​ಗಳು ನಿಮಗೆ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಅನೇಕ ಪಂದ್ಯಗಳಲ್ಲಿ ಜಯ ಸಾಧಿಸಿದ್ದೇವೆ. ಆದರೆ, ಪಂದ್ಯ ಮುಗಿದ ಬಳಿಕ ಪ್ರತಿ ಬಾರಿ ನಾವು ಏನು ತಪ್ಪು ಮಾಡಿದೆವು? ಇಲ್ಲಿ ಉತ್ತಮ ಪಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. 5 ಫೈನಲ್ ಪಂದ್ಯವನ್ನು ಗೆದ್ದ ನಾನು ಅದೃಷ್ಠ ಎನಿಸುತ್ತದೆ. ಇದು ತುಂಬಾನೆ ವಿಶೇಷ. ಮೊದಲ ಆವೃತ್ತಿಯಲ್ಲೇ ನಾವು ಪ್ರಶಸ್ತಿ ಗೆದ್ದಿರುವುದರಿಂದ ಮುಂಬರುವ ಪೀಳಿಗೆಯಲ್ಲೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ,” ಎಂದು ಹೇಳಿದ್ದಾರೆ.

“ಆಶಿಶ್ ನೆಹ್ರಾಗೆ ಗೆಲುವಿನ ಮುಖ ಒಲಿದಿದೆ, ಏಕೆಂದರೆ ಅವರು ಪ್ರತಿಯೊಬ್ಬ ಆಟಗಾರನೊಂದಿಗೆ ತುಂಬಾ ಕಠಿಣವಾಗಿ ಕೆಲಸ ಮಾಡಿದರು. ಅವರು ಪ್ರತಿಯೊಬ್ಬ ಬ್ಯಾಟ್ಸ್‌ಮನ್, ಬೌಲರ್‌ನತ್ತ ಗಮನ ಹರಿಸಿದರು. ನೆಹ್ರಾ ಕೋಚಿಂಗ್​ನಲ್ಲಿ ಅಭ್ಯಾಸ ಮಾಡುತ್ತಿದ್ದ ಪ್ರತಿಯೊಬ್ಬ ಆಟಗಾರನೂ ಅಭ್ಯಾಸದ ನಂತರ ಕ್ರೀಸ್‌ಗೆ ಹೋಗಿ ಬಾಲನ್ನು ಬ್ಯಾಟ್‌ ಮಧ್ಯದಲ್ಲಿ ಆಡಿ ಸಿಕ್ಸರ್ ಬಾರಿಸುವೆ ಎಂದು ಯೋಚಿಸುತ್ತಿದ್ದರು,” ಎಂಬುದು ಹಾರ್ದಿಕ್ ಮಾತು.

ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಮಾತನಾಡಿ, “ಗುಜರಾತ್ ತಂಡ ಆಡುವ ರೀತಿ ನನಗೆ ತುಂಬಾ ಖುಷಿ ತಂದಿದೆ. ಟ್ರೋಫಿ ಗೆದ್ದಿರುವುದು ಸರಿಯೇ ಆದರೆ ನಮ್ಮ ತಂಡ ಆಡುವ ರೀತಿ ನನಗೆ ಅತ್ಯಂತ ಖುಷಿ ತಂದಿದೆ ಎಂದರು. ಹುಡುಗರು ಆಟ ತೋರಿದ ರೀತಿ, ಪರಸ್ಪರ ಬೆರೆತ ರೀತಿ. ಮೊದಲ ಸೀಸನ್‌ನಲ್ಲಿ ಚಾಂಪಿಯನ್ ಆಗಿರುವುದು ಅದ್ಭುತವಾಗಿದೆ,” ಎಂದಿದ್ದಾರೆ.

ಇನ್ನು ಐಪಿಎಲ್ 2022 ಟೂರ್ನಿ ಮುಗಿಯುತ್ತಿದ್ದಂತೆ ಈ ಬಾರಿಯ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ರಚಿಸಲಾಗಿದೆ.

ಜಾಸ್‌ ಬಟ್ಲರ್‌, ಕೆಎಲ್‌. ರಾಹುಲ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ರಾಹುಲ್‌ ತ್ರಿಪಾಠಿ, ಹಾರ್ದಿಕ್‌ ಪಾಂಡ್ಯ (ನಾಯಕ), ದೀಪಕ್‌ ಹೂಡಾ, ಆಯಂಡ್ರೆ ರಸೆಲ್‌, ಉಮ್ರಾನ್‌ ಮಲಿಕ್‌, ವನಿಂದು ಹಸರಂಗ, ಮೊಹಮ್ಮದ್‌ ಶಮಿ, ಯುಜ್ವೇಂದ್ರ ಚಹಲ್‌.

TV9 Kannada


Leave a Reply

Your email address will not be published. Required fields are marked *