ವೇಟ್ಲಿಫ್ಟರ್ ಹರ್ಜಿಂದರ್ ಕೌರ್ (Harjinder Kaur) ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಕೌರ್ ಕಂಚಿಗೆ (Bronze ) ಕೊರಳೊಡ್ಡಿದ್ದಾರೆ.

Harjinder Kaur
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022ರ ಕಾಮನ್ವೆಲ್ತ್ ಕ್ರೀಡಾ (Commonwealth Games 2022) ಕೂಟದ ವೇಟ್ಲಿಫ್ಟಿಂಗ್ನಲ್ಲಿ ಭಾರತದ ಶಕ್ತಿ ಪ್ರದರ್ಶನ ಮುಂದುವರಿದಿದೆ. ವೇಟ್ಲಿಫ್ಟರ್ ಹರ್ಜಿಂದರ್ ಕೌರ್ (Harjinder Kaur) ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ 71kg ವಿಭಾಗದಲ್ಲಿ ಒಟ್ಟು 212 ಕೆಜಿ ಭಾರ ಎತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಕೌರ್ ಕಂಚಿಗೆ (Bronze ) ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಒಂಬತ್ತಕೇರಿದೆ. ವಿಶೇಷ ಎಂದರೆ ಇದುವರೆಗೆ ಬಂದಿರುವ 9 ಪದಕಗಳ ಪೈಕಿ ಆರು ಪದಕ ವೇಟ್ಲಿಫ್ಟಿಂಗ್ನಿಂದಲೇ ಆಗಿದೆ. ಸ್ನಾಚ್ ರೌಂಡ್ನಲ್ಲಿ ದಾಖಲೆಯ 93kg ಮತ್ತು 119kg ಎತ್ತಿದರೆ ಜೆರ್ಜ್ ರೌಂಡ್ನಲ್ಲಿ 119kg ಬಾರ ಎತ್ತುವ ಮೂಲಕ ಕೌರ್ ಕಂಚನ್ನು ಬಾಜಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಹರ್ಜಿಂದರ್ ಅವರಿಗೆ 90kg ಎತ್ತಲು ಸಾಧ್ಯವಾಗಲಿಲ್ಲ. ನಂತರ ಎರಡನೇ ಪ್ರಯತ್ನದಲ್ಲಿ ಯಶಸ್ವಿ ಕಂಡರು. ಸದ್ಯ ಭಾರತ ಒಂಬತ್ತು ಪದಕವನ್ನು ಬಾಜಿಕೊಂಡಿದ್ದು ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚನ್ನು ಖಾತೆಗೆ ಸೇರಿಸಿಕೊಂಡಿದೆ.