Health Tips: ಆಯುರ್ವೇದದ ಪ್ರಕಾರ ಊಟದ ನಂತರ ಈ ಕೆಲವು ಚಟುವಟಿಕೆಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ? | Health Tips These things do not doing post eating meal as per Ayurveda check in kannada


Health Tips: ಆಯುರ್ವೇದದ ಪ್ರಕಾರ ಊಟದ ನಂತರ ಈ ಕೆಲವು ಚಟುವಟಿಕೆಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ?

ಸಂಗ್ರಹ ಚಿತ್ರ

ಆಯುರ್ವೇದದ ಪ್ರಕಾರ ಊಟದ ನಂತರ ಕೆಲವು ಕೆಲಸಗಳನ್ನು ಮಾಡಬಾರದು. ಪುರಾತನ ವೈದ್ಯಕೀಯ ಪದ್ಧತಿಯ ಪ್ರಕಾರ, ಊಟದ ನಂತರ ನೀರು ಕುಡಿಯುವುದು ಅಥವಾ ರಾತ್ರಿಯ ಊಟದ ನಂತರ ಮಲಗುವುದು ಒಳ್ಳೆಯದಲ್ಲ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹೊರೆಯಾಗಬಹುದು. ಅದೇ ರೀತಿ ಹೊಟ್ಟೆ ತುಂಬ ತಿಂದ ನಂತರ 100 ಹೆಜ್ಜೆ ನಡೆಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ದೂರದವರೆಗೆ ನಡೆಯುವುದು ಚಯಾಪಚಯ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳಲು ತೊಂದರೆ ಉಂಟು ಮಾಡುತ್ತದೆ. ಆಯುರ್ವೇದ ತಜ್ಞೆ ಡಾ. ದೀಕ್ಷಾ ಅವರು ನೀವು ಊಟದ ನಂತರ ಮಲಗುವುದು, ನೀರು ಕುಡಿಯುವುದು ಮತ್ತು ಸ್ನಾನ ಮಾಡುವುದು ಜೊತೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಎಂಬುದರ ಕುರಿತಾಗಿ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಊಟದ ನಂತರ ಮಲಗುವುದು
ಊಟವಾದ ತಕ್ಷಣ ಮಲಗುವುದರಿಂದ ದೇಹದಲ್ಲಿ ಕಫಾ (ನೀರಿನಾಂಶ) ಮತ್ತು ಕೊಬ್ಬು ಹೆಚ್ಚಾಗುತ್ತದೆ ಎಂದು ಡಾ. ದೀಕ್ಷಾ ಹೇಳಿದ್ದಾರೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ನಿಮ್ಮ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.

ಊಟದ ನಂತರ ನೀರು ಕುಡಿಯುವುದು
ಆಯುರ್ವೇದದ ಪ್ರಕಾರ ನೀರನ್ನು ಊಟದ ನಡುವೆ ಸೇವಿಸಬೇಕು. ಆಹಾರ ಸೇವಿಸುವ ಮೊದಲು ಅಥವಾ ನಂತರ ಅಲ್ಲ. ಆಹಾರದ ಮೊದಲು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಆಹಾರದ ನಂತರ ತಕ್ಷಣ ನೀರು ಕುಡಿಯುವುದು ಸ್ಥೂಲಕಾಯರನ್ನಾಗಿ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಊಟದ ನಂತರ ಸೂರ್ಯನ ಬಿಸಿಲಿಗೆ ಒಡ್ಡುಕೊಳ್ಳುವುದು
ಊಟದ ನಂತರ ತಕ್ಷಣವೇ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ರಕ್ತ ಪರಿಚಲನೆ ಮತ್ತು ನರಗಳ ಪ್ರಚೋದನೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಚಯಾಪಚಯಕ್ಕೆ ಅಡ್ಡಿಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಊಟದ ನಂತರ ಈಜು, ದೂರದ ನಡಿಗೆ, ಹಾಡುವುದು, ಪ್ರಯಾಣ ಮತ್ತು ವ್ಯಾಯಾಮ
ಊಟದ ಬಳಿಕ ಈ ಕೆಲವು ಚಟುವಟಿಕೆಗಳು ವಾತವನ್ನು ಉಲ್ಭಣಗೊಳಿಸುತ್ತವೆ. ಊಟದ ಬಳಿಕ ಅಸ್ವಸ್ಥತೆಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಊಟದ ನಂತರ ಸ್ನಾನ ಮಾಡುವುದು
ಆಯುರ್ವೇದದ ಪ್ರಕಾರ, ಊಟದ ನಂತರ ಎರಡು ಗಂಟೆಗಳ ನಂತರವೇ ಸ್ನಾನ ಮಾಡಬೇಕು. ದೇಹದಲ್ಲಿರುವ ಬಿಸಿಯು ಆಹಾರದ ಜೀರ್ಣಕ್ರಿಯೆಗೆ ಸಹಾಯಕವಾಗಿರುತ್ತದೆ. ಆದರೆ ನೀವು ಸ್ನಾನ ಮಾಡುವಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದು ನಿಧಾನ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ ಎಂದು ಡಾ. ದೀಕ್ಷಾ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

Health Tips: ಈ ಕೆಲವು ಪೌಷ್ಟಿಕಾಂಶಯುಕ್ತ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಉತ್ತಮ

TV9 Kannada


Leave a Reply

Your email address will not be published. Required fields are marked *