Hyderabad Gangrape ಹೈದರಾಬಾದ್: ಮರ್ಸಿಡೆಸ್ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ | Minor girl molested and gang raped in a Mercedes car in Hyderabad MLA’s son under radar


ಹೈದರಾಬಾದ್​ ಅತ್ಯಾಚಾರ ಪ್ರಕರಣ: ಶನಿವಾರ ಈ ಘಟನೆ ನಡೆದಿದೆ. ಇದೀಗ ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹೈದರಾಬಾದ್‌ನಲ್ಲಿ(Hyderabad)ಅಪ್ರಾಪ್ತ ಬಾಲಕಿಯನ್ನು ಮರ್ಸಿಡಿಸ್ ಕಾರಿನಲ್ಲಿ (Mercedes car) ಮೂರ್ನಾಲ್ಕು ಮಂದಿ ಕಿರುಕುಳ ನೀಡಿ ಸಾಮೂಹಿಕ ಅತ್ಯಾಚಾರ (gang rape) ಎಸಗಿರುವ ಪ್ರಕರಣ ವರದಿ ಆಗಿದೆ. ಅಪರಾಧದಲ್ಲಿ ಶಾಸಕರೊಬ್ಬರ ಪುತ್ರನೂ ಭಾಗಿಯಾಗಿದ್ದಾನೆ   ಪೊಲೀಸ್ ಮೂಲಗಳು ತಿಳಿಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು ಅಪ್ರಾಪ್ತರಾಗಿದ್ದಾರೆ. ಜೂನ್ 1ರಂದು ಜುಬಿಲಿ ಹಿಲ್ಸ್  ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶನಿವಾರ ಈ ಘಟನೆ ನಡೆದಿದೆ. ಇದೀಗ ಘಟನೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 17ರ ಹರೆಯದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಇದೀಗ ಪ್ರಕರಣವನ್ನು ಬದಲಾಯಿಸಿ ಐಪಿಸಿಯ ಸೆಕ್ಷನ್ 376 (ಗ್ಯಾಂಗ್ ರೇಪ್) ಅನ್ನು ಸೇರಿಸಿದ್ದಾರೆ.

ಶಾಸಕರ ಪುತ್ರ ಮತ್ತು ಅಲ್ಪಸಂಖ್ಯಾತ ಮಂಡಳಿಯ ಅಧ್ಯಕ್ಷರು ಪಾರ್ಟಿಯಲ್ಲಿ ಹಾಜರಿದ್ದರು. ಇವರು ಹುಡುಗಿಯ ಜೊತೆಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ. ಸಂತ್ರಸ್ತೆ ಒಬ್ಬ ಆರೋಪಿಯನ್ನು ಗುರುತಿಸಿದ್ದು ಆತನೂ ಅಪ್ರಾಪ್ತ ಎಂದು ಇಂಡಿಯಾ  ಟುಡೇ ವರದಿ ಮಾಡಿದೆ. 17 ವರ್ಷದ ಯುವತಿ ತನ್ನ ಫ್ರೆಂಡ್ ಜತೆಗೆ ಪಬ್‌ಗೆ ಹೋಗಿದ್ದಳು. ಸಂಜೆ 5.30ರ ಸುಮಾರಿಗೆ ಸ್ಥಳದಿಂದ ಮನೆಗೆ ತೆರಳುತ್ತಿದ್ದಾಗ, ಪಬ್‌ನಲ್ಲಿ ಆಕೆಯನ್ನು ಭೇಟಿಯಾದ ಕೆಲವು ಯುವಕರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಮೂರ್ನಾಲ್ಕು ಯುವಕರಿದ್ದ ಅವರ ವಾಹನವನ್ನು ಹುಡುಗಿ ಹತ್ತಿದಳು. “ಕಾರನನ್ನು ಕತ್ತಲೆಯಿರುವ ಜಾಗದಲ್ಲಿ ನಿಲ್ಲಿಸಿ ಯುವಕರು ಒಬ್ಬರ ನಂತರ ಒಬ್ಬರಂತೆ ಅವಳ ಮೇಲೆ ಅತ್ಯಾಚಾರವೆಸಗಿದ್ದಾರೆ” ಎಂದು ಪ್ರಕರಣದ ತನಿಖೆಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಬಾಲಕಿಯ ಹೇಳಿಕೆಯನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಪಬ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದ ವ್ಯಕ್ತಿಗಳು ಮತ್ತು ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ನಾನ್ ಅಲ್ಕೋಹಾಲಿಕ್ (ಮದ್ಯ ಇಲ್ಲದ) ಪಾರ್ಟಿ ಆಗಿತ್ತು ಅದು. ಪಾರ್ಟಿಯಲ್ಲಿದ್ದ ವ್ಯಕ್ತಿಗಳಿಗೆ ಯಾವುದೇ ಮದ್ಯವನ್ನು ನೀಡಲಾಗಿಲ್ಲ ಎಂದು ಪಬ್ ನವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಿವಿಧ ಪ್ರದೇಶಗಳಲ್ಲಿನ ಕಣ್ಗಾವಲು ಕ್ಯಾಮೆರಾಗಳ ವೀಡಿಯೊ ದೃಶ್ಯಾವಳಿಗಳನ್ನು ವಿಶ್ಲೇಷಿಸುವ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. “ಆದಾಗ್ಯೂ ಅಪರಾಧವು ರಾತ್ರಿಯಲ್ಲಿ ನಡೆದಿರುವುದರಿಂದ, ವಿಡಿಯೊ ತುಣುಕಿನಿಂದ ನಮಗೆ ವಿವರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *