ನವದೆಹಲಿ: ಜಮ್ಮುನ IAF ವಿಮಾನ ನಿಲ್ದಾಣದಲ್ಲಿ ಇಂದು ನಡೆದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದೀಗ ಬಂದ ಮಾಹಿತಿ ಪ್ರಕಾರ ಉಗ್ರರು ಕೃತ್ಯ ಇದಾಗಿದ್ದು, ಬಾಂಬ್ ಎಸೆಯಲು ಡ್ರೋಣ್ ಬಳಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್​​ ಸಹಾಯದಿಂದ ಉಗ್ರರು ದುಷ್ಕೃತ್ಯ ನಡೆಸಿದ್ದಾರೆ.

ವಿಮಾನ ನಿಲ್ದಾಣದ ಹೆಲಿಕಾಪ್ಟರ್​ ಹ್ಯಾಂಗ್ ಬಳಿ IED ಬೀಳಿಸಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಐಎಎಫ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ. ಆದರೆ ಅಲ್ಲಿದ್ದ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ IAF.. ಕಡಿಮೆ ತೀವ್ರತೆಯ ಸ್ಫೋಟಕ ಸ್ಫೋಟಗೊಂಡಿದೆ. ಮೊದಲನೇ ಸ್ಫೋಟ ಕಟ್ಟಡದ ಛಾವಣಿಗೆ ಹಾನಿಮಾಡಿದೆ. ಇನ್ನೊಂದ ಓಪನ್ ಏರಿಯಾದಲ್ಲಿ ಸ್ಫೋಟಗೊಂಡಿದೆ. ಆದರೆ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ಆದರೆ ಐಎಎಫ್ ಡ್ರೋಣ್ ಸಹಾಯದಿಂದ ಸ್ಫೋಟ ನಡೆದಿದೆ ಅಂತಾ ಹೇಳಿಲ್ಲ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಏರ್​​​ಪೋರ್ಟ್​​ನಲ್ಲಿ ಭಾರೀ ಸ್ಫೋಟದ ಸದ್ದು- ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡು

The post IAF ಏರ್​ಪೋರ್ಟ್​ನಲ್ಲಿ ಸ್ಫೋಟ: ಬಾಂಬ್ ಎಸೆಯಲು ಫಸ್ಟ್​ ಟೈಂ ಡ್ರೋಣ್ ಬಳಸಿದ ಉಗ್ರರು appeared first on News First Kannada.

Source: newsfirstlive.com

Source link