horoscope today know your rashi bhavishya 2023 january 23 astrology in kannada | Nitya Bhavishya: ಈ ರಾಶಿಯವರು ದುಡ್ಡಿದೆ ಎಂದು ಬೇಕಾಬಿಟ್ಟಿಯಾಗಿ ಖರ್ಚು ಮಾಡಬೇಡಿ, ಸಾಹಸಕ್ಕೆ ಕೈ ಹಾಕಲೂ ಬೇಡಿ


Horoscope Today: ಜನವರಿ 23, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ 08:28 – 09:54, ಯಮಘಂಡ ಕಾಲ 11:19 – 12:45, ಗುಳಿಕ ಕಾಲ 14:10 – 15:35. ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 26ನಿಮಿಷಕ್ಕೆ.

Nitya Bhavishya: ಈ ರಾಶಿಯವರು ದುಡ್ಡಿದೆ ಎಂದು ಬೇಕಾಬಿಟ್ಟಿಯಾಗಿ ಖರ್ಚು ಮಾಡಬೇಡಿ, ಸಾಹಸಕ್ಕೆ ಕೈ ಹಾಕಲೂ ಬೇಡಿ

ರಾಶಿ ಭವಿಷ್ಯ

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 23 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಸೋಮವಾರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವ್ಯತಿಪತ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07-03 ನಿಮಿಷಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06-26 ನಿಮಿಷಕ್ಕೆ. ರಾಹು ಕಾಲ 08:28 – 09:54, ಯಮಘಂಡ ಕಾಲ 11:19 – 12:45, ಗುಳಿಕ ಕಾಲ 02:10-03:35 ನಿಮಿಷದವರೆಗೆ.

ತಾಜಾ ಸುದ್ದಿ

 1. ಮೇಷ: ಅಪರಿಚಿತರಿಂದ ನಿಮಗೆ ಕೆಲವು ಸಲಹೆಗಳು ಸಿಗಲಿದೆ. ಮೃಷ್ಟಾನ್ನ ಭೋಜನವನ್ನು ಉಣ್ಣಲಿದ್ದೀರಿ. ಖಷಿಯಾಗಿರಲು ಕೆಲವು ಸಂಗತಿಗಳು ಇರಲಿವೆ. ಸಂಗಾತಿಯ ನಡುವೆ ಸಣ್ಣ ಕಲಹವು ಏರ್ಪಡುವುದು. ಹೊರಗಿನ ಆಹಾರವನ್ನು ಅನಿವಾರ್ಯವಾದರೆ ಸೇವಿಸಿ. ತಿಂದು ಬೇಕಾದ ಉಪಚಾರವನ್ನು ಮಾಡಿಕೊಳ್ಳಿ. ಇಲ್ಲವಾದರೆ ಉದರಕ್ಕೆ ಸಂಬಂಧಿಸಿದ ರೋಗವು ಬರಲಿದೆ. ನಿಮಗೆ ಕೆಲವು ಶುಭ ಶಕುನಗಳು ಕಾಣಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ.
 2. ವೃಷಭ: ಅಪವಾದಗಳು ನಿಮ್ಮ ಮೇಲೆ ಇರಲಿದ್ದು ಅದನ್ನು ನ್ಯಾಯಸಮ್ಮತವಾಗಿ ದೃಷ್ಟಾಂತ ಸಹಿತ ಅಲ್ಲಗಳೆಯುವಿರಿ. ದೂರದ ಊರಿಗೆ ಕಾರ್ಯದ ನಿಮಿತ್ತ ಪ್ರಯಾಣ ಬೆಳೆಸುವಿರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಸಾಲವನ್ನು ಮಾಡುವುದಿದ್ದರೆ ನಿಮ್ಮ ಅನುಕೂಲಕ್ಕೆ ತಕ್ಕಹಾಗೆ ಮಾಡಬಹುದು. ಯಥೋಚಿತ ಸತ್ಕಾರಗಳು ನಿಮಗೆ ಸಿಗಲಿವೆ.
 3. ಮಿಥುನ: ಉದ್ಯೋಗವನ್ನೇ ನಂಬಿಕೊಂಡಿರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಲು ಕಾಯುತ್ತಿರುವ ಜನರಿಗೆ ನೀವು ಆಹಾರವಾಗಲಿದ್ದೀರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.
 4. ಕಟಕ: ಹಣವಿದೆ ಎಂದು ಖರ್ಚಿನ ಪಟ್ಟಿಯನ್ನು ದೊಡ್ಡದಾಗಿಸಿಕೊಳ್ಳಬೇಡಿ. ತುರ್ತು ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ‌. ನೀರಿನ‌ ಪ್ರದೇಶಗಳಿಗೆ ಹೋಗುವ ಮನಸ್ಸು ನಿಮ್ಮದಾಗಲಿದೆ. ಕುಳಿತಲ್ಲೇ ಕುಳಿತು ದೇಹ ಮತ್ತು ಮನಸ್ಸು ಜಡವಾಗಿದೆ ಎಂದು ಅನ್ನಿಸಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ಅವರ ಜೊತೆ ನೀವು ಮಕ್ಕಳಾಗುವಿರಿ.
 5. ಸಿಂಹ: ಹಿಡಿದ ಕೆಲಸವನ್ನು ಬಿಡದೇ ಮುಗಿಸು ಛಾತಿಯ ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮ ಯಾರಾದರೂ ಕೆಣಕಬಹುದು. ಉದ್ವೇಗಕ್ಕೆ ಒಳಗಾಗಿ ಸ್ನೇಹಿತರ ಅಪಹಾಸ್ಯಕ್ಕೆ ಸಿಲುಕಬೇಡಿ. ಆಯಾಸದ ಪ್ರಯಾಣವನ್ನು ಮಾಡುವಿರಿ. ಭಾರವನ್ನು ಎತ್ತುವ ಕೆಲಸಕ್ಕೆ ಹೋಗಬೇಡಿ. ಇಷ್ಟು ದಿನದಿಂದ ಇದ್ದ ಗೊಂದಲಗಳು ಇಂದು ನಿವಾರಣೆಯಾಗಲಿದೆ.
 6. ಕನ್ಯಾ: ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಮುಂದುವರಿಯುವುದು. ಗೌರವಗಳು ಸಮ್ಮಾನಗಳು ನಿಮಗೆ ಸಿಗಲುವೆ. ಕಛೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಒತ್ತಡಗಳನ್ನು ನಿವಾರಿಸುವ ವಿದ್ಯೆಯು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿಮುಗಿಸುವಿರಿ. ದೈವದ ಸಾನ್ನಿಧ್ಯದಲ್ಲಿ ನೀವಿಂದು ಇರಲಿದ್ದೀರಿ. ಹಿರಿಯರು ನಿಮಗೆ ಉಪದೇಶವನ್ನು ಮಾಡುವರು. ಹೊಸ ಕೆಲಸವನ್ನು ಆರಂಭಿಸುವವರು ಆರಂಭಿಸಲು ಯೋಗ್ಯವಾದ ಸಮಯವಾಗಿದೆ.
 7. ತುಲಾ: ಅಪಮಾನಗಳನ್ನು ಎದುರಿಸಬೇಕಾಗಬಹುದು. ಬಂಧುಗಳು ನಿಮ್ಮನ್ನು ಆಡಿಕೊಳ್ಳುವರು. ನಿಮ್ಮ ಮುಂದೆ ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಕೃಷಿಯನ್ನು ಮಾಡುವವರಿಗೆ ಸ್ವಲ್ಪಮಟ್ಟಿನ ಲಾಭವಾಗಲಿದೆ. ತಂದೆಯಿಂದ ಧನಸಹಾಯ ಆಗಲಿದೆ. ಸಹೋದರನು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ಸರ್ಕಾರಿ ಕೆಲಸಗಳು ವೇಗವನ್ನು ಪಡೆಯಲಿವೆ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಲಿದೆ. ಕೆಲಸಗಳು ನಿಧಾನವಾಗಲಿದೆ. ತಾಳ್ಮೆಯನ್ನು ಇರಿಸಿಕೊಳ್ಳಬೇಕು.
 8. ವೃಶ್ಚಿಕ: ಕೆಲವು ಘಟನೆಗಳು ಬೇಸರವನ್ನೂ ತರಿಸಬಹುದು. ಇದರಿಂದ ಸಿಟ್ಟುಕೊಂಡ ನಿರ್ಧಾರಗಳನ್ನು ತೆಗಕೊಳ್ಳುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗಬೇಡಿ. ದಾಂಪತ್ಯದಲ್ಲಿ ಸಣ್ಣ ಒಡಕುಗಳು ಉಂಟಾಗಬಹುದು. ಮೊದಲೇ ಅದನ್ನು ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಗೃಹಬಳಕೆಯ ವಸ್ತುಗಳಿಂದ ಖರ್ಚು ಹೆಚ್ಚಾಗಲಿದೆ. ಭೂಮಿಯ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು.
 9. ಧನು: ಶತ್ರುಗಳು ಮಿತ್ರರಾಗಲಿದ್ದಾರೆ. ನಿಮ್ಮ ಪ್ರಾಭಾವೀ ವ್ಯಕ್ತಿತ್ವವು ಜನಕ್ಕೆ ತಿಳಿಯಲಿದೆ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ಬಂಧುಗಳ ಭೇಟಿ ಸುಖದಾಯಕವಾದುದಾಗಿರುತ್ತದೆ. ಒಂದಕ್ಕೊಸ್ಕರ ಎರಡನ್ನು ಬಿಡಬೇಕಾದೀತು. ಅನುಭವಿಗಳ ಜೊತೆ ಚರ್ಚೆಗಳನ್ನು ಮಾಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಹಿಂದೊಮ್ಮೆ ಆಲೋಚಿಸಿದ್ದ ಕೆಲಸಗಳನ್ನು ಪುನಃ ಆರಂಭಿಸುವಿರಿ.
 10. ಮಕರ: ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬೆಲೆಯು ಕಡಿಮೆಯಾಗಬಹುದು. ಜಲೋದ್ಯಮದವರು ಹೆಚ್ಚಿನ ಲಾಭವನ್ನು ಗಳಿಸುವರು. ಕಫಸಂಬಂಧವಾದ ಕಾಯಿಲೆಯು ನಿಮ್ಮನ್ನು ಹೈರಾಣಮಾಡುವುದು. ಕೃಷಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರ ಅಧಿಕವಾಗಲಿದೆ‌. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಪ್ರೀತಿಯ ವಶಕ್ಕೆ ಬೀಳಲಿದ್ದೀರಿ‌. ಧಾರ್ಮಿಕವಾದ ಕಾರ್ಯಗಳಲ್ಲಿ‌ ನಿರಾಸಕ್ತಿಯು ಬರುವುದು.
 11. ಕುಂಭ: ವಿದೇಶದ ಪ್ರಯಾಣವನ್ನು ಮಾಡಲಿದ್ದೀರಿ‌. ದೇಹಾಲಸ್ಯದಿಂದ ಕಾರ್ಯಗಳು ವಿಳಂಬವಾಗಲಿದೆ. ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಆಪ್ತರನ್ನು ಕಳೆದುಕೊಳ್ಳಬಹುದು. ಬೇಸರಿಸದೇ ವಿಧಿಯ ನಿಯಮವೆಂದು ಸ್ವೀಕರಿಸಿ. ಎದೆಯ ನೋವು ಕಾಣಿಸಿಕೊಂಡೀತು. ಅತಿಯಾದ ಆಹಾರವು ಅಜೀರ್ಣವಾಗಿ ರೋಗವನ್ನು ತರಿಸಬಹುದು. ಸಂಗಾತಿಯ ಹಳೆಯ ಸ್ನೇಹಿತನ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು.
 12. ಮೀನ: ಕಲಾವಿದರಿಗೆ ವಿದೇಶಕ್ಕೆ ಹೋಗಿವ ಅವಕಾಶಗಳು ಲಭ್ಯವಾಗುವುದು. ಭೂಮಿಗೆ ಸಂಬಂಧಿಸಿದ ಕಲಹಗಳು ಇತ್ಯರ್ಥವಾಗಲಿವೆ. ತಾಯಿಯ ಕಡೆಯಿಂದ ನಿಮಗೆ ಸಹಾಯವಾಗಬಹುದು. ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆಗೆ ಖರ್ಚುಮಾಡಬೇಕಾಗಿ ಬರಬಹುದು. ವಿದ್ಯುತ್ ಉಪಕರಣದ ರಿಪೇರಿಗೆ ಅನಿರೀಕ್ಷಿತ ಹಣವನ್ನು ಖರ್ಚುಮಾಡುವಿರಿ. ಸಂಬಂಧಗಳು ಸುಧಾರಿಸವ ಹಂತಕ್ಕೆ ಹೋಗುತ್ತವೆ. ಮಕ್ಕಳು ನಿಮ್ಮ ಪ್ರೀತಿಯನ್ನು ಪಡೆಯುವರು.

-ಲೋಹಿತಶರ್ಮಾ, ಇಡುವಾಣಿ

TV9 Kannada


Leave a Reply

Your email address will not be published. Required fields are marked *