Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು | Hurricane Ian makes Landfall in Florida Houses Swept Away Flights Canceled Kannada News


ಬುಧವಾರ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್​ನಲ್ಲಿ ಭಾರೀ ಹಾನಿಯಾಗಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ.

Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು

ಇಯಾನ್ ಚಂಡಮಾರುತ

ಫ್ಲೋರಿಡಾ: ಕ್ಯೂಬಾದಲ್ಲಿ ರೌದ್ರಾವತಾರ ತೋರಿದ್ದ ಇಯಾನ್ ಚಂಡಮಾರುತ (Hurricane Ian) ಇದೀಗ ಅಮೆರಿಕಾದ ಫ್ಲೋರಿಡಾಗೆ (Florida) ಕಾಲಿಟ್ಟಿದೆ. ನಿರೀಕ್ಷೆಗಿಂತ ಹೆಚ್ಚು ಅನಾಹುತಗಳನ್ನು ಸೃಷ್ಟಿಸುತ್ತಿರುವ ಇಯಾನ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಭಾರೀ ತೀವ್ರತೆಯ ಇಯಾನ್ ಚಂಡಮಾರುತ (Ian Cyclone) ಅಪ್ಪಳಿಸಿರುವುದರಿಂದ ಫ್ಲೋರಿಡಾದ ಆಡಳಿತ ಮಂಡಳಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್​ನಲ್ಲಿ ಭಾರೀ ಹಾನಿಯಾಗಿದೆ. ಕಾರುಗಳು, ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಅಪಾಯಕಾರಿ ಇಯಾನ್ ಚಂಡಮಾರುತದಿಂದ ಮನೆಗಳು ಕೊಚ್ಚಿಕೊಂಡು ಹೋಗಿವೆ.

ಇಯಾನ್ ಚಂಡಮಾರುತದಿಂದ ಅಮೆರಿಕದಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿರುವ ಇಯಾನ್ ಚಂಡಮಾರುತದಿಂದ ಬೋಟ್ ಮುಳುಗಿ 20 ವಲಸಿಗರು ನಾಪತ್ತೆಯಾಗಿದ್ದಾರೆ. ಕರಾವಳಿ ನಗರವಾದ ನೇಪಲ್ಸ್‌ನಲ್ಲಿನ ಚಂಡಮಾರುತದ ಆಘಾತಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರವಾಹದ ನೀರು ಬೀಚ್‌ಫ್ರಂಟ್ ಮನೆಗಳಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 80,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಫೋರ್ಟ್ ಮೈಯರ್ಸ್‌ನ ಕೆಲವು ಪ್ರದೇಶಗಳು ನೀರಿನಿಂದ ಆವೃತವಾಗಿ ಸಮುದ್ರದಂತೆ ಕಾಣುತ್ತಿವೆ.

TV9 Kannada


Leave a Reply

Your email address will not be published.