ಬೆಂಗಳೂರು: ಕೊರೊನಾ ಮಹಾಮಾರಿ ಆಘಾತದ ಜೊತೆಗೆ ಬ್ಲಾಕ್​ ಫಂಗಸ್​ ಕೂಡ ನಮ್ಮನ್ನ ಆತಂಕಕ್ಕೆ ನೂಕಿದೆ. ಈ ಹಿನ್ನೆಲೆ ನಗರದ ಹೆಚ್​ಸಿಜಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್​​ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಹೆಚ್​ಸಿಜಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಸ್ಟ್​​, ಕೊರೊನಾ ಟಾಸ್ಕ್​​ ಫೋರ್ಸ್​ ಸಮಿತಿ ಸದಸ್ಯ ಡಾ.ವಿಶಾಲ್ ರಾವ್.. ನಾವು ಹೆಚ್​​ಸಿಜಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್​ಗೆ ಸೀಮಿತ ಬೆಡ್​ಗಳೊಂದಿಗೆ ಟ್ರೀಟ್ಮೆಂಟ್ ಶುರು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬ್ಲಾಕ್ ಫಂಗಸ್​​ಗೆ ಕಾರಣಗಳು ಯಾವುದೆಂದರೆ ಒಂದು ಕೊರೊನಾ, ಎರಡನೆಯದು ಸ್ಟೆರಾಯ್ಡ್ ( ವೈದ್ಯರ ಸಲಹೆ ಇಲ್ಲದೇ ನಿರಂತರವಾಗಿ ಸ್ಟೆರಾಯ್ಡ್​ ತೆಗೆದುಕೊಳ್ಳುತ್ತಿರೋದು), ಮೂರನೇ ಕಾರಣ ಡಯಾಬಿಟಿಸ್​ನಿಂದ(ಕಂಟ್ರೋಲ್ ಇಲ್ಲದವರಿಗೆ) ನಾಲ್ಕನೇ ಕಾರಣ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇರೋದ್ರಿಂದ ಕಾಣಿಸಿಕೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

The post HCG ಆಸ್ಪತ್ರೆಯಲ್ಲಿ ಬ್ಲಾಕ್ ಫಂಗಸ್​ ಸೋಂಕಿಗೆ ಟ್ರೀಟ್ಮೆಂಟ್​ -ಡಾ.ವಿಶಾಲ್ ರಾವ್  appeared first on News First Kannada.

Source: newsfirstlive.com

Source link