ಆದರೆ, ಖುದ್ದು ಸಿದ್ದರಾಮಯ್ಯ ಚಿಂತೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಅವರನ್ನು ಕೋಲಾರ ಬದಲು ವರುಣಾದಿಂದ ಸ್ಪರ್ಧಿಸುವಂತೆ ಸೂಚಿಸಲಾಗಿದೆ. ಅವರ ಮನೆಯಲ್ಲಿ ಏನೆಲ್ಲ ಚರ್ಚೆಯಾಗುತ್ತಿದೆ ಅಂತ ಇನ್ನೂ ಗೊತ್ತಾಗಿಲ್ಲ
ಬೆಂಗಳೂರು: ನವದೆಹಲಿಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನಡೆಯಿತು. ಯುಗಾದಿ ಹಬ್ಬದ ಬಳಿಕ ವಿಧಾನಸಭಾ ಚುನಾಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅಲ್ಲಿಂದ ವಾಪಸ್ಸಾಗಿರುವ ಹಿರಿಯ ನಾಯಕ ಸಿದ್ದರಾಮಯ್ಯನವರ (Siddaramaiah) ನಿವಾಸ ಚಟುವಟಿಕೆಯ ಕೇಂದ್ರವಾಗಿದೆ. ಪಕ್ಷದ ಹಲಾವಾರು ನಾಯಕರು ಅಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ, ಖುದ್ದು ಸಿದ್ದರಾಮಯ್ಯ ಚಿಂತೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಅವರನ್ನು ಕೋಲಾರ ಬದಲು ವರುಣಾದಿಂದ ಸ್ಪರ್ಧಿಸುವಂತೆ ಸೂಚಿಸಲಾಗಿದೆ. ಅವರ ಮನೆಯಲ್ಲಿ ಏನೆಲ್ಲ ಚರ್ಚೆಯಾಗುತ್ತಿದೆ ಅಂತ ಇನ್ನೂ ಗೊತ್ತಾಗಿಲ್ಲ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ