ಬೆಂಗಳೂರು: 2005 ರಲ್ಲಿ IISCಯಲ್ಲಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಮೂಲದ ಆರೋಪಿ ಮೊಹಮ್ಮದ್ ಹಬೀಬ್​ರನ್ನ ಬಿಡುಗಡೆ ಮಾಡಿ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

2005ರಲ್ಲಿ ನಗರದ ಭಾರತೀಯ ವಿಜ್ಞಾನ ಸಂಸ್ಥೆ(IISC)ಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ 7ನೇ ಆರೋಪಿಯಾಗಿ ತ್ರಿಪುರ ಮೂಲದ ಮೊಹಮ್ಮದ್ ಹಬೀಬ್​ನನ್ನ ಬಂಧಿಸಲಾಗಿತ್ತು. ಆರೋಪಿ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಆತನನ್ನ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿ ನ್ಯಾಯಾಧೀಶ ಡಾ. ಕಸನಪ್ಪ ನಾಯಕ್​ ಆದೇಶ ನೀಡಿದ್ದಾರೆ.

ಮೊದಲನೇ ಆರೋಪಿ ಶಹಾಬುದ್ದೀನ್ ಅಹ್ಮದ್ ಹೇಳಿಕೆ ಮೇಲೆ ಹಬೀಬ್​ ಎಂಬಾತನನ್ನ ಅರೆಸ್ಟ್ ಮಾಡಲಾಗಿತ್ತು. ಶಹಾಬುದ್ದೀನ್ 2008ರಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದ. ಬಾಂಗ್ಲಾಗೆ ಭೇಟಿ ನೀಡಿದ್ದ ವೇಳೆ ತ್ರಿಪುರ ರಾಜ್ಯದ ಅಗರ್ತಲದಲ್ಲಿ ಹಬೀಬ್​ನನ್ನ ಭೇಟಿ ಮಾಡಿದ್ದನಂತೆ.. ಅದೇ ರೀತಿ ಶಹಾಬುದ್ದೀನ್ ಸಾಕಷ್ಟು ಜನರನ್ನು ಭೇಟಿಯಾಗಿದ್ದ. ಅವರ ಮೂಲಕ ಊಟ & ಉಳಿಯಲು ವ್ಯವಸ್ಥೆ ಪಡೆದಿದ್ದಾಗಿ ಹೇಳಿದ್ದ. ಆದರೆ ತಾನು ಬಾಂಗ್ಲಾಗೆ ಹೋಗುತ್ತಿರುವ ಉದ್ದೇಶ ಹೇಳಿರಲಿಲ್ಲ. ಈ ಬಗ್ಗೆ ತನಿಖೆಯ ವೇಳೆ ತಪ್ಪೊಪ್ಪಿಗೆ ವೇಳೆ ಹೇಳಿಕೆ ನೀಡಿದ್ದ. ಇದೇ ವೇಳೆ ಬೇರೆ ಕೇಸ್​ನಲ್ಲಿ ಲಕ್ನೊ ಪೊಲೀಸರು ಹಬೀಬ್​ನನ್ನು ಬಂಧಿಸಿದ್ದರು. ಕರ್ನಾಟಕ ಪೊಲೀಸರು 2017ರಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ತನಿಖೆಯಲ್ಲಿ ಹಬೀಬ್ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಿದ್ದರು. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹೊಂದಿದ್ದ ಆರೋಪವೂ ಇತ್ತು. ಆದರೆ ಕೋರ್ಟ್​ಗೆ ಸೂಕ್ತ ಸಾಕ್ಷ್ಯಗಳನ್ನು ಉಲ್ಲೇಖಿಸಿಲ್ಲ. ಈ ಹಿನ್ನಲೆ ಆರೋಪಿ ಮೊಹಮ್ಮದ್ ಹಬೀಬ್​ನನ್ನ ಕೋರ್ಟ್ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:
2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶೂಟೌಟ್ ಪ್ರಕರಣ ನಡೆದಿತ್ತು. ಘಟನೆಯಲ್ಲಿ ಒಬ್ಬರ ಸಾವನ್ನಪ್ಪಿ, ಅನೇಕ ಮಂದಿಗೆ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧ ಮೊದಲು ಸದಾಶಿವ ನಗರ ಠಾಣೆಯಲ್ಲಿ FIR ಆಗಿತ್ತು. ನಂತರ ಕೇಸ್ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಟ್ರಾನ್ಸಫರ್ ಆಗಿತ್ತು.

ಎನ್ಐಎ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120(ಬಿ), 121, 121(ಎ). 122, 123, 307, 302, ಆರ್ಮ್ಸ್ ಆಕ್ಟ್ ಸೆಕ್ಷನ್ 25, 27, ಎಕ್ಸಪ್ಲೋಸಿವ್ ಆಕ್ಟ್ ಸೆಕ್ಷನ್ 3, 4 , 5, 6 ಹಾಗೂ ಇಲ್ಲಿಗಲ್ ಆಕ್ಟಿವಿಟಿ ಕಂಟ್ರೋಲ್ ಆಕ್ಟ್ ಸೆಕ್ಷನ್ 10, 13, 16, 17, 18, 20 ಕೇಸ್ ದಾಖಲಾಗಿತ್ತು. ಈ ಕೇಸ್ ನಲ್ಲಿ‌ 4 ವರ್ಷಗಳ ಹಿಂದೆ ಅರೆಸ್ಟ್ ಆಗಿದ್ದ ಹಬೀಬ್ ಜೈಲು ಸೇರಿದ್ದ. ಇತ್ತೀಚೆಗೆ ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿದ್ದ. ಸಿಆರ್ಪಿಸಿ ಸೆಕ್ಷನ್ 227ರ ಅಡಿ ಹಬೀಬ್ ಅರ್ಜಿ ಸಲ್ಲಿಸಿದ್ದ.

The post IISC ಶೂಟೌಟ್ ಪ್ರಕರಣ: ಸಾಕ್ಷ್ಯಾಧಾರ ಸಿಗದಿದ್ದಕ್ಕೆ ಆರೋಪಿ ಮೊಹಮ್ಮದ್ ಬಿಡುಗಡೆ appeared first on News First Kannada.

Source: newsfirstlive.com

Source link