IFFI 2021: ಇಬ್ಬರು ಖ್ಯಾತ ನಿರ್ದೇಶಕರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ | International Film Festival of India Martin Scorsese, Istvan Szabo Conferred Satyajit Ray Lifetime Achievement Award


IFFI 2021: ಇಬ್ಬರು ಖ್ಯಾತ ನಿರ್ದೇಶಕರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ

ಇಸ್ಟ್​​ವಾನ್ ಸಬೊ, ಮಾರ್ಟಿನ್ ಸ್ಕಾಸ್​​​ಸೇಜಿ​

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2021 (IFFI 2021)  ಗೋವಾದಲ್ಲಿ ಇಂದು (ನವೆಂಬರ್​ 20) ನಡೆಯಿತು. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು ಆಗಮಿಸಿ ವೇದಿಕೆಯ ಅಂದ ಹೆಚ್ಚಿಸಿದರು. ಈ ಕಾರ್ಯಕ್ರಮದಲ್ಲಿ ಅಮೆರಿಕದ ಹಿರಿಯ ನಿರ್ದೇಶಕ ಮಾರ್ಟಿನ್ ಸ್ಕಾಸ್​​​ಸೇಜಿ​, ಇಸ್ಟ್​​ವಾನ್ ಸಬೊಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಕಾರಣಂತಾರಗಳಿಂದ ಅವರು ಈ ಕಾರ್ಯಕ್ರಮಕ್ಕೆ ಬರೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಇಬ್ಬರೂ ವಿಡಿಯೋ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದರು.

ಮಾರ್ಟಿನ್ ಸ್ಕಾಸ್​​​ಸೇಜಿ​, ಇಸ್ಟ್​​ವಾನ್ ಸಬೊ ಇಬ್ಬರಿಗೂ ಈ ಪ್ರಶಸ್ತಿ ನೀಡಲಾಗಿದೆ. ಆದರೆ, ಇಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ವಿಡಿಯೋ ಸಂದೇಶದ ಮೂಲಕ ಅವರು ಧನ್ಯವಾದ ಹೇಳಿದ್ದಾರೆ. ‘ನೀವು ನನ್ನ ಚಲನಚಿತ್ರಗಳನ್ನು ನೋಡಿದ್ದೀರಿ ಮತ್ತು ಅವುಗಳನ್ನು ಇಷ್ಟಪಟ್ಟಿದ್ದೀರಿ ಎಂದು ನನಗೆ ತಿಳಿದಿದೆ.  ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಸತ್ಯಜಿತ್​ ಅವರು ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಊಟಕ್ಕೆ ಕರೆದಿದ್ದರು. ಊಟ ನಿಜಕ್ಕೂ ಅದ್ಭುತವಾಗಿತ್ತು. ನಾವು ಅವರ ಚಲನಚಿತ್ರದ ಬಗ್ಗೆ ಮತ್ತು ನಮ್ಮ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೆವು. ಅವರ ನೆನಪನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಪ್ರಶಸ್ತಿ ನನಗೆ ಸಿಗುತ್ತಿರುವುದಕ್ಕೆ ಖುಷಿ ಇದೆ’ ಎಂದು ​, ಇಸ್ಟ್​​ವಾನ್ ಹೇಳಿದ್ದಾರೆ. ಮಾರ್ಟಿನ್ ಕೂಡ ಪ್ರಶಸ್ತಿ ಸಿಕ್ಕಿರುವುದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಸತ್ಯಜಿತ್​ ಅವರು ಭಾರತ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. 1955ರಲ್ಲಿಯೇ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದರು ಸತ್ಯಜಿತ್​. ಮೊದಲ ಬಾರಿಗೆ ‘ಪತೇರ್​ ಪಾಂಚಾಲಿ’ ಹೆಸರಿನ ಸಿನಿಮಾವನ್ನು ಬೆಂಗಾಳಿ ಭಾಷೆಯಲ್ಲಿ ನಿರ್ದೇಶನ ಮಾಡಿದ್ದರು. 1955-91ರವರೆಗೆ ಸಾಕಷ್ಟು ಬೆಂಗಾಳಿ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇದರ ಜತೆಗೆ ಕೆಲ ಸಿನಿಮಾಗಳನ್ನು ಅವರು ನಿರ್ಮಾಣ ಕೂಡ ಮಾಡಿದ್ದಾರೆ. 1992ರಲ್ಲಿ ಸತ್ಯಜಿತ್​ ಅವರು ನಿಧನ ಹೊಂದಿದರು. ಅವರ ಹೆಸರನಿಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ: ಪುನೀತ್ ನಿಧನದ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್​ ಏನು? ಇಲ್ಲಿದೆ ವಿಡಿಯೋ

TV9 Kannada


Leave a Reply

Your email address will not be published. Required fields are marked *