IAF ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ ಬಳಕೆ.. ಇಬ್ಬರು ಶಂಕಿತರು ವಶಕ್ಕೆ 

IAF ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ ಬಳಕೆ.. ಇಬ್ಬರು ಶಂಕಿತರು ವಶಕ್ಕೆ 

ನವದೆಹಲಿ: ಜಮ್ಮುವಿನ IAF ಏರ್​ಬೇಸ್​​ನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಸ್ಫೋಟ ನಡೆಸಲು ಡ್ರೋಣ್ ಬಳಸಿದ್ದಾರೆ, ಅದ್ರಲ್ಲೂ ಪಾಕ್ ಮೂಲದ ಡ್ರೋಣ್ ಬಳಕೆಯಾಗಿದೆ ಎನ್ನಲಾಗುತ್ತಿದೆ. ಇದೀಗ ಬಂದ ಮಾಹಿತಿ ಪ್ರಕಾರ.. ಎರಡು ಕಡೆ ಕೃತ್ಯ ನಡೆಸಿರುವ ಉಗ್ರರು.. ಪ್ರತ್ಯೇಕ ಎರಡು ಡ್ರೋಣ್​​ಗಳನ್ನ ಬಳಸಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇನ್ನು ಘಟನಾ ಸ್ಥಳಕ್ಕೆ ಎನ್​ಐಎ ಅಧಿಕಾರಿಗಳ ತಂಡ ಭೇಟಿ ನೀಡಿ ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಲೋ-ಇಂಟೆನ್ಸಿಟಿ ಸ್ಫೋಟ ನಡೆದಿದ್ದು, ಸ್ಫೋಟದ ಸದ್ದು ಸುಮಾರು 2 ಕಿಲೋ ಮೀಟರ್ವರೆಗೆ ಕೇಳಿಸಿದೆ. ಅಲ್ಲದೇ ಈ ಸಂಬಂಧ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ.

ಇದರ ಮಧ್ಯೆ ಐಎಎಫ್​ ಉನ್ನತ ಅಧಿಕಾರಿಗಳ ಸಭೆ ನಡೆಸಲಿದೆ. ಪಾರ್ಕ್​​ ಮಾಡಿದ್ದ ವಿಮಾನಗಳನ್ನ ಡ್ರೋಣ್ ಮೂಲಕ ಟಾರ್ಗೆಟ್ ಮಾಡಲಾಗಿತ್ತಾ? ಇನ್ಮುಂದೆ ಡ್ರೋಣ್ ಮೂಲಕ ಯುದ್ಧ ವಿಮಾನಗಳನ್ನ ಟಾರ್ಗೆಟ್​ ಮಾಡಿದ್ರೆ ಹೇಗೆ ಕ್ರಮಕೈಗೊಳ್ಳಬಹುದು ಅನ್ನೋದ್ರ ಕುರಿತು ಚರ್ಚೆ ನಡೆಯಲಿದೆ.

The post IAF ವಾಯುನೆಲೆ ಸ್ಫೋಟಕ್ಕೆ 2 ಪ್ರತ್ಯೇಕ ಡ್ರೋಣ್ ಬಳಕೆ.. ಇಬ್ಬರು ಶಂಕಿತರು ವಶಕ್ಕೆ  appeared first on News First Kannada.

Source: newsfirstlive.com

Source link