ಕೆಎಎಸ್ ಪಾಸ್ ಮಾಡಿಸುವುದಾಗಿ ಹೇಳಿ ವಂಚಕ ಹಣ ಪಡೆದಿದ್ದ. ವಂಚನೆಗೊಳಗಾದ ಸವಿತಾ ಶಾಂತಪ್ಪ ದೂರಿನ ಮೇರೆಗೆ ವಂಚಕನನ್ನು ಬಂಧನ ಮಾಡಲಾಗಿದೆ.

ಆರೋಪಿ ಸಿದ್ದರಾಜು ಕಟ್ಟಿಮನಿ
ಬೆಂಗಳೂರು: ಐ.ಎ.ಎಸ್, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿ 59 ಲಕ್ಷ ರೂ. ವಂಚನೆ (Fraud) ಮಾಡಿದ್ದ ಆರೋಪಿ ಸಿದ್ದರಾಜು ಕಟ್ಟಿಮನಿ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಕೆಎಎಸ್ ಪಾಸ್ ಮಾಡಿಸುವುದಾಗಿ ಹೇಳಿ ವಂಚಕ ಹಣ ಪಡೆದಿದ್ದ. ವಂಚನೆಗೊಳಗಾದ ಸವಿತಾ ಶಾಂತಪ್ಪ ದೂರಿನ ಮೇರೆಗೆ ವಂಚಕನನ್ನು ಬಂಧನ ಮಾಡಲಾಗಿದೆ. ಸವಿತಾ ಮೂಲತಃಹ ಕಲಬುರಗಿ ಜಿಲ್ಲೆಯ ಅಫಜಲಪುರದವರು. ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸವಿತಾಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದ. ಆರೋಪಿಗೆ ಮೊದಲ ಹಂತದಲ್ಲಿ 15 ಲಕ್ಷ ಹಣ ನೀಡಿದ್ದ ಸವಿತಾ, ಬಳಿಕ ಹಂತ ಹಂತವಾಗಿ 59 ಲಕ್ಷ ಹಣ ಸಿದ್ದರಾಜ್ ಪೀಕಿದ್ದಾನೆ.
IAS ಅಧಿಕಾರಿ ಶಾಲಿನಿ ರಜನೀಶ್, ಪ್ರವೀಣ್ ಸೂದ್ ನನಗೆ ಪರಿಚಿತರೆಂದು ಸಿದ್ದರಾಜ್ ನಂಬಿಸಿದ್ದ. ಜಮೀನು ಅಡಮಾನವಿಟ್ಟು ಸವಿತಾ ತಂದೆ ಶಾಂತಪ್ಪ ಹಣ ನೀಡಿದ್ದರು. ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದ. ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದು ಹಣ ಪಡೆದು ಸವಿತಾಗೆ ಬೆದರಿಕೆ ಹಾಕಿದ್ದ. ಕೆಲಸ ಸಿಗದೇ ಹಣವೂ ಕಳೆದುಕೊಂಡು ಸವಿತಾ ಕುಟುಂಬ ಕಣ್ಣೀರು ಹಾಕಿದೆ. ಸದ್ಯ ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನನ್ವಯ ಐಪಿಸಿ 420 ಅಡಿ ಪ್ರಕರಣ ದಾಖಲಿಸಿ ಸಿದ್ದರಾಜ್ ಕಟ್ಟಿಮನಿ ಬಂಧನ ಮಾಡಲಾಗಿದೆ.