Honganasu: ಬೆಳ್ಳಂಬೆಳಗ್ಗೆ ತನ್ನ ರೂಮ್‌ನಲ್ಲಿ ವಸುಧರಾ ನೋಡಿ ಶಾಕ್ ಆದ ರಿಷಿ – Honganasu Kannada Serial: Rishi shocked after seeing Vasudhara in his room


Honganasu Serial Update: ಮಹೇಂದ್ರನಿಗೆ ಹುಟ್ಟುಹಬ್ಬ ಸಂಭ್ರಮ. ಅನೇಕ ವರ್ಷಗಳ ಬಳಿಕ ಜಗತಿ ಜೊತೆ ಆತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಆದರೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವುದು ಬೇಡ ಎಂದು ಜಗತಿ ಹೇಳಿದ್ದಾಳೆ.

Honganasu: ಬೆಳ್ಳಂಬೆಳಗ್ಗೆ ತನ್ನ ರೂಮ್‌ನಲ್ಲಿ ವಸುಧರಾ ನೋಡಿ ಶಾಕ್ ಆದ ರಿಷಿ

ಹೊಂಗನಸು ಸೀರಿಯಲ್

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಮಹೇಂದ್ರ ಮನೆ ಬಿಟ್ಟು ಬಂದಿರುವುದು ರಿಷಿ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಜಗತಿಗೆ ಗೊತ್ತಾಗಿದೆ. ಮಹೇಂದ್ರನನ್ನು ಹೇಗಾದರೂ ಮಾಡಿ ಮತ್ತೆ ಮನೆಗೆ ಹೋಗುವಂತೆ ಮಾಡಬೇಕೆಂದು ಜಗತಿ ಪರದಾಡುತ್ತಿದ್ದಾಳೆ. ಜಗತಿ ಸಹಾಯಕ್ಕೆ ನಿಂತಿದ್ದಾಳೆ ವಸು. ಜಗತಿಗಾಗಿ ರಿಷಿಗೆ ಮನೆಯೊಳಗೆ ಬಂದಿದ್ದಾಳೆ ವಸುಧರಾ.

ವಸುಧರಾ ಬೆಳ್ಳಂಬೆಳಗ್ಗೆ ರಿಷಿ ಮನೆಗೆ ಬಂದಳು. ವಸು ಬಂದಿದ್ದನ್ನು ನೋಡಿ ದೇವಯಾನಿ ಶಾಕ್ ಆದಳು. ಬೆಳಗ್ಗೆ ಬೆಳಗ್ಗೆಯೇ ಏನು ಈ ಕಡೆ ಬಂದ್ದಿದ್ದು ಎಂದು ವಸುಗೆ ಪ್ರಶ್ನೆ ಮಾಡಿದಳು ದೇವಯಾನಿ. ವಸುಧರಾ ನೀಡಿದ ಉತ್ತರ ದೇವಯಾನಿಗೆ ಸಿಟ್ಟು ತರಿಸಿತು. ರಿಷಿ ಮನೆಯಲ್ಲಿ ಇಲ್ಲ ಅವನನ್ನು ಹುಡುಕಿಕೊಂಡು ಯಾಕೆ ಬಂದೆ ಎಂದು ದೇವಯಾನಿ ಸುಳ್ಳು ಹೇಳಿದಳು. ಅಷ್ಟರಲ್ಲೇ ಎಂಟ್ರಿ ಕೊಟ್ಟ ಧರಣಿ ವಸುಧಾರಾಳನ್ನು ನೋಡಿ ಸಂತಸ ಪಟ್ಟಳು. ‘ಮಹೇಂದ್ರ ಸರ್ ಪುಸ್ತಕ ಅವರ ರೂಮಿನಲ್ಲಿ ಇದಿಯಂತೆ ತರಲು ಹೇಳಿದ್ದಾರೆ’ ಎಂದು ಧರಣಿಗೆ ಹೇಳಿದಳು ವಸು. ಯಾವ ಪುಸ್ತಕ ಎಂದು ಧರಣಿಗೆ ಗೊಂದಲವಾಯಿತು. ದೇವಯಾನಿಗೆ ಗೊತ್ತಾಗದ ಹಾಗೆ ಧರಣಿಗೆ ಮಸೇಜ್ ಮಾಡಿ ಜಗತಿ ಮೇಡಮ್ ಮಾತನಾಡಲು ಹೇಳಿದ್ದಾರೆ ಹಾಗಾಗಿ ಬಂದೆ ಎಂದಳು ವಸು. ಬಳಿಕ ಧರಣಿ ವಸುಧರಾಳನ್ನು ಒಳಗಡೆ ಕರೆದುಕೊಂಡು ಹೋದಳು.

‘ಮಹೇಂದ್ರ ಸರ್ ಪಾವಾಸ್ ಈ ಮನೆಗೆ ಬರುವಂತೆ ಮಾಡಬೇಕು, ಅದಕ್ಕೆ ರಿಷಿ ಜೊತೆ ನೀವು ಮಾತನಾಡಬೇಕು’ ಎಂದು ವಸು ಧರಣಿಗೆ ಹೇಳಿದಳು. ಧರಣಿ ಗಾಬರಿಯಾದಳು. ‘ನನ್ನ ಮಾತು ರಿಷಿ ಕೇಳಲ್ಲ ನಾನು ಹೇಗೆ ಹೇಳಲಿ’ ಎಂದಳು. ಹೇಗಾದರೂ ಮಾಡಿ ರಿಷಿಯ ಬಳಿ ಈ ವಿಚಾರ ಮಾತನಾಡಿ ಎಂದು ವಸು ಧರಣಿ ಬಳಿ ಕೇಳಿಕೊಂಡಳು. ಅಲ್ಲಿಂದ ಹೊರಟ ವಸು ನೇರವಾಗಿ ರಿಷಿ ರೂಮಿಗೆ ಎಂಟ್ರಿ ಕೊಟ್ಟಳು. ವಸುಧರಾ ಕೊಟ್ಟ ವಸ್ತುಗಳನ್ನು ರಿಷಿ ತನ್ನ ರೂಮಿನಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದ. ಅದನ್ನೆಲ್ಲವನ್ನೂ ನೋಡುತ್ತಾ ರಿಷಿನ ಇಮಿಟೇಟ್ ಮಾಡುತ್ತಿದ್ದಳು ವಸು. ರೂಮಿಗೆ ಬಂದ ರಿಷಿಗೆ ಶಾಕ್ ಆಯಿತು. ತನ್ನ ರೂಮಿಗೆ ವಸು ಬಂದಿದ್ದಾಳಾ ಅಥವಾ ಭ್ರಮೆನಾ ಎಂದುಕೊಂಡ. ಬಳಿಕ ‘ನೀನು ಏನು ಮಾಡುತ್ತಿದ್ದೀಯ ಇಲ್ಲಿ’ ಎಂದು ಕೇಳಿದ. ರಿಷಿ ರೂಮಿನಲ್ಲಿಟ್ಟಿದ್ದ ವಸ್ತುಗಳ ಬಗ್ಗೆ ಹೇಳಿ ಒಂದಿಷ್ಟು ಕಾಲೆಳೆದು ಹೊರಟಳು ವಸುಧರಾ.

ಇತ್ತ ಮಹೇಂದ್ರನಿಗೆ ಹುಟ್ಟುಹಬ್ಬ ಸಂಭ್ರಮ. ಅನೇಕ ವರ್ಷಗಳ ಬಳಿಕ ಜಗತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ ಮಹೇಂದ್ರ. ಆದರೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವುದು ಬೇಡ ಎಂದು ಜಗತಿ ಹೇಳಿದಳು. ರಿಷಿ ಮನಸ್ಸಿಗೆ ನೋವಾಗುತ್ತೆ ಎಂದು ಜಗತಿ ಹುಟ್ಟುಹಬ್ಬ ಆಚರಿಸುವುದು ಬೇಡ ಎಂದಳು. ಆದರೆ ರಿಷಿ ಪ್ರತಿ ವರ್ಷದಂತೆ ಈ ವರ್ಷವೂ ಅಪ್ಪನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಬೇಕೆಂದು ಮನೆಯಿಂದ ಹೊರಟ. ಜಗತಿ ಮನೆ ಮುಂದೆ ಬಂದು ನಿಂತು ವಸುಗೆ ಕಾಲ್ ಮಾಡಿ ಅಪ್ಪನನ್ನು ಹೊರಗೆ ಬರುವಂತೆ ಹೇಳಿದ. ಆದರೆ ಮಹೇಂದ್ರ ಹೋಗಲ್ಲ ಎಂದು ಹಠ ಹಿಡಿದ. ಇಲ್ಲಿವರೆಗೂ ಬಂದಿದ್ದಾನೆ ಮನೆಯೊಳಗೆ ಬರಲು ಅವನಿಗೆ ಎಷ್ಟು ಸೊಕ್ಕು ಎಂದು ಮಹೇಂದ್ರ ಸಿಟ್ಟು ಮಾಡಿಕೊಂಡ. ಜಗತಿ ಸಮಾಧಾನ ಮಾಡಿ ಕಳುಹಿಸಿದಳು.

ಅಪ್ಪನನ್ನು ಕರೆದುಕೊಂಡು ಹೋಗಿ ಹುಟ್ಟುಹಬ್ಬ ಆಚರಿಸಬೇಕು ಬನ್ನಿ ಎಂದು ಹೇಳಿದ. ಆದರೆ ಮಹೇಂದ್ರ ಎಲ್ಲರನ್ನೂ ಕರೆದರೆ ಮಾತ್ರ ಬರೋದು ಎಂದು ಹೇಳಿದ. ‘ಪ್ರತಿವರ್ಷ ನಾವಿಬ್ಬರೇ ಸೆಲೆಬ್ರೀಟ್ ಮಾಡುತ್ತಿದ್ದೆವು. ಈಗ್ಯಾಕೆ ಮೂರನೆಯವರು’ ಎಂದ ರಿಷಿ. ಜಗತಿಯನ್ನು ಮೂರನೆಯವರು ಎಂದಿದ್ದು ಮಹೇಂದ್ರನಿಗೆ ಕೋಪ ತರಿಸಿತು. ‘ಎಲ್ಲರನ್ನು ಕರೆದರೇ ಮಾತ್ರ ಬರ್ತೀನಿ ಇಲ್ಲ ಅಂದರೆ ಬೇಡ’ ಎಂದು ಹೇಳಿ ಹೊರಟ. ಅಪ್ಪನ ಮಾತಿನಿಂದ ರಿಷಿ ಮತ್ತಷ್ಟು ನೊಂದುಕೊಂಡ.

ರಿಷಿಗೆ ವಸುಧರಾ ಸಹಾಯ ಮಾಡುತ್ತಾಳಾ? ತಂದೆಯ ಹುಟ್ಟುಹಬ್ಬವನ್ನು ರಿಷಿ ಆಚರಿಸುತ್ತಾನಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

TV9 Kannada


Leave a Reply

Your email address will not be published. Required fields are marked *