Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು | Hijab row Aligarh Dharm Samaj college in Uttar Pradesh bans entry of students with saffron stole or hijab


Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು

ಉತ್ತರ ಪ್ರದೇಶ: ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು

ಉತ್ತರ ಪ್ರದೇಶ: ಕರ್ನಾಟಕದಲ್ಲಿ ಹಬ್ಬಿರುವ ಹಿಜಾಬ್​ ಧಾರಣೆ ವಿಚಾರ ದೂರದ ಉತ್ತರ ಪ್ರದೇಶದಲ್ಲಿಯೂ ಪ್ರತಿಧ್ವನಿಸಿದೆ. ಅಲ್ಲಿನ ಅಲಿಗಢ ಧರ್ಮ ಸಮಾಜ ಕಾಲೇಜು (Aligarh Dharm Samaj college) ಸಹ ಸಮವಸ್ತ್ರ ಶಿಷ್ಟಾಚಾರವನ್ನು ಕಡ್ಡಾಯಗೊಳಿಸಿದೆ. ಆಗ್ರಾದ ಡಾ. ಬಿ ಆರ್​ ಅಂಬೇಡ್ಕರ್​ ವಿಶ್ವವಿದ್ಯಾಲಯಕ್ಕೆ ಅಂಕಿತವಾಗಿರುವ ಧರ್ಮ ಸಮಾಜ ಕಾಲೇಜು ಶಿಷ್ಟಾಚಾರದ ಅನುಸಾರ ಸೂಚಿತ ಸಮವಸ್ತ್ರ ವನ್ನು ಧರಿಸಿ ಕಾಲೇಜಿಗೆ ಹಾಜರಾಗುವುದು ಅಲ್ಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿದೆ (Hijab row).

ಮುಖ ಮುಚ್ಚಿರುವ ವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು. ಅಂದರೆ ಕೇಸರಿ ವಸ್ತ್ರವನ್ನಾಗಲಿ ಅಥವಾ ಹಿಜಾಬ್ ವಸ್ತ್ರವನ್ನಾಗಲಿ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂದು ಧರ್ಮ ಸಮಾಜ ಕಾಲೇಜು ಆಡಳಿತ ಮಂಡಳಿ ನಿನ್ನೆ ಗುರುವಾರ ನೋಟಿಸ್​ ಬೋರ್ಡ್​​ನಲ್ಲಿ ಸೂಚನೆ ಪ್ರಕಟಿಸಿದೆ. ಡಿ ಎಸ್ ಕಾಲೇಜು ಪ್ರಿನ್ಸಿಪಾಲ್ ಡಾ. ರಾಜ್​ ಕುಮಾರ್​ ವರ್ಮಾ ಈ ಆದೇಶ ಜಾರಿಗೊಳಿಸಿದ್ದಾರೆ ಎಂದು ANI News ಸುದ್ದಿ ಸಂಸ್ಥೆ ವರದಿ ಮಾಡಿದೆ.

TV9 Kannada


Leave a Reply

Your email address will not be published. Required fields are marked *