Health : ಬೇಸಿಗೆಯಲ್ಲಿ ಹಲ್ಲುನೋವು ಉಂಟಾಗಲು ಕಾರಣವೇನು? | How to maintain good dental health in the summer season


Health : ಬೇಸಿಗೆಯಲ್ಲಿ ಹಲ್ಲುನೋವು ಉಂಟಾಗಲು ಕಾರಣವೇನು?

ಸೌಜನ್ಯ : ಅಂತರ್ಜಾಲ

Dental Care in Summer : ಋತುಮಾನ ಬದಲಾದಂತೆ ನಮ್ಮ ಆಹಾರಕ್ರಮಗಳ ಮೇಲೆ ಗಮನ ಕೊಡಬೇಕು ಎನ್ನುವ ಪ್ರಜ್ಞೆ ನಮಗಿರುವುದಿಲ್ಲ. ತಕ್ಷಣದ ಪರಿಹಾರಗಳಿಗೆ ಮೊರೆ ಹೋಗುತ್ತೇವೆ. ಆದರೆ ಅದರ ಅಡ್ಡಪರಿಣಾಮ?

Dental Care in Summer: ಎಷ್ಟೋ ಸಲ ಋತು ಬದಲಾಗಿದೆ ಅದಕ್ಕಾಗಿ ನಮ್ಮ ದೇಹ ಹೀಗೆ ಪ್ರತಿಕ್ರಿಯಿಸುತ್ತದೆ  ಎಂಬುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಆದರೆ ಋತುಮಾನಗಳಿಗೆ ತಕ್ಕಂತೆ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ತಂದುಕೊಂಡರೆ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು. ಈಗ ಬೇಸಿಗೆ. ದೇಹ ತಂಪಾಗಿರಲೆಂದು ವಿವಿಧ ತಂಪು ಪಾನೀಯಗಳನ್ನು ಕುಡಿಯುತ್ತೇವೆ. ಸಿಹಿತಿಂಡಿಗಳನ್ನೂ ಸವಿಯುತ್ತೇವೆ. ಆದರೆ ಇದು ದೇಹವನ್ನು ತಂಪು ಮಾಡಬಲ್ಲುದೆ? ಆ ಕ್ಷಣಕ್ಕೆ ತಂಪಿನ ಅನುಭವ ಉಂಟಾಗಬಹುದು. ಆದರೆ ವ್ಯತಿರಿಕ್ತ ಪರಿಣಾಮಗಳು ಒಂದಿಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ತಂಪು ಪಾನೀಯ ಅಥವಾ ಸಿಹಿತಿಂಡಿಗಳು ನಿಮ್ಮ ಹಲ್ಲುಗಳ ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತವೆ ಎಂಬುದು ಗಮನದಲ್ಲಿರಲಿ. ಹಾಗಾಗಿ ನಿಮ್ಮ ಹಲ್ಲು ಮತ್ತು ಒಸಡುಗಳ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಸಿ ಇರುವ ಆಹಾರ ಪದಾರ್ಥ, ಹಣ್ಣುಗಳನ್ನು ಹೇರಳವಾಗಿ ಸೇವಿಸಿ ಹಲ್ಲುಗಳನ್ನು ರಕ್ಷಿಸಿಕೊಳ್ಳಿ.  ಅದರಲ್ಲೂ ಮಕ್ಕಳ ಹಲ್ಲುಗಳ ಆರೋಗ್ಯದ ವಿಷಯವಾಗಿ ಪೋಷಕರು ಎಚ್ಚರದಿಂದ ಇರಬೇಕು ಎಂದು ಎಚ್ಚರಿಸುತ್ತಿದ್ದಾರೆ.

ಈ ಬಿರುಬೇಸಿಗೆಗೆ ಸೋಡಾ, ತಂಪುಪಾನೀಯಗಳಿಗೆ ಮೊರೆ ಹೋಗುತ್ತೇವೆ ನಿಜ. ಆದರೆ ಇದು ಹಲ್ಲುಗಳ ಆರೋಗ್ಯವನ್ನೇ ಕಸಿದುಕೊಂಡುಬಿಡುತ್ತದೆ ಎಂಬ ಪ್ರಜ್ಞೆ ಸಾಕಷ್ಟು ಸಲ ನಮಗಿರುವುದಿಲ್ಲ. ಹಲ್ಲುಗಳ ಸಂದು, ವಸಡಿನಲ್ಲಿ ಶೇಖರಣಗೊಂಡ ರಾಸಾಯನಿಕ ಮತ್ತು ಸಕ್ಕರೆ ಅಂಶವು ದಂತಸಮಸ್ಯೆಗೆ ಕಾರಣವಾಗುತ್ತವೆ. ಆದ್ದರಿಂದ ತಾಜಾ ಹಣ್ಣುಗಳು ಮತ್ತು ಅವುಗಳಿಂದ ಮಾಡಿದ ಜ್ಯೂಸ್​ ಅನ್ನು ಕುಡಿಯುವುದೇ ಸೂಕ್ತ ಎನ್ನುವುದು ವೈದ್ಯಲೋಕದ ಅಭಿಪ್ರಾಯ.

TV9 Kannada


Leave a Reply

Your email address will not be published.