Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಚಿಹ್ನೆಯಾಗಿರಬಹುದು! | Health Tips: Stroke could be first sign of cardiovascular disease in some smokers Study Reveals


Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಚಿಹ್ನೆಯಾಗಿರಬಹುದು!

ಸಂಗ್ರಹ ಚಿತ್ರ

ವಾಷಿಂಗ್ಟನ್: ಸಿಗರೇಟ್ ಸೇದುವ ಕೆಲವರು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಿಂದ ಸಾವನ್ನಪ್ಪುವ ಅಪಾಯ ಉಂಟಾಗಬಹುದು ಹಾಗೇ, ಸ್ಟ್ರೋಕ್ ಹೃದಯರಕ್ತನಾಳದ ಕಾಯಿಲೆಯ ಮುನ್ಸೂಚನೆಯೂ (ಸಿವಿಡಿ) ಆಗಿರಬಹುದು ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಈ ಅಧ್ಯಯನದ ಆವಿಷ್ಕಾರಗಳನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಮುಕ್ತ-ಪ್ರವೇಶ ಪತ್ರಿಕೆಯಾದ ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟಿಸಲಾಗಿದೆ. ದಶಕಗಳ ಕಾಲ ನಡೆದ ಸಂಶೋಧನೆಯು ಸಿಗರೇಟ್ ಸೇವನೆಯಿಂದ ಹೃದಯರಕ್ತನಾಳದ ಕಾಯಿಲೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಂತಹ ಇತರ ಕಾಯಿಲೆಗಳಿಂದ ಅಕಾಲಿಕವಾಗಿ ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ ಎಂದು ತಿಳಿಸಿದೆ.

ಅಮೇರಿಕನ್ ಹಾರ್ಟ್ ಅಸೋಸಿಯೇಶನ್‌ನ ಹಾರ್ಟ್ ಅಂಡ್ ಸ್ಟ್ರೋಕ್ ಸ್ಟ್ಯಾಟಿಸ್ಟಿಕಲ್ ಅಪ್‌ಡೇಟ್ 2021ರ ಪ್ರಕಾರ, ಪ್ರತಿ ವರ್ಷ 480,000 ಅಮೆರಿಕದ ವಯಸ್ಕರು ಸಿಗರೇಟ್ ಸೇದುವುದರಿಂದ ಸಾಯುತ್ತಾರೆ. ಧೂಮಪಾನವನ್ನು ತ್ಯಜಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದರೂ ಅಮೆರಿಕದಲ್ಲಿ 34 ದಶಲಕ್ಷಕ್ಕೂ ಹೆಚ್ಚು ವಯಸ್ಕರು ಇನ್ನೂ ಸಿಗರೇಟ್ ಸೇದುತ್ತಾರೆ.

ಅನೇಕ ಜೀವನಶೈಲಿ ಅಂಶಗಳು ಮತ್ತು ಹೃದಯರಕ್ತನಾಳದ ಮತ್ತು ಇತರ ಆರೋಗ್ಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ಸಂಶೋಧಕರು ಅಮೆರಿಕದಲ್ಲಿ 9 ದೀರ್ಘಾವಧಿಯ ಅಧ್ಯಯನಗಳಿಂದ ಡೇಟಾವನ್ನು ಸಂಗ್ರಹಿಸಿದ್ದಾರೆ. ಅಧ್ಯಯನದ ಪ್ರಾರಂಭದಲ್ಲಿ ಹೃದಯರಕ್ತನಾಳದ ಕಾಯಿಲೆಯಿಂದ ಮುಕ್ತರಾಗಿದ್ದ 20 ಮತ್ತು 79 ವರ್ಷ ವಯಸ್ಸಿನ 106,165 ವಯಸ್ಕರ ಡೇಟಾವನ್ನು ಕಲೆಹಾಕಲಾಗಿತ್ತು. ಧೂಮಪಾನ ಮಾಡುವ ಮಧ್ಯವಯಸ್ಕ ಮಹಿಳೆಯರು ಧೂಮಪಾನ ಮಾಡದವರಿಗಿಂತಲೂ ತಮ್ಮ CVDಯ ಮೊದಲ ಚಿಹ್ನೆಯಾಗಿ ಮಾರಣಾಂತಿಕ ಹೃದಯರಕ್ತನಾಳದ ಕಾಯಿಲೆ (CVD)ಯನ್ನು ಹೊಂದುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ. ಅದೇ ಪುರುಷರ ವಿಷಯಕ್ಕೆ ಬಂದರೆ ಈ ಪ್ರಮಾಣ ಒಂದೂವರೆ ಪಟ್ಟು ಹೆಚ್ಚಿದೆ.

ಧೂಮಪಾನ ಮಾಡದ ಪುರುಷರಿಗಿಂತ ಧೂಮಪಾನ ಮಾಡುವ ಮಧ್ಯವಯಸ್ಕ ಪುರುಷರು ಹೃದಯರಕ್ತನಾಳದ ಕಾಯಿಲೆಗೆ ಶೇಕಡಾ 10 ಕ್ಕಿಂತ ಹೆಚ್ಚು ದೀರ್ಘಾವಧಿಯ ಅಪಾಯವನ್ನು ಹೊಂದಿದ್ದಾರೆ. ಹೃದಯಾಘಾತ, ಪಾರ್ಶ್ವವಾಯುವನ್ನು ತಡೆಗಟ್ಟುವುದು ಅತ್ಯಗತ್ಯ. ಆದರೆ ಹೃದಯರಕ್ತನಾಳದ ಕಾಯಿಲೆಯ ಮೊದಲ ಅಭಿವ್ಯಕ್ತಿಯಾಗಿ ಅನಿರೀಕ್ಷಿತ ಮರಣವನ್ನು ತಡೆಗಟ್ಟುವುದು ಮೊದಲ ಆದ್ಯತೆಯಾಗಿದೆ. ಧೂಮಪಾನ ಮಾಡುವ ಜನರು ತಮ್ಮ ದೇಹಕ್ಕೆ ಸಿಗರೇಟ್ ಉಂಟುಮಾಡುವ ಹಾನಿಯನ್ನು ತಿಳಿದಿರುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಅಧ್ಯಯನ ನಡೆಸಲು ಕೆಲವು ಮಿತಿಗಳಿದ್ದವು. ಧೂಮಪಾನದ ಸ್ಥಿತಿಯು ಅಧ್ಯಯನದ ಆರಂಭದಲ್ಲಿ ಭಾಗವಹಿಸುವವರ ವರದಿಯನ್ನು ಆಧರಿಸಿದೆ. ಆದ್ದರಿಂದ ಕೆಲವರು ಫಾಲೋ-ಅಪ್ ಸಮಯದಲ್ಲಿ ಧೂಮಪಾನವನ್ನು ನಿಲ್ಲಿಸಬಹುದು ಅಥವಾ ಪ್ರಾರಂಭಿಸಬಹುದು. ಅಧ್ಯಯನದಲ್ಲಿ ಪಾಲ್ಗೊಳ್ಳುವವರು ಎಷ್ಟು ವರ್ಷ ಸಿಗರೇಟ್ ಸೇದಿದ್ದಾರೆ, ದಿನಕ್ಕೆ ಸೇದಿದ ಸಿಗರೇಟ್‌ಗಳ ಸಂಖ್ಯೆ ಅಥವಾ ಹಿಂದೆ ಧೂಮಪಾನ ಮಾಡಿದ ಜನರನ್ನು ಅಧ್ಯಯನದಲ್ಲಿ ಸೇರಿಸಲಾಗಿದೆಯೇ ಎಂಬಂತಹ ಧೂಮಪಾನ ಮಾಡುವ ಜನರ ಬಗ್ಗೆ ಹೆಚ್ಚಿನ ನಿರ್ದಿಷ್ಟತೆಗಳನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹಾಗೇ, ಈ ಮಿತಿಗಳ ಹೊರತಾಗಿಯೂ ಸಂಶೋಧನೆಗಳು ಸಾಕಷ್ಟು ಮಹತ್ವದ್ದಾಗಿವೆ.

ಇದನ್ನೂ ಓದಿ: Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ

TV9 Kannada


Leave a Reply

Your email address will not be published. Required fields are marked *