ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ ರೋಡ್‌ಶೋ ರದ್ದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ಠಕ್ಕರ್ ನೀಡಲು ರೋಡ್‌ಶೋ ಆಯೋಜಿಸಲಾಗಿತ್ತು.

ಹೆಚ್.ಡಿ.ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ (H. D. Deve Gowda) ರೋಡ್‌ಶೋ ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗೆ ಠಕ್ಕರ್ ನೀಡಲು ರೋಡ್‌ಶೋ ಆಯೋಜಿಸಲಾಗಿತ್ತು. ಆದರೆ ಹೆಚ್.ಡಿ.ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ರದ್ದು ಪಡಿಸಿದ್ದು, ಮಾರ್ಚ್ 26ರಂದು ಕುಂಬಳಗೋಡಿನಿಂದ ಮೈಸೂರಿನವರೆಗೆ ರೋಡ್ ಶೋ ನಡೆಸಲು ಜೆಡಿಎಸ್ ಮುಂದಾಗಿತ್ತು. ರೋಡ್ ಶೋ ಕುರಿತು ಹೆಚ್.ಡಿ. ಕುಮಾರಸ್ವಾಮಿ (H. D. Kumaraswamy), ಸಿ.ಎಂ.ಇಬ್ರಾಹಿಂ ಇಂದು ಸಭೆ ನಡೆಸಿದ್ದರು. ರೋಡ್ ಶೋ ರದ್ದು ಮಾಡುವ ಕುರಿತು ಸಭೆಯಲ್ಲಿ ಕುಮಾರಸ್ವಾಮಿ ಚರ್ಚೆ ಮಾಡಿದ್ದು, ವೈದ್ಯರ ಸಲಹೆ ಮೇರೆಗೆ ರದ್ದು ಮಾಡಲಾಗಿದೆ ಎಂದು ತಿಳಿಸಿದರು. ರಾಜ್ಯದ 85 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದೆ. ಮಾ. 26ರಂದು ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶ ಆಯೋಜಿಸಿದ್ದು, ಕನಿಷ್ಠ 10 ಲಕ್ಷ ಅಭಿಮಾನಿಗಳು, ಮತದಾರರು ಸೇರಿಸಲು ನಿರ್ಧಾರ ಮಾಡಲಾಗಿದೆ. ಅಭ್ಯರ್ಥಿಗಳು, ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿದ್ದೇವೆ. ಯಾವ ರೀತಿ ಕೆಲಸ ಮಾಡಬೇಕೆಂದು ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಸಿನಿಮಾ ಮಾಡಿ ಹಣ ಮಾಡಬಹುದಷ್ಟೇ, ಬದಲಾವಣೆ ಸಾಧ್ಯವಿಲ್ಲ
ಉರಿಗೌಡ, ದೊಡ್ಡ ನಂಜೇಗೌಡ ಇದ್ರೋ ಇಲ್ಲವೋ ಗೊತ್ತಿಲ್ಲ. ಜೀವಂತವಿರುವ ಉರಿಗೌಡ, ನಂಜೇಗೌಡ ಬಗ್ಗೆ ಯೋಚಿಸಬೇಕು. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಈ ವಿಚಾರವನ್ನು ಎತ್ತಿಕಟ್ಟುತ್ತಿದೆ. ಉರಿಗೌಡ, ನಂಜೇಗೌಡ ಬಗ್ಗೆ ಹೇಳುವಂತೆ ಬಿಜೆಪಿಗೆ ಕೇಳಿದ್ಯಾರು ಎಂದು ಪ್ರಶ್ನಿಸಿದರು. ಈ ಘಟನೆಯಿಂದ ಒಕ್ಕಲಿಗರ ಮತ ಬದಲಾಗಲ್ಲ. ಯಾವ್ಯಾವ ವಿಷಯವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಉರಿಗೌಡ, ನಂಜೇಗೌಡ ಹೆಸರಲ್ಲಿ ಸಿನಿಮಾ ಮಾಡಿ ಹಣ ಮಾಡಬಹುದಷ್ಟೇ, ಬದಲಾವಣೆ ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದರು.