Hearing Loss: ನಿಮ್ಮ ಅತಿಯಾದ ಹೆಡ್‌ಫೋನ್‌ ಬಳಕೆಯು ಶ್ರವಣ ದೋಷಕ್ಕೆ ಕಾರಣವಾಗಬಹುದು ಎಚ್ಚರ – Hearing Loss: Headphone users should use settings or apps on smartphones to monitor sound levels


24 ಪ್ರತಿಶತದಷ್ಟು ಯುವ ಜನತೆಯು ಹೆಡ್ ಫೋನ್ ಬಳಕೆಗೆ ದಾಸರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯಿಂದ ತಿಳಿದುಬಂದಿದೆ.

Hearing Loss: ನಿಮ್ಮ ಅತಿಯಾದ ಹೆಡ್‌ಫೋನ್‌ ಬಳಕೆಯು ಶ್ರವಣ ದೋಷಕ್ಕೆ ಕಾರಣವಾಗಬಹುದು ಎಚ್ಚರ

Hearing Loss

Image Credit source: Healthy Hearing

ವಿಶ್ವಾದ್ಯಂತ ಸುಮಾರು ಒಂದು ಶತಕೋಟಿ ಯುವಕರು ಹೆಡ್‌ಫೋನ್‌ಳಲ್ಲಿ ಜೋರಾಗಿ ಹಾಡುಗಳಿಂದ ಕೇಳುವುದರಿಂದ ಹಾಗೂ ಸಂಭ್ರಮ ಸಡಗರಗಳಲ್ಲಿ ಅತಿಯಾದ ಸಂಗೀತ ಹಾಡುಗಳಲ್ಲಿ ಪಾಲ್ಗೊಂಡು ಅತಿಯಾದ ಶಬ್ದ ಮಾಲಿನ್ಯದತ್ತ ವಾಲುತ್ತಿದ್ದಾರೆ. ಇದ್ದರಿಂದಾಗಿ ಕಿವಿಗೆ ಸಂಬಂಧಿಸಿದ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಯುವಜನತೆಯನ್ನು ಶ್ರವಣದೋಷದ ಸಮಸ್ಯೆಯಿಂದ ಹೊರ ತರಲು ಹಾಗೂ ಇದರ ಕುರಿತು ಜಾರಿ ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಇದರ ಕುರಿತು ಸರ್ಕಾರವು ತಿರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದೆ. 24 ಪ್ರತಿಶತದಷ್ಟು ಯುವ ಜನತೆಯು ಹೆಡ್ ಫೋನ್ ಬಳಕೆಗೆ ದಾಸರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯಿಂದ ತಿಳಿದುಬಂದಿದೆ.

ಬಿ.ಎಂ.ಜೆ ಗ್ಲೋಬಲ್ ಹೆಲ್ತ್ ಜರ್ನಲ್‌ ವಿಶ್ಲೇಷಣೆಯು ಕಳೆದ ಎರಡು ದಶಕಗಳಲ್ಲಿ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ರಷ್ಯನ್ ಭಾಷೆಗಳಲ್ಲಿ ಪ್ರಕಟವಾದ 33 ಅಧ್ಯಯನಗಳಲ್ಲಿ 12ರಿಂದ 34 ನಡುವಿನ ವಯಸ್ಸಿನ 19,000 ಕ್ಕೂ ಹೆಚ್ಚು ಭಾಗವಹಿಸಿದ್ದರು ಎಂದು ಪ್ರಕಟಿಸಿದೆ.

ಒಟ್ಟಾರೆಯಾಗಿ ಇಡೀ ವಿಶ್ವದಲ್ಲಿ 6,70,000 ರಿಂದ 1.35 ಶತಕೋಟಿ ಯುವಜನರು ಶ್ರವಣ ದೋಷದ ಅಪಾಯದಲ್ಲಿದ್ದಾರೆ ಎಂದು ಅಧ್ಯಯನವು ಅಂದಾಜಿಸಿದೆ ಹಾಗೂ ಇದೇ ರೀತಿ ಮುಂದುವರಿದರೆ 2050 ರ ವೇಳೆಗೆ ಈ ಸಂಖ್ಯೆ 700 ಮಿಲಿಯನ್‌ಗೆ ಏರುತ್ತದೆ. ಇದ್ದರಿಂದಾಗಿ ವಿಶ್ವದ ಜನಸಂಖ್ಯೆಯ ಶೇಕಡಾ ಐದು ರಷ್ಟು ಜನರು ಶ್ರವಣ ಶಕ್ತಿಯ ನಷ್ಟದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಇಂದಿನ ಯುವಪೀಳಿಯು ಬಸ್ಸ್, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಹೆಡ್‌ಫೋನ್‌ ಬಳಸಿ ಜೋರಾಗಿ ಹಾಡುಗಳನ್ನು ಕೇಳುತ್ತಾರೆ ಹಾಗೂ 48 ಪ್ರತಿಶತದಷ್ಟು ಜನರು ಸಂಗೀತ ಕಚೇರಿಗಳು ಅಥವಾ ನೈಟ್‌ಕ್ಲಬ್‌ಗಳಂತಹ ಮನರಂಜನಾ ಸ್ಥಳಗಳಲ್ಲಿ ಅಸುರಕ್ಷಿತ ಶಬ್ದ ಮಟ್ಟದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಪ್ರಮುಖವಾಗಿ ಕಿವಿಗೆ ಸಂಬಂಧಪಟ್ಟ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ಜನರು ತಮ್ಮ ಶ್ರವಣ ಶಕ್ತಿಯನ್ನು ಕಳೆದು ಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಅಪಾಯವನ್ನು ಕಡಿಮೆ ಮಾಡಲು ಧ್ವನಿಯನ್ನು ಕಡಿಮೆ ಮಾಡುವುದು ಮತ್ತು ಕಡಿಮೆ ಅವಧಿಗೆ ಆಲಿಸುವುದು ಉತ್ತಮ ಮಾರ್ಗವಾಗಿದೆ ಎಂದು ದಕ್ಷಿಣ ಕೆರೊಲಿನಾದ ವೈದ್ಯಕೀಯ ವಿಶ್ವವಿದ್ಯಾಲಯದ ಶ್ರವಣಶಾಸ್ತ್ರಜ್ಞರಾದ ಲಾರೆನ್ ಡಿಲ್ಲಾರ್ಡ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: National Epilepsy Day 2022: ಯಾವ ವಯಸ್ಸಿನವರಲ್ಲಿ ಈ ಮೂರ್ಛೆ ರೋಗ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ? ತಜ್ಞರ ಸಲಹೆಗಳು ಇಲ್ಲಿವೆ

ಆದ್ದರಿಂದ ಇಂದಿನ ಯುವ ಪೀಳಿಗೆ ಆರೋಗ್ಯದ ಮೇಲೆ ಗಮನಹರಿಸಬೇಕಿದೆ. ಅತಿಯಾದ ಹೆಡ್‌ಫೋನ್ ಬಳಕೆ ಕಾಲಕ್ರಮೇಣ ನಿಮ್ಮ ಶ್ರವಣ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಆದ್ದರಿಂದ ಆದಷ್ಟು ಎಚ್ಚರ ವಹಿಸುವುದು ಅಗತ್ಯವಾಗಿದೆ.

ಈ ಸುದ್ದಿಯನ್ನು ಇಂಗ್ಲಿಷ್​​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಾಜಾ ಸುದ್ದಿ

TV9 Kannada


Leave a Reply

Your email address will not be published.