IAF ವಾಯುನೆಲೆ ಮೇಲೆ ದಾಳಿ ಬೆನ್ನಲ್ಲೇ ಶ್ರೀನಗರದಲ್ಲಿ ಡ್ರೋಣ್ ಬಳಕೆ ನಿಷೇಧ

IAF ವಾಯುನೆಲೆ ಮೇಲೆ ದಾಳಿ ಬೆನ್ನಲ್ಲೇ ಶ್ರೀನಗರದಲ್ಲಿ ಡ್ರೋಣ್ ಬಳಕೆ ನಿಷೇಧ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋಣ್ ದಾಳಿ ಬೆನ್ನಲ್ಲೇ ಶ್ರೀನಗರದಲ್ಲಿ ಡ್ರೋಣ್ ಕ್ಯಾಮೆರಾಗಳ ಬಳಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯೊಂದನ್ನ ಶ್ರೀನಗರ ಆಡಳಿತ ಹೊರತಂದಿದೆ. ಮಾರ್ಗಸೂಚಿಯಲ್ಲಿ ಶ್ರೀನಗರ ಜಿಲ್ಲೆಯಲ್ಲಿ ಡ್ರೋಣ್​ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೇ ಇವುಗಳನ್ನು ಹೊಂದಿರುವವರು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.

ವಾರದ ಹಿಂದೆ ಐಎಎಫ್​ ವಾಯುನೆಲೆ ಮೇಲೆ ಎರಡು ಪ್ರತ್ಯೇಕ ಸ್ಫೋಟ ನಡೆದಿತ್ತು. ಈ ದಾಳಿಯಲ್ಲಿ ಡ್ರೋಣ್ ಬಳಕೆಯಾಗಿತ್ತು. ಉಗ್ರರ ಈ ಕೃತ್ಯದಲ್ಲಿ ಇಬ್ಬರು ಐಎಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡ್ರೋನ್​ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿರುವ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್​​.. ಜನದಟ್ಟಣೆ ಇರುವಲ್ಲಿ ಮತ್ತು ಪ್ರಮುಖ ಕಟ್ಟಡಗಳಲ್ಲಿರುವಲ್ಲಿ ಸುರಕ್ಷತೆ ಕಾಪಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದೆ.

ಇನ್ನು ಸಾರ್ವಜನಿರ ಉಪಯೋಗಕ್ಕೆ ಸರ್ಕಾರಿ ಅಧಿಕಾರಿಗಳು ಡ್ರೋಣ್​ಗಳನ್ನ ಬಳಸಬಹುದಾಗಿದೆ. ಅಂದರೆ ಕೃಷಿ ಚಟುವಟಿಕೆ, ಇನ್ವಿರಾನ್ಮೆಂಟಲ್, ವಿಪತ್ತು ಸಂದರ್ಭದಲ್ಲಿ ಡ್ರೋಣ್​ಗಳನ್ನ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಅಧಿಕಾರಿಗಳು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನ ನೀಡಬೇಕು, ಜೊತೆಗೆ ಡ್ರೋಣ್ ಬಳಕೆಯಾಗುವ ಏರಿಯಲ್​ ಮ್ಯಾಪ್​ನ ವಿವರ ಸಹ ನೀಡಲು ಸೂಚನೆ ನೀಡಲಾಗಿದೆ.

ಈ ಮೂಲಕ ಜಮ್ಮು-ಕಾಶ್ಮೀರದಲ್ಲಿ ಡ್ರೋಣ್ ಬಳಕೆ ಬ್ಯಾನ್ ಮಾಡಿದ ಎರಡನೇ ಜಿಲ್ಲೆ ಶ್ರೀನಗರವಾಗಿದೆ. ಇದಕ್ಕೂ ಮೊದಲು ರಜೌರಿ ಜಿಲ್ಲಾಡಳಿತ ಡ್ರೋಣ್ ಬಳಕೆಗೆ ನಿಷೇಧ ಹೇರಿತ್ತು. ಮಾತ್ರವಲ್ಲ.. ದಾಳಿ ಬಳಿಕ ಮತ್ತಷ್ಟು ಎಚ್ಚೆತ್ತುಕೊಂಡಿರುವ ಇಲ್ಲಿನ ಪೊಲೀಸರು, ಗಡಿ ಪ್ರದೇಶದಲ್ಲಿನ ಪ್ರತೀ ಹಳ್ಳಿ ಹಳ್ಳಿಗೆ ಹೋಗಿ ಡ್ರೋಣ್​​ ಬಳಕೆಯಾಗುತ್ತಿದ್ದರೆ ಮಾಹಿತಿ ನೀಡಿ ಎಂದು ವಿಚಾರಿಸುತ್ತಿದ್ದಾರೆ.

The post IAF ವಾಯುನೆಲೆ ಮೇಲೆ ದಾಳಿ ಬೆನ್ನಲ್ಲೇ ಶ್ರೀನಗರದಲ್ಲಿ ಡ್ರೋಣ್ ಬಳಕೆ ನಿಷೇಧ appeared first on News First Kannada.

Source: newsfirstlive.com

Source link