Health Tips: ಕಡಲೆಕಾಯಿಯ ದುಷ್ಪರಿಣಾಮಗಳು; ಈ ಸಮಸ್ಯೆ ಇರುವವರು ಹೆಚ್ಚು ಶೇಂಗಾ ತಿನ್ನುವುದು ಅಪಾಯಕಾರಿ | Side Effects of Peanuts Shenga Kadale Health Tips know these things about Peanuts


Health Tips: ಕಡಲೆಕಾಯಿಯ ದುಷ್ಪರಿಣಾಮಗಳು; ಈ ಸಮಸ್ಯೆ ಇರುವವರು ಹೆಚ್ಚು ಶೇಂಗಾ ತಿನ್ನುವುದು ಅಪಾಯಕಾರಿ

ಕಡಲೆಕಾಯಿ

ಕಡಲೆಕಾಯಿ ಇಷ್ಟ ಇರದ ಜನರೇ ಇರಲಾರರು ಅನಿಸುತ್ತದೆ. ಕಡಲೆಕಾಯಿ ಎಲ್ಲರಿಗೂ ಇಷ್ಟವಾಗುವ ತಿನಿಸು. ಕಡಲೆಕಾಯಿಯನ್ನು ಹಾಗೇ ತಿನ್ನುವುದು, ವಿವಿಧ ತಿನಿಸುಗಳಿಗೆ ಹಾಕುವುದು ಮಾತ್ರವಲ್ಲ ಚಟ್ನಿ ಮಾಡಲು ಕೂಡ ಬಳಸುತ್ತಾರೆ. ಕಡಲೆಯನ್ನು ಬಡವರ ಬಾದಾಮಿ ಎಂದೇ ಕರೆಯುತ್ತಾರೆ. ಕಡಲೆಕಾಯಿಯನ್ನು ಹಿತ ಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ಆಗಿದೆ. ಇದರಲ್ಲಿ ವಿವಿಧ ಪೋಷಕಾಂಶಗಳು ಇದೆ. ಪೊಟ್ಯಾಷಿಯಂ, ಕಬ್ಬಿಣ, ಸತು, ವಿಟಮಿನ್​ಗಳಲ್ಲಿ ಸಮೃದ್ಧವಾಗಿದೆ. ಅದಾಗ್ಯೂ ಕಡಲೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಲ್ಲ. ವಿಶೇಷವಾಗಿ ಕೆಲವು ಆರೋಗ್ಯ ಸಮಸ್ಯೆಗಳು ಇರುವವರು ಕಡಲೆಕಾಯಿಯನ್ನು ತಿನ್ನಲೇಬಾರದು. ಈ ಬಗ್ಗೆ ವಿವರಣೆ ಇಲ್ಲಿ ನೀಡಲಾಗಿದೆ. ತಿಳಿದುಕೊಳ್ಳಿ.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ ಹೊಂದಿರುವವರು ಕಡಲೆಕಾಯಿ ಸೇವನೆ ಅಷ್ಟಾಗಿ ಒಳ್ಳೆಯದಲ್ಲ. ಅದು ನಿಮ್ಮ ಟಿಎಸ್​ಹೆಚ್ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಕಡಲೆಕಾಯಿಯನ್ನು ಸೇವಿಸಬಾರದು. ಅದಾಗ್ಯೂ ಕಡಲೆಕಾಯಿ ತಿನ್ನಲು ಬಯಸಿದರೆ ನೀವು ಬಹಳ ಸೀಮಿತ ಪ್ರಮಾಣದಲ್ಲಿ ಕಡಲೆಕಾಯಿ ತಿನ್ನಬೇಕು. ಅಲ್ಲದೆ, ಥೈರಾಯ್ಡ್ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದೀರಾದರೆ ಕಡಲೆಕಾಯಿ ತಿನ್ನದೇ ಇರುವುದು ಉತ್ತಮ.

ಅಲರ್ಜಿ ಸಮಸ್ಯೆ

ನಿಮಗೆ ಅಲರ್ಜಿ, ತುರಿಕೆ ಸಮಸ್ಯೆ ಇದ್ದರೆ ಕಡಲೆಕಾಯಿ ತಿನ್ನುವುದು ಸೂಕ್ತವಲ್ಲ. ಏಕೆಂದರೆ ಇದರಿಂದ ತುರಿಕೆ, ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು. ಬೇಸಿಗೆಯಲ್ಲಿ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸ್ವೀಕರಿಸಬೇಕು.

ಯಕೃತ್ತಿನ ಸಮಸ್ಯೆ

ಯಕೃತ್ತಿನ ಸಮಸ್ಯೆ ಇರುವವರು ಕಡಲೆಕಾಯಿಯನ್ನು ಸೇವಿಸಬಹುದು. ಆದರೆ, ಹೆಚ್ಚು ತಿನ್ನಬಾರದು. ಕಡಲೆಕಾಯಿಯಲ್ಲಿ ಇರುವ ಕೆಲವು ಅಂಶಗಳು ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ಯಕೃತ್ತಿನ ಸಮಸ್ಯೆ ಇರುವವರು ಕಡಲೆಯಿಂದ ಸಾಧ್ಯ ಆದಷ್ಟು ದೂರ ಇರುವುದು ಉತ್ತಮ.

ಸಂಧಿವಾತ

ಸಂಧಿವಾತದಿಂದ ಬಳಲುತ್ತಿರುವವರು ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಕಡಲೆಯ ಸೇವನೆಯು ಸಂಧಿವಾತ ಅಥವಾ ಗಂಟುನೋವನ್ನು ಉಲ್ಬಣಗೊಳಿಸಬಹುದು.

ಅಧಿಕ ತೂಕ

ನೀವು ಅಧಿಕ ತೂಕ ಹೊಂದಿದ್ದರೆ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಡಲೆಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದೇ ಇದಕ್ಕೆ ಕಾರಣ. ಕಡಲೆಕಾಯಿಯಲ್ಲಿ ವಿವಿಧ ವಿಟಮಿನ್​ಗಳು, ಮಿನರಲ್​ಗಳು ಇದ್ದು ಅದು ಅಧಿಕ ತೂಕಕ್ಕೆ ಕಾರಣವಾಗುತ್ತದೆ.

ಗಮನಿಸಿ: ಅಧ್ಯಯನಗಳು, ಆರೋಗ್ಯ ತಜ್ಞರ ಶಿಫಾರಸುಗಳಿಂದ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

TV9 Kannada


Leave a Reply

Your email address will not be published. Required fields are marked *