#IMPACT ಅಕ್ರಮವಾಗಿ ಉಪ ನಿರ್ದೇಶಕ ಹುದ್ದೆಗೇರಿದ್ದ ಅಧಿಕಾರಿಯ ವಿಲೀನ ಆದೇಶ ರದ್ದು


ಬೆಂಗಳೂರು: ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯಲ್ಲಿ ಅಕ್ರಮವಾಗಿ ಉಪ ನಿರ್ದೇಶಕರಾಗಿದ್ದ ಸೈಯದ್ ಮನ್ಸೂರ್ ಬಾಷಾ ಅವರ ವಿಲೀನ ಆದೇಶವನ್ನು ರದ್ದುಗೊಳಿಸುವಂತೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಅಧಿಕಾರಿ ಮನ್ಸೂರ್ ಬಾಷಾ ತೋಟಗಾರಿಕೆ ಇಲಾಖೆ ಡಿಡಿಯಾಗಿದ್ದು 2019 ರಲ್ಲಿ ಸರ್ ಸೈಯದ್ ಅಹಮದ್ ಖಾನ್ ರಿಸರ್ಚ್ ಸೆಂಟರ್ಗೆ ಡೆಪ್ಟೇಷನ್ ಆಧಾರದ ಮೇಲೆ ನಿಯೋಜನೆ ಮಾಡಲಾಗಿತ್ತು. ಆದರೆ ಇದೇ ವೇಳೆ ಅಕ್ರಮವಾಗಿ ಸಾಮಾನ್ಯ ನೇಮಕಾತಿ ನಿಯಮ 1977 ರಡಿ ಮನ್ಸೂರ್ ಬಾಷಾ ಸೇವಾ ವಿಲೀನವಾಗಿತ್ತು.

ಇಲಾಖೆಯಲ್ಲಿ ಅಕ್ರಮವಾಗಿ ಜೆಡಿ ಆಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಾಷಾ ವಿಲೀನ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ನ್ಯೂಸ್​ಫಸ್ಟ್​ ವಿಸ್ತೃತ ವರದಿ ಕೂಡ ಬಿತ್ತರಿಸಿತ್ತು. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಬಸವರಾಜ ಬೊಮ್ಮಾಯಿ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಐಎಎಸ್ ಅಧಿಕಾರಿ ಮಣಿವಣ್ಣನ್.ಪಿ ಅವರಿಗೆ ಸೂಚಿಸಿತ್ತು.

ಪ್ರಕರಣದ ಹಿನ್ನೆಲೆ..
ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದ ಬಾಷಾ ಅವರು ಕಾನೂನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಹುದ್ದೆ ಹಿಡಿದಿದ್ದಾರೆ ಎಂಬ ಆರೋಪ ಕೆಳಿ ಬಂದಿತ್ತು. ಇವರು ಸಿ ಮತ್ತು ಆರ್ ರೂಲ್ಸ್ ಬ್ರೇಕ್ ಮಾಡಿ ಅಕ್ರಮವಾಗಿ ಸೇವಾ ವಿಲೀನ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇದರ ಜೊತೆ ನಿಯಮ 32 ಅಡಿಯಲ್ಲಿ ಪ್ರಮೋಷನ್ ಸಹ ಪಡೆದಿದ್ದರು. ಈ ಬಗ್ಗೆ ಇಲಾಖೆಯ ಕೆಲ ಅಧಿಕಾರಿಗಳು ಅನ್ಯಾಯವೆಂದು ದೂರು ಸಲ್ಲಿಸಿದ ಬೆನ್ನಲ್ಲೇ ಐಎಎಸ್ ಅಧಿಕಾರಿ ಮಣಿವಣ್ಣನ್. ಪಿ. ತನಿಖೆ ಮಾಡಿದ್ದರು.

ಡಿಪಿಎಆರ್ ಹಾಗೂ ಆರ್ಥಿಕ ಇಲಾಖೆ ಪರವಾನಗಿ ಇಲ್ಲದೇ ಸೆಕ್ಷನ್​16(ಎ)(3)(1) ಅಡಿಯಲ್ಲಿ ಬಾಷಾರನ್ನು ಅಕ್ರಮವಾಗಿ ರಿಸರ್ಚ್ ಸೆಂಟರ್​ಗಾಗಿ ಮಾತ್ರ ಸೃಷ್ಟಿಸಲಾದ ಹುದ್ದೆಗೆ ವೀಲಿನಗೊಳಿಸಲಾಗಿತ್ತು. ಆದರೆ ಅದನ್ನು ಅಕ್ರಮವಾಗಿ MWDಗೆ ವೀಲಿನ ಅಂತಾ ಮತ್ತೆ ಅಕ್ರಮ ಎಸಗಿದ ಅಧಿಕಾರಿ ಜೆಡಿ ಕೆಳಗೆ ಇಲ್ಲದ ಡಿಡಿ ಹುದ್ದೆಯನ್ನು ಸೃಷ್ಟಿಸಿ ಅಲ್ಲಿಗೆ ಶಿಫ್ಟ್ ಮಾಡಿಸಲಾಗಿತ್ತು.ಜೊತೆಗೆ ಅಕ್ರಮವಾಗಿ ಪಡೆದ ಹುದ್ದೆಗೆ ಬಡ್ತಿ ಪಡೆದು ಜೆಡಿಯಾಗಿದ್ದರು ಇದು ಇಲಾಖೆಯಲ್ಲಿ ಇರುವ 30 ಮಂದಿ ಡಿಡಿಗಳಿಗೆ ಕೆಂಗಣ್ಣಿಗೆ ಗುರಿಯಾಗಿತ್ತು.ಅಧಿಕಾರಿಗಳ ದೂರಿನ ಮೇಲೆ ಇದನ್ನ ತನಿಖೆ ಮಾಡಿದ ಮಣಿವಣ್ಣನ್ ಸರ್ಕಾರಕ್ಕರ ವರದಿ ಸಲ್ಲಿಕೆ ಮಾಡಿದ್ರು.

ಮಣಿವಣ್ಣನ್​ ವರದಿ ಕೈ ಸೇರುತ್ತಿದ್ದಂತೆ ಅಲ್ಪಸಂಖ್ಯಾಂತರ ಕಲ್ಯಾಣ, ಹಜ್ ಮತ್ತು  ವಕ್ಫ್ ಇಲಾಖೆ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ ಅಕ್ರಮವಾಗಿ ಪಡೆದಿದ್ದ ಎರಡು ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಪುನಃ ಆತ ಡೆಪ್ಟೇಷನ್ ಮೇಲೆ ಬಂದಿದ್ದ ಹುದ್ದೆಗೆ ವಾಪಸ್ಸಾಗುವಂತೆ ಆದೇಶ ನೀಡಿದೆ.

ಸಿ ಹಾಗೂ ಆರ್​ ನಿಯಮಗಳು ಹೇಳೊದೇನು..?
ಸೆಕ್ಷನ್​ 16(ಎ)(3) ಪ್ರಕಾರ ವಿಲೀನ ಮಾಡಲು ಕೆಲ ನಿಯಮಗಳಿವೆ ಯಾವುದೇ ವ್ಯಕ್ತಿ ಹುದ್ದೆಯಲ್ಲಿ ವಿಲೀನ ಆಗುತ್ತಿದ್ದರೆ ವ್ಯಕ್ತಿಗೆ ವೈದ್ಯಕೀಯ ಸಮಸ್ಯೆಯ ಕಾರಣಗಳಿರಬೇಕು. ಅಥವಾ ಆ ವ್ಯಕ್ತಿ ದೈಹಿಕ ನ್ಯೂನ್ಯತೆಯನ್ನು ಹೊಂದಿದ್ದರೆ ವಹಿಸಿರುವ ಹುದ್ದೆ ನಿರ್ವಹಿಸಲು ಆಗದಂತ ದೈಹಿಕ ನ್ಯೂನತೆ ಅವರಿಗಿರಬೇಕು. ಇಂತಹ ಸಂದರ್ಭಗಳಲ್ಲಿ ವಿಲೀನಗೊಳಿಸಿದ್ರೆ ಇದ್ದ ಹುದ್ದೆಗಿಂತ ಕೆಳ ದರ್ಜೆಗೆ ನೇಮಿಸಬೇಕು. ಇವೆಲ್ಲ ನಿಯಮಗಳನ್ನು ಲೆಕ್ಕಿಸದೆ ಬಾಷಾ ತಮ್ಮ ಹುದ್ದೆಯನ್ನು ವಿಲೀನಗೊಳಿಸಿಕೊಂಡಿದ್ದರು.

ವಿಶೇಷ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ

 

News First Live Kannada


Leave a Reply

Your email address will not be published. Required fields are marked *