ICC: ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ ಭಾರತ ವನಿತಾ ತಂಡದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.

ಭಾರತ ವನಿತಾ ತಂಡ
ಐಸಿಸಿ ಬಿಡುಗಡೆ ಮಾಡಿರುವ ವರ್ಷದ ಟಿ20 ಮಹಿಳಾ ಕ್ರಿಕೆಟ್ ತಂಡದಲ್ಲಿ ಭಾರತ ವನಿತಾ ತಂಡದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಸೋಮವಾರ, ಐಸಿಸಿ ಪ್ರಕಟಿಸಿರುವ ಅತ್ಯುತ್ತಮ ಮಹಿಳಾ ಟಿ20 ತಂಡವನ್ನು ಪ್ರತಿಯೊಬ್ಬ ಆಟಗಾರ್ತಿಯ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಈ ತಂಡದ ನಾಯಕತ್ವವನ್ನು ನ್ಯೂಜಿಲೆಂಡ್ನ ಸೋಫಿ ಡಿವೈನ್ಗೆ ವಹಿಸಲಾಗಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರ್ತಿಯರಲ್ಲಿ ಮೊದಲಿಗರಾಗಿದ್ದಾರೆ. ಅವರ ನಂತರ ದೀಪ್ತಿ ಶರ್ಮಾ, ರಿಚಾ ಘೋಷ್ ಮತ್ತು ರೇಣುಕಾ ಸಿಂಗ್ ಹೆಸರುಗಳಿವೆ. ಐಸಿಸಿ ತಂಡದಲ್ಲಿ ಗರಿಷ್ಠ ಸಂಖ್ಯೆಯ 4 ಆಟಗಾರ್ತಿಯರು ಭಾರತದವರಾಗಿದ್ದು, ಇವರ ನಂತರ ಆಸ್ಟ್ರೇಲಿಯಾ ತಂಡದ 3 ಆಟಗಾರ್ತಿಯರು ಹಾಗೂ ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಿಂದ ತಲಾ ಒಬ್ಬೋಬ್ಬ ಆಟಗಾರ್ತಿಯರು ತಂಡಕ್ಕೆ ಆಯ್ಕೆಯಾಗಿದ್ದಾರೆ.
🇮🇳 x 4🇦🇺 x 3🇳🇿 🇵🇰 🏴 🇱🇰 x 1
ತಾಜಾ ಸುದ್ದಿ
Unveiling the ICC Women’s T20I Team of the Year 2022 🤩 #ICCAwards
— ICC (@ICC) January 23, 2023