ಹಾಸನ: 2023ರ ಸಾರ್ವತ್ರಿಕ ಚುನಾವಣೆಗೆ ಹಾಸನ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಅಚ್ಚರಿಯ ಹೆಸರು ಕೇಳಿ ಬರುತ್ತಿದೆ. ಮಾಜಿ ಸಚಿವ, ಶಾಸಕ ಹೆಚ್.ಡಿ ರೇವಣ್ಣ ಪುತ್ರ ಡಾ. ಸೂರಜ್ ಅವರು ಹಾವೇರಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಜೆಡಿಎಸ್​​ ಕಾರ್ಯಕರ್ತರು ಕ್ಯಾಂಪೇನ್​ ಆರಂಭಿಸಿದ್ದಾರೆ.

ಶಾಸಕ ಹೆಚ್.ಡಿ ರೇವಣ್ಣ ಪುತ್ರ ಡಾ. ಸೂರಜ್ DCC ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೂರಜ್ ಪರ ಬೆಂಬಲಿಗರು ಸೂರಜ್ ಪರ ಪೋಸ್ಟ್​ ಮಾಡುತ್ತಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದಿಂದ ಸೂರಜ್ ಗೆ ಟಿಕೆಟ್ ನೀಡುವಂತೆ ಸೂರಜ್ ಅಭಿಮಾನಿ ಬಳಗದಿಂದ ಕ್ಯಾಂಪೇನ್ ಆರಂಭವಾಗಿದ್ದು, ಸೂರಕ್​ಗೆ ಟಿಕೆಟ್​ ನೀಡುವಂತೆ ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯನ್ನ ಜೆಡಿಎಸ್ ಭದ್ರ ಕೋಟೆಯಾಗಿಸಲು ಗೌಡರ ಕುಟುಂಬದ ಮತ್ತೊಂದು ಕುಡಿ ರಂಗ ಪ್ರವೇಶ ಅನಿವಾರ್ಯ ಬೆಂಬಲಿಗರ ವಾದವಾಗಿದೆ. ಸದ್ಯ 2023ರ ಚುನಾವಣೆಗೆ ಜೆಡಿಎಸ್ ಕಚೇರಿಯಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವ ಹೆಚ್​​​.ಡಿ.ಕುಮಾರಸ್ವಾಮಿ ಅವರು, ಸಂಕ್ರಾಂತಿ ವೇಳೆಗೆ ಜೆಡಿಎಸ್ ಪಕ್ಷದ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಹಾಸನ ಜಿಲ್ಲಾ ರಾಜಕೀಯದಲ್ಲಿ ತಂದೆ ರೇವಣ್ಣ ಶಾಸಕರಾಗಿದ್ರೆ, ತಾಯಿ ಭವಾನಿ ಜಿಲ್ಲಾ ಪಂಚಾಯತ್ ಸದಸ್ಯರು ಜೊತೆಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಸಹೋದರ ಪ್ರಜ್ವಲ್ ರೇವಣ್ಣ ಸಂಸದರಾಗಿ ಆಯ್ಕೆ ಆಗಿದ್ದಾರೆ. ಉಳಿದಂತೆ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆಡಿಎಸ್​​ ಶಾಸಕರಿದ್ದು, ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಪ್ರೀತಂ ಗೌಡ ಅವರನ್ನು ಮಣಿಸಲು ಸೂರಜ್ ಸೂಕ್ತ ಅಭ್ಯರ್ಥಿ ಎಂಬುದು ಜೆಡಿಎಸ್​​ ಬೆಂಬಲಿಗರ ವಾದವಾಗಿದೆ.

ಮುಂಬರುವ ದಿನಗಳಲ್ಲಿ ಸೂರಜ್ ರೇವಣ್ಣ ಸ್ಪರ್ಧೆಗೆ ದೇವೇಗೌಡರು ಗ್ರೀನ್​ ಸಿಗ್ನಲ್​ ತೋರಿಸುತ್ತರಾ..? ಪ್ರೀತಂ ಗೌಡ ಎದುರು ಸೂರಜ್​ ಅಖಾಡಕ್ಕಿಳಿತಾರಾ..? ಎಂಬ ಪ್ರಶ್ನೆಗೆ ಜನವರಿ ವೇಳೆಗೆ ಸ್ಪಷ್ಟತೆ ಲಭಿಸುವ ಸಾಧ್ಯತೆ ಇದೆ.

The post HDD ಕುಟುಂಬದಿಂದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ -ಪ್ರೀತಂ ಗೌಡ ಎದುರು ಅಖಾಡಕ್ಕೆ? appeared first on News First Kannada.

Source: newsfirstlive.com

Source link