Horoscope Today- ಇಂದು ಈ ರಾಶಿಯವರು ಹೆಚ್ಚು ಅನಗತ್ಯ ಖರ್ಚು ಮಾಡುತ್ತಾರೆ | Horoscope Today Know Your Rashi Bhavishya 2022 january 13 Basavaraj Guruji Prediction


Horoscope Today- ಇಂದು ಈ ರಾಶಿಯವರು ಹೆಚ್ಚು ಅನಗತ್ಯ ಖರ್ಚು ಮಾಡುತ್ತಾರೆ

ದಿನ ಭವಿಷ್ಯ

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಏಕಾದಶಿ ತಿಥಿ, ಗುರುವಾರ, ಜನವರಿ 13, 2022. ಕೃತ್ತಿಕೆ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 01.47 ರಿಂದ ಇಂದು ಸಂಜೆ 03.10ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 5.59

ತಾ.13-01-2022 ರ ಗುರುವಾರದ ರಾಶಿ ಭವಿಷ್ಯ.

ಮೇಷ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಕೋರ್ಟ್​ನಲ್ಲಿ ಇರುವ ನ್ಯಾಯ ಬಗೆ ಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಉದ್ಯೋಗದ ಬಗ್ಗೆ ಆತ್ಮ ಸಂತೃಪ್ತಿ ಇರುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡು ಬರುವುದು. ಶುಭ ಸಂಖ್ಯೆ: 1

ವೃಷಭ
ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ: 5

ಮಿಥುನ
ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡು ಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚಾಗಬಹುದು. ಶುಭ ಸಂಖ್ಯೆ: 9

ಕರ್ಕ
ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು. ಶುಭ ಸಂಖ್ಯೆ:5

ಸಿಂಹ
ಪ್ರಮುಖ ಯೋಜನೆಗಳ ಜವಾಬ್ದಾರಿ ಹೆಚ್ಚುವುದು. ಆರ್ಥಿಕ ಅಭಿವೃದ್ಧಿ ಕಂಡುಬರುವುದು. ಸ್ನೇಹಿತರ ಭಿನ್ನಾಭಿಪ್ರಾಯ ಬಗೆಹರಿಯುವುದು. ಶತೃಗಳೂ ಸೌಮ್ಯರಾಗುವ ಕಾಲ ಇರುವದರಿಂದ ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ. ಶುಭ ಸಂಖ್ಯೆ:8

ಕನ್ಯಾ
ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆ ಕೇಳುವ ಪ್ರಸಂಗ ಇರುವುದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು. ಶುಭ ಸಂಖ್ಯೆ: 3

ತುಲಾ
ಸಹನೆಗೆ ತಕ್ಕ ಫಲ ದೊರೆಯುವುದು. ಬಹು ದಿನದ ಕನಸು ನನಸಾಗುವ ಕಾಲವಿದೆ. ಕೊರ್ಟಿನಲ್ಲಿದ್ದ ವ್ಯಾಜ್ಯಗಳಲ್ಲಿ ಜಯ ದೊರೆಯುವುದು. ಸಂತಾನಫಲದ ಅಪೇಕ್ಷೆ ಈಡೇರುವದು. ಆರ್ಥಿಕ ವ್ಯವಹಾರಗಳ ಅದೃಷ್ಟ ಲಾಭತರುವವು. ಶುಭ ಸಂಖ್ಯೆ:6

ವೃಶ್ಚಿಕ
ನಿಶ್ಚಿತ ಆರ್ಥಿಕ ಸ್ಥಿತಿ ಇರುವದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 7

ಧನು
ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿ ಬಂದು, ದೇಹಾಲಸ್ಯವು ಆಗುತ್ತದೆ. ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ. ಶುಭ ಸಂಖ್ಯೆ: 4

ಮಕರ
ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವುದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 2

ಕುಂಭ
ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು. ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 1

ಮೀನ
ಏಕಾಂಗಿತನದ ಬೇಸರ ಪರಿಸರದಿಂದ ಹೊರ ಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 9

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

TV9 Kannada


Leave a Reply

Your email address will not be published. Required fields are marked *