Raichur Accident: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತ ಗಾಯಾಳು. ಹನುಮಂತ ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹನುಮಂತ ಮೇಲೆ ಬಸ್ ಹರಿದಿದೆ. ಘಟನೆಯಲ್ಲಿ ಹನುಮಂತನ ಎರಡೂ ಕಾಲುಗಳು ತುಂಡಾಗಿವೆ.

Humanity: ಬಸ್ ಅಪಘಾತ -ಮಾನವೀಯತೆ ಮರೆತೇ ಬಿಟ್ರಾ ಮನುಷ್ಯರು-ಪೊಲೀಸರು!
ರಾಯಚೂರು: ಮಾನವೀಯತೆಯನ್ನೇ ಮರೆತು ಬಿಟ್ರಾ ಮನುಷ್ಯರು! ಅಪಘಾತವಾಗಿ ಅರ್ಧ ಗಂಟೆಯಾದರೂ ಅತ್ತ, ಬಸ್ ಡಿಪೊ ಅಧಿಕಾರಿಗಳು ಸ್ಥಳಕ್ಕೆ ಬಾರದೇಹೋದರು, ಇತ್ತ, ಮಹಾಜನತೆ ಕೂಡ ಗಾಯಾಳುವಿನ ಸಹಾಯಕ್ಕೆ ಬಾರದೇ ತಮ್ಮಲ್ಲಿ ಮನುಷ್ಯತ್ವ ಎಂಬುದು ನಶಿಸಿಬಿಟ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ. ಕೊನೆಗೆ ಕಾಲೇಜು ವಿದ್ಯಾರ್ಥಿಗಳಿಂದ ಗಾಯಾಳು ರಕ್ಷಣೆಯಾಗಿದೆ.
ಏನಿದು ಘಟನೆ:
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ವಿರುಪಾಪುರ ಗ್ರಾಮದ ಹನುಮಂತ ಗಾಯಾಳು. ಹನುಮಂತ ಸಿಂಧನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಹನುಮಂತ ಮೇಲೆ ಬಸ್ ಹರಿದಿದೆ. ಘಟನೆಯಲ್ಲಿ ಹನುಮಂತನ ಎರಡೂ ಕಾಲುಗಳು ತುಂಡಾಗಿವೆ. ಹನುಮಂತ ರಕ್ತಸಿಕ್ತಗೊಂಡು, ಮೂರ್ಚೆ ಹೋಗಿದ್ದ. ಅ ವೇಳೆ, ಸ್ಥಳೀಯರು ಅರ್ಧ ಗಂಟೆಯಾದರೂ ಗಾಯಾಳು ಸಹಾಯಕ್ಕೆ ಬರಲಿಲ್ಲ. ಕೊನೆಗೆ ಗಾಯಾಳು ಹನುಮಂತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು ಕಾಲೇಜು ವಿದ್ಯಾರ್ಥಿಗಳು. ಘಟನೆ ನಡೆದೂ ಅರ್ಧ ಗಂಟೆಯಾದರೂ ಸಿಂಧನೂರು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಾರದೇ ಹೋಗಿದ್ದು ಶೂಚನೀಯ.