Health Tips: ಈ ಕೆಲವು ಪೌಷ್ಟಿಕಾಂಶಯುಕ್ತ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಉತ್ತಮ | These healthy drinks are detoxify your body during festival season


Health Tips: ಈ ಕೆಲವು ಪೌಷ್ಟಿಕಾಂಶಯುಕ್ತ ಪಾನೀಯಗಳು ನಿಮ್ಮ ಆರೋಗ್ಯಕ್ಕೆ ಉತ್ತಮ

ಸಂಗ್ರಹ ಚಿತ್ರ

ಹಬ್ಬದ ಸಮಯದಲ್ಲಿ ನಿಮ್ಮ ದೇಹ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಉತ್ತಮ. ಹಬ್ಬದ ಸಮಯದಲ್ಲಿ ಅನೇಕ ವಿಧದ ಭಕ್ಷ್ಯಗಳು, ಸಿಹಿ ತಿಂಡಿಗಳು ಜೊತೆಗೆ ಕರಿದ ಪದಾರ್ಥಗಳ ಅತಿಯಾದ ಸೇವನೆಯು ನಿಮ್ಮ ಆರೋಗ್ಯವನ್ನು ಹಾನಿಗೊಳಿಸಬಹುದು. ಹಾಗಿರುವಾಗ ನೀವು ಸೇವಿಸುವ ಆಹಾರದ ಬಗೆಗೆ ಹೆಚ್ಚು ಗಮನವಿರಲಿ. ಹಸಿವಾದಾಗ ಪೌಷ್ಟಿಕಾಂಶಯುಕ್ತ ಪಾನೀಯಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಶಕ್ತಿ ಪಡೆದುಕೊಳ್ಳಬಹುದಾಗಿದೆ. ನೀವು ಸೇವಿಸಬಹುದಾದ ಪೌಷ್ಟಿಕಾಂಶಯುಕ್ತ ಪಾನೀಯಗಳು ಈ ಕೆಳಗಿನಂತಿದೆ.

ಅರಿಶಿಣ ಹಾಲು
ಹಬ್ಬ ಹರಿದಿನಗಳ ಸಮದಯದಲ್ಲಿ ದೇಹವನ್ನು ನಿರ್ವಿಷಗೊಳಿಸಲು ಅರಿಶಿಣ ಹಾಲು ಉತ್ತಮ ಮಾರ್ಗವಾಗಿದೆ. ಇದನ್ನು ತಯಾರಿಸಲು ಕುದಿಯುವ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿಣ ಬೆರೆಸಿ ಸೇವಿಸಿ. ಈ ಅರಿಶಿಣ ಹಾಲನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.

ನಿಂಬೆ- ಶುಂಠಿ ಪಾನೀಯ
ನಿಂಬೆ – ಶುಂಠಿ ಕೂಡಾ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಅರ್ಧ ನಿಂಬೆ ಹಣ್ಣನ್ನು ಹಿಂಡಿ ಅದಕ್ಕೆ ಒಂದು ಚೂರು ಶುಂಠಿ ಚೂರು ಬೆರೆಸಿ. ಅದನ್ನು ಚೆನ್ನಾಗಿ ಕುದಿಸಿ. ಬಳಿಕ ಆ ನೀರನ್ನು ಸೇವಿಸಿ. ಇದು ನಿಮ್ಮ ಜೀರ್ಣಕ್ರಿಯೆಗೂ ತುಂಬಾ ಪ್ರಯೋಜನಕಾರಿ.

ಬಿಟ್ರೂಟ್ ಜ್ಯೂಸ್
ಬಿಟ್ರೂಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ಜ್ಯೂಸ್ ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಅಯಾಸ, ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಬಿಸಿಲಿನ ಬೇಗೆ ಮತ್ತು ಆಯಾಸವಾದಾಗ ಬಿಟ್ರೂಟ್​ ಜ್ಯೂಸ್​ ನಿಮ್ಮ ಆರಾಮಗೊಳಿಸುತ್ತದೆ.

ಹಸಿರು ಚಹಾ
ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ ಎರಡರಿಂದ ಮೂರು ಬಾರಿ ಗ್ರೀನ್ ಟೀ ಸೇವಿಸಬಹುದು. ನೀವು ನಿಂಬೆ ಮತ್ತು ಜೇನುತುಪ್ಪದಿಂದ ಗ್ರೀನ್ ಟೀ ತಯಾರಿಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಶುಂಠಿ ಸೇರಿಸಿ ಗ್ರೀನ್​ ಟೀ ತಯಾರಿಸಿಕೊಂಡು ಸವಿಯಿರಿ.

ಇದನ್ನೂ ಓದಿ:

Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ

Health Tips: ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳೆಷ್ಟಿವೆ ಗೊತ್ತಾ?

TV9 Kannada


Leave a Reply

Your email address will not be published. Required fields are marked *