IND A vs NZ A: ಟಿ20 ತಂಡದಲ್ಲಿಲ್ಲ ಚಾನ್ಸ್​: ಭರ್ಜರಿ ಬೌಲಿಂಗ್ ಮೂಲಕ ಮಿಂಚಿದ ಶಾರ್ದೂಲ್ ಠಾಕೂರ್ | Shardul and Kuldeep Sen, New Zealand A collapse against India A

India A vs New Zealand A: ಟೀಮ್ ಇಂಡಿಯಾ ಎ ಪ್ಲೇಯಿಂಗ್ 11: ಪೃಥ್ವಿ ಶಾ , ರುತುರಾಜ್ ಗಾಯಕ್ವಾಡ್ , ಸಂಜು ಸ್ಯಾಮ್ಸನ್ (ನಾಯಕ) , ರಾಹುಲ್ ತ್ರಿಪಾಠಿ , ರಜತ್ ಪಾಟಿದಾರ್ ,

Sep 22, 2022 | 2:55 PM

TV9kannada Web Team

| Edited By: Zahir PY

Sep 22, 2022 | 2:55 PM
ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ತಂಡದ ಬೌಲರ್​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ನಾಯಕ ನಿರೀಕ್ಷೆಯನ್ನು ಹುಸಿಗೊಳಿಸದಂತೆ ದಾಳಿ ಸಂಘಟಿಸಿದ ಯುವ ವೇಗಿಗಳು ನ್ಯೂಜಿಲೆಂಡ್​ ಬ್ಯಾಟ್ಸ್​ಮನ್​ಗಳನ್ನು ಇಕ್ಕಟಿಗೆ ಸಿಲುಕಿಸಿದರು.

ಅದರಲ್ಲೂ ಟೀಮ್ ಇಂಡಿಯಾ ಟಿ20 ತಂಡದಿಂದ ಹೊರಬಿದ್ದಿರುವ ಶಾರ್ದೂಲ್ ಠಾಕೂರ್ ಭರ್ಜರಿ ಬೌಲಿಂಗ್ ಮೂಲಕ ಗಮನ ಸೆಳೆದರು. 8.2 ಓವರ್​ಗಳನ್ನು ಎಸೆದ ಶಾರ್ದೂಲ್ ಕೇವಲ 32 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಮತ್ತೊಂದೆಡೆ ಶಾರ್ದೂಲ್​​ಗೆ ಸಾಥ್ ನೀಡಿದ ವೇಗಿ ಕುಲ್ದೀಪ್ ಸೇನ್​ ಕೂಡ ನ್ಯೂಜಿಲೆಂಡ್ ಎ ತಂಡ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ ಹಾದಿ ತೋರಿಸಿದರು. ಅದರಂತೆ 7 ಓವರ್​ಗಳನ್ನು ಬೌಲ್ ಮಾಡಿದ ಕುಲ್ದೀಪ್ ಸೇನ್ ಕೇವಲ 30 ರನ್​ ನೀಡಿ 3 ವಿಕೆಟ್ ಕಬಳಿಸಿದರು.

ಇನ್ನು ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರೆ, ಸ್ಪೀಡ್ ಮಾಸ್ಟರ್ ಉಮ್ರಾನ್ ಮಲಿಕ್ 7 ಓವರ್​ ಬೌಲಿಂಗ್ ಮಾಡಿ ಕೇವಲ 27 ರನ್​ ನೀಡಿ ಮಿಂಚಿದರು. ಪರಿಣಾಮ ನ್ಯೂಜಿಲೆಂಡ್ 7 ಬ್ಯಾಟ್ಸ್​ಮನ್​ಗಳನ್ನು ವೇಗಿಗಳು ಪೆವಿಲಿಯನ್​ಗೆ ಕಳುಹಿಸಿದರೆ, ಸ್ಪಿನ್ನರ್ 1 ವಿಕೆಟ್ ಪಡೆದರು. ಇನ್ನು ಇಬ್ಬರು ಆಟಗಾರರು ರನೌಟ್​ಗೆ ಬಲಿಯಾದರು.

ಪರಿಣಾಮ ನ್ಯೂಜಿಲೆಂಡ್ ಎ ತಂಡವು 40.2 ಓವರ್​ಗಳಲ್ಲಿ 167 ರನ್​ಗಳಿಗೆ ಸರ್ವಪತನ ಕಂಡಿತು. ತಂಡದ ಪರ ಮೈಕೆಲ್ ರಿಪ್ಪನ್ 104 ಎಸೆತಗಳಲ್ಲಿ 61 ರನ್​ ಬಾರಿಸಿದ್ದು ಗರಿಷ್ಠ ಸ್ಕೋರ್.

ಟೀಮ್ ಇಂಡಿಯಾ ಎ ಪ್ಲೇಯಿಂಗ್ 11: ಪೃಥ್ವಿ ಶಾ , ರುತುರಾಜ್ ಗಾಯಕ್ವಾಡ್ , ಸಂಜು ಸ್ಯಾಮ್ಸನ್ (ನಾಯಕ) , ರಾಹುಲ್ ತ್ರಿಪಾಠಿ , ರಜತ್ ಪಾಟಿದಾರ್ , ಶಹಬಾಜ್ ಅಹ್ಮದ್ , ರಿಷಿ ಧವನ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಉಮ್ರಾನ್ ಮಲಿಕ್ , ಕುಲ್ದೀಪ್ ಸೇನ್

Most Read Stories

TV9 Kannada

Leave a Reply

Your email address will not be published.