ICC U19 World Cup 2022: ಇಂದಿನಿಂದ ಅಂಡರ್-19 ವಿಶ್ವಕಪ್: ಭಾರತದ ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ? | U19 World Cup starts from today When and where to watch live telecast in India live streaming in IST


ICC U19 World Cup 2022: ಇಂದಿನಿಂದ ಅಂಡರ್-19 ವಿಶ್ವಕಪ್: ಭಾರತದ ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ?

ICC U19 Cricket World Cup

ಕೆರಿಬಿಯನ್ನರ ನಾಡಿನಲ್ಲಿ ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಲಿದೆ. 14ನೇ ಆವೃತ್ತಿಯ ಐಸಿಸಿ ಅಂಡರ್ – 19 ವಿಶ್ವಕಪ್ ಟೂರ್ನಿಗೆ (ICC U19 World Cup 2022) ಇಂದು ಚಾಲನೆ ಸಿಗಲಿದ್ದು, ಒಂದು ಪ್ರಶಸ್ತಿಗಾಗಿ 16 ತಂಡಗಳು ಸೆಣೆಸಾಟ ನಡೆಸಲಿದೆ. ಕೋವಿಡ್ (Covid) ಕಾರಣದಿಂದ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಟೂರ್ನಿ ಆಯೋಜಿಸಲಾಗಿದ್ದು, ಒಟ್ಟು 4 ಮೈದಾನದಲ್ಲಿ ಫೆಬ್ರವರಿ 5 ರ ವರೆಗೆ ಪಂದ್ಯಗಳ ನಡೆಯಲಿದೆ. ಇಂದಿನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಅಂಡರ್-19 ಬಲಿಷ್ಠ ಆಸ್ಟ್ರೇಲಿಯಾ ಅಂಡರ್-19 (West Indies U19 vs Australia U19) ತಂಡವನ್ನು ಎದುರಿಸಲಿದೆ. ಜ. 15ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ಭಾರತದ (IND u19 vs SAU19) ಅಭಿಯಾನ ಮೊದಲ್ಗೊಳ್ಳಲಿದೆ. ಬಳಿಕ ಜ. 19ರಂದು ಐರ್ಲೆಂಡ್‌ ವಿರುದ್ಧ, ಜ. 22ರಂದು ಉಗಾಂಡ ವಿರುದ್ಧ ಆಡಲಿದೆ.

ಕಿರಿಯ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಒಟ್ಟು 48 ಪಂದ್ಯಗಳು ಜರುಗಲಿವೆ. ಅತಿ ಹೆಚ್ಚು ಕಿರಿಯರ ವಿಶ್ವಕಪ್‌ ಗೆದ್ದ ದಾಖಲೆಯನ್ನು ಭಾರತ ಹೊಂದಿದೆ. 2000, 2008, 2012 ಹಾಗೂ 2018ರ ಆವೃತ್ತಿಗಳಲ್ಲಿ ಭಾರತ ಅಂಡರ್‌ 19 ತಂಡ ಕಿರಿಯರ ವಿಶ್ವಕಪ್‌ ಗೆದ್ದಿದೆ. ಇದರ ಜೊತೆಗೆ 2016 ಹಾಗೂ 2020ರ ಆವೃತ್ತಿಯಲ್ಲಿಯೂ ಭಾರತ ರನ್ನರ್‌ ಅಪ್‌ ಆಗಿತ್ತು.

ತಲಾ ನಾಲ್ಕು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಸೂಪರ್‌ ಲಿಂಗ್‌ಗೆ ಅರ್ಹತೆಯನ್ನು ಪಡೆದುಕೊಂಡರೆ, ಇನ್ನುಳಿದ ತಂಡಗಳು 23 ದಿನಗಳ ಕಾಲ ನಡೆಯುವ ಪ್ಲೇಟ್‌ ಪಂದ್ಯಗಳಲ್ಲಿ ಸೆಣಸಲಿವೆ. ಗುಂಪು ಹಂತದಲ್ಲಿ ಭಾರತ ತಂಡ ಎರಡು ಪಂದ್ಯಗಳಲ್ಲಿ ಗೆಲುವು ಪಡೆದರೆ, ನೇರವಾಗಿ ಸೂಪರ್‌ ಲೀಗ್‌ಗೆ ಅರ್ಹತೆಯನ್ನು ಪಡದುಕೊಳ್ಳಲಿದೆ.

ದಿಲ್ಲಿಯ ಸ್ಟಾರ್ ಬ್ಯಾಟರ್ ಯಶ್‌ ಧುಲ್‌ ನಾಯಕತ್ವದ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಿಲ್ಲಿಯವರೇ ಆದ ವಿರಾಟ್‌ ಕೊಹ್ಲಿ ಮತ್ತು ಉನ್ಮುಕ್ತ್ ಚಂದ್‌ ನೇತೃತ್ವದಲ್ಲಿ ಭಾರತ ಕಿರೀಟ ಏರಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಧುಲ್‌ ಸಾರಥ್ಯದಲ್ಲೇ ಭಾರತ ಇತ್ತೀಚೆಗೆ ಅಂಡರ್‌-19 ಏಶ್ಯಾ ಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಭಾರತ 19 ವಯೋಮಿತಿ ತಂಡ: ಯಶ್‌ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿ.ಕೀ), ಆರಾಧ್ಯ ಯಾದವ್ (ವಿ.ಕೀ), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್‌ಎಸ್ ಹಂಗರ್ಗೆಕರ್ ವತ್ಸ್‌, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್

ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮೃತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್.

ನೇರಪ್ರಸಾರ: ಎಲ್ಲ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭವಾಗಲಿವೆ. ಸ್ಟಾರ್‌ ಸೋರ್ಟ್ಸ್ ನಲ್ಲಿ ನೇರ ಪ್ರಸಾರ ಮೂಡಿಬರಲಿದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ಲೈವ್ ವೀಕ್ಷಿಸಬಹುದು.

South Africa vs India: ಟೀಮ್ ಇಂಡಿಯಾ ಬೌಲರ್​​ಗಳು ಮಾಡ್ತಾರ ಪವಾಡ?: ಇಂದು ನಿರ್ಧಾರವಾಗಲಿದೆ ಸರಣಿ ಗೆಲುವಿನ ಭವಿಷ್ಯ

TV9 Kannada


Leave a Reply

Your email address will not be published. Required fields are marked *