
Image Credit source: DNA
ಇದು ಪಾಕಿಸ್ತಾನದ ಇತಿಹಾಸದಲ್ಲಿಯೇ ಅತಿ ಹೆಚ್ಚು ಏಕ ಬೆಲೆ ಏರಿಕೆಯಾಗಿದೆ. ಅಸಮರ್ಥ ಮತ್ತು ಸೂಕ್ಷ್ಮವಲ್ಲದ ಸರ್ಕಾರವು ರಷ್ಯಾದೊಂದಿಗೆ ನಮ್ಮ ಒಪ್ಪಂದವನ್ನು ಅನುಸರಿಸಲಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಸರ್ಕಾರವು (Pakistan Government) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 30 PKR ಹೆಚ್ಚಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ, ಭಾರತವನ್ನು ಇನ್ನೊಮ್ಮೆ ಹೊಗಳಿದ್ದಾರೆ. ಭಾರತದ ಕ್ರಮವನ್ನು ಹೊಗಳಿ, ಪಾಕ್ ಸರ್ಕಾರವನ್ನು ಟೀಕಿಸಿರುವ ಇಮ್ರಾನ್ ಖಾನ್, ಈ ಸಂವೇದನಾರಹಿತ ಸರ್ಕಾರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ರಷ್ಯಾದೊಂದಿಗೆ ಶೇ.30ರಷ್ಟು ಅಗ್ಗದ ತೈಲಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ಗೆ 20% ಹೆಚ್ಚಳದೊಂದಿಗೆ ವಿದೇಶಿ ಮಾಸ್ಟರ್ಗಳ ಮುಂದೆ ಆಮದು ಮಾಡಿಕೊಂಡ ಸರ್ಕಾರದ ಅಧೀನಕ್ಕಾಗಿ ರಾಷ್ಟ್ರವು ಬೆಲೆ ಪಾವತಿಸಲು ಪ್ರಾರಂಭಿಸುತ್ತಿದೆ. ಇದು ಪಾಕಿಸ್ತಾನದ ಇತಿಹಾಸದಲ್ಲಿಯೇ ಅತಿ ಹೆಚ್ಚು ಏಕ ಬೆಲೆ ಏರಿಕೆಯಾಗಿದೆ. ಅಸಮರ್ಥ ಮತ್ತು ಸೂಕ್ಷ್ಮವಲ್ಲದ ಸರ್ಕಾರವು ರಷ್ಯಾದೊಂದಿಗೆ ನಮ್ಮ ಒಪ್ಪಂದವನ್ನು ಅನುಸರಿಸಲಿಲ್ಲ” ಎಂದು ಇಮ್ರಾನ್ ಖಾನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ಇದಕ್ಕೆ ಪರ್ಯಾಯವಾಗಿ ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಮೂಲಕ ಅಮೆರಿಕಾದ ಕಾರ್ಯತಂತ್ರದ ಮಿತ್ರರಾಷ್ಟ್ರವಾದ ಭಾರತವು ಪ್ರತಿ ಲೀಟರ್ಗೆ PKR 25ರಷ್ಟು ಇಂಧನದ ಬೆಲೆಯನ್ನು ಕಡಿಮೆ ಮಾಡಲು ಯಶಸ್ವಿಯಾಗಿದೆ. ಈಗ ನಮ್ಮ ರಾಷ್ಟ್ರವು ಈ ಮೋಸಗಾರರ ಕೈಯಿಂದ ಹಣದುಬ್ಬರದ ಮತ್ತೊಂದು ಬೃಹತ್ ಪ್ರಮಾಣವನ್ನು ಅನುಭವಿಸುತ್ತದೆ” ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.