ಜಮ್ಮು: ಲಷ್ಕರ್​-ಎ-ತೊಯ್ಬಾ ಉಗ್ರ ಸಂಘಟನೆಯಿಂದ ಮುಂದೆ ನಡೆಯಬೇಕಿದ್ದ ಭಾರೀ ದೊಡ್ದದಾದ ವಿದ್ವಂಸಕ ಕೃತ್ಯವನ್ನ ಜಮ್ಮು-ಕಾಶ್ಮೀರದ ಪೊಲೀಸರು ತಪ್ಪಿಸಿದ್ದಾರೆ. 20 ವರ್ಷದ ಲಷ್ಕರ್​ ಉಗ್ರನನ್ನ ಪೊಲೀಸರು ಬಂಧಿಸಿ, ಆತನಿಂದ 6 ಕೆಜಿ ಐಇಡಿ ಸ್ಫೋಟಕಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಜಮ್ಮುವಿನ ವಾಯುನೆಲೆ ಮೇಲೆ ಐಇಡಿ ಸ್ಫೋಟ ಬೆನ್ನಲ್ಲೇ ಉಗ್ರನನ್ನ ಬಂಧಿಸಿರೋದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಜಮ್ಮುವಿನಲ್ಲಿ ಭದ್ರತೆಯನ್ನ ಮತ್ತಷ್ಟು ಹೆಚ್ಚಿಸಲಾಗಿದೆ. ಸದ್ಯ ಬಂಧಿತ ಉಗ್ರನ ತನಿಖೆ ಮುಂದುವರಿದಿದ್ದು, ಈತ.. ಜನಸಂದಣಿ ಇರುವ ಸ್ಥಳಗಳಲ್ಲಿ ಸ್ಫೋಟ ಮಾಡಲು ಸ್ಕೆಚ್ ಹಾಕಿದ್ದ ಅನ್ನೋದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡರುವ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್​ಬಗ್ ಸಿಂಗ್.. ನಮ್ಮ ಪೊಲೀಸರು ಬಂಧಿತನಿಂದ IEDಗಳನ್ನ ವಶಕ್ಕೆ ಪಡೆದಿದ್ದಾರೆ. ಅವುಗಳ ಒಟ್ಟು ತೂಕ ಸರಿಸುಮಾರು 5-6 ಕೆಜಿ ಇದೆ. ಬಂಧಿತ ವ್ಯಕ್ತಿ ಕ್ರೌಡ್ ಇರುವ ಸ್ಥಳಗಳಲ್ಲಿ ಅಟ್ಯಾಕ್ ಮಾಡಲು ಪ್ಲಾನ್ ಮಾಡಿದ್ದ. ಈ ಮೂಲಕ ದೊಡ್ಡ ಅನಾಹುತವನ್ನ ನಮ್ಮ ಪೊಲೀಸರು ತಪ್ಪಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ ಅಂತಾ ತಿಳಿಸಿದ್ದಾರೆ.

The post IAF ಏರ್​ಬೇಸ್ ಸ್ಫೋಟ ಬೆನ್ನಲ್ಲೇ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್​; 6 ಕೆ.ಜಿ IED ಜೊತೆ ಲಷ್ಕರ್ ಉಗ್ರ ಅರೆಸ್ಟ್ appeared first on News First Kannada.

Source: newsfirstlive.com

Source link