Hassan Politics: Bhavani Revanna have intrested to conteste in hassan but hd kumaraswamy said no | Hassan Politics: ಟಿಕೆಟ್​ಗೆ ಭವಾನಿ ರೇವಣ್ಣ ಪಟ್ಟು, ಕುಮಾರಸ್ವಾಮಿ ಪೆಟ್ಟು; ದೇವೇಗೌಡರ ಮುಂದೆ ನ್ಯಾಯ ಪಂಚಾಯ್ತಿ


ಹಾಸನದಿಂದ ಸ್ಪರ್ಧಿಸೋಕೆ ಭವಾನಿ ರೇವಣ್ಣ ಇಚ್ಚಿಸಿದ್ದು, ಆದರೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ನಿರಾಕರಿಸಿದ್ದು ಮೇಲ್ನೋಟಕ್ಕೆ ಜೆಡಿಎಸ್​ ಕುಟುಂಬದಲ್ಲೇ ಭಿನ್ನಾಬಿಪ್ರಾಯ ಮೂಡಿದಂತಾಗಿದೆ.

Hassan Politics: ಟಿಕೆಟ್​ಗೆ ಭವಾನಿ ರೇವಣ್ಣ ಪಟ್ಟು, ಕುಮಾರಸ್ವಾಮಿ ಪೆಟ್ಟು; ದೇವೇಗೌಡರ ಮುಂದೆ ನ್ಯಾಯ ಪಂಚಾಯ್ತಿ

ಭವಾನಿ ರೇವಣ್ಣ (ಎಡಚಿತ್ರ) ಹೆಚ್​ ಡಿ ಕುಮಾರಸ್ವಾಮಿ (ಬಲಚಿತ್ರ)

ಹಾಸನ: ಹಾಸನದಿಂದ ಸ್ಪರ್ಧಿಸೋಕೆ ಭವಾನಿ ರೇವಣ್ಣ (Bhavani Revanna) ಇಚ್ಚಿಸಿದ್ದು, ಆದರೆ ಮಾಜಿ ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ (HD Kumaraswamy) ನಿರಾಕರಿಸಿದ್ದಾರೆ. ನಿನ್ನೆ (ಜ.24) ಹಾಸನ ಕ್ಷೇತ್ರದಿಂದ ಟಿಕೇಟ್​ ನನಗೆ ನೀಡುತ್ತಾರೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಆದರೆ ಕುಮಾರಸ್ವಾಮಿ ಟಿಕೇಟ್​ ನೀಡುವುದು ಬೇಡ್ವೇ ಬೇಡ ಅಂತಿದ್ದಾರೆ. ಇನ್ನು ಭವಾನಿ ರೇವಣ್ಣ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಭವಾನಿ ರೇವಣ್ಣ ಸ್ವಯಂ ಟಿಕೆಟ್ ಘೋಷಿಸಿಕೊಂಡಿದ್ದಾರಾ? ಅಲ್ಲದೇ ಮಾಜಿ ಸಚಿವ, ಪತಿ ರೇವಣ್ಣ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ.  ಮಾಜಿ ಪ್ರಧಾನಿ ಹೆಚ್.ಡಿ.‌ದೇವೇಗೌಡರ (HD Devegowda) ಮನವೊಲಿಸಲು ರೇವಣ್ಣ ಮೂಲಕ ಕಸರತ್ತು ನಡೆಯುತ್ತಿದೆ.

ದೇವೇಗೌಡರ ಮತ್ತು ಕುಮಾರಸ್ವಾಮಿ ಅವರ ಜೊತೆ ಮಾತಾಡಿ ಟಿಕೆಟ್ ಕೊಡಿಸುವಂತೆ ಭವಾನಿ ರೇವಣ್ಣ ಹಠ  ಹಿಡಿದಿದ್ದಾರೆ. ಇನ್ನು ರೇವಣ್ಣ, ಪತ್ನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಒಪ್ಪುತ್ತಿಲ್ಲ.

ತಾಜಾ ಸುದ್ದಿ

ಭವಾನಿ ರೇವಣ್ಣಗೆ ಟಿಕೇಟ್ ಕೊಟ್ಟರೆ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ ಆರೋಪಕ್ಕೆ ಗುರಿಯಾಗುವ ಆತಂಕ ಇದೆ. 4 ಭಾರಿ ಶಾಸಕರಾಗಿ ಪಕ್ಷಕ್ಕೆ ದುಡಿದಿದ್ದ ದಿವಂಗತ ಹೆಚ್.ಎಸ್. ಪ್ರಕಾಶ್ ಕುಟುಂಬಕ್ಕೆ ದ್ರೋಹ‌ ಮಾಡಿದರು ಎಂಬ ಕಳಂಕ  ಬರುತ್ತದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡಿದಂತಾಗುತ್ತದೆ ಎಂದು ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆ ಕುಮಾರಸ್ವಾಮಿ ಹೆಚ್.ಪಿ. ಸ್ವರೂಪ್​ಗೆ ಟಿಕೆಟ್ ನೀಡುವ ಮನಸ್ಸು ಮಾಡಿದ್ದಾರೆ. ಇನ್ನು ಹೆಚ್.ಪಿ. ಸ್ವರೂಪ್, ದಿವಂಗತ ಮಾಜಿ ಶಾಸಕ ಹೆಚ್.ಎಸ್.‌ಪ್ರಕಾಶ್ ಅವರ ಪುತ್ರ.

 ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *