IMPS Transaction Limit: ಐಎಂಪಿಎಸ್​ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್​ಬಿಐ | IMPS limit increased from Rs 2 lakh to Rs 5 lakh Says RBI Governer Shaktikanta Das

IMPS Transaction Limit: ಐಎಂಪಿಎಸ್​ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್​ಬಿಐ

ಆರ್​ಬಿಐ

ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಐಎಂಪಿಎಸ್​ (ತಕ್ಷಣದ ಪಾವತಿ ಸೇವೆ-Immediate Payment Service)ಯ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂಪಾಯಿಗೆ ಏರಿಸಿದೆ.  ದೇಶೀಯ ಹಣವರ್ಗಾವಣೆಗಾಗಿ ವಿವಿಧ ಚಾನಲ್​​ಗಳ ಮೂಲಕ 24×7 ಕಾಲವೂ ಈ ತಕ್ಷಣದ ಪಾವತಿ ಸೇವೆ ಕಾರ್ಯನಿರ್ವಹಿಸುತ್ತದೆ. ಐಎಂಪಿಎಸ್​ನ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಸಲುವಾಗಿ, ಇಷ್ಟು ದಿನ 2 ಲಕ್ಷ ರೂಪಾಯಿ ಇದ್ದ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ತಿಳಿಸಿದ್ದಾರೆ. 

(ಈ ಸುದ್ದಿ ಇನ್ನಷ್ಟು ಅಪ್​ಡೇಟ್​ ಆಗಲಿದೆ)

TV9 Kannada

Leave a comment

Your email address will not be published. Required fields are marked *