IND Vs AFG Playing XI: ಟಾಸ್ ಗೆದ್ದ ಅಫ್ಘಾನ್; ರೋಹಿತ್- ಪಾಂಡ್ಯ ಔಟ್! ಉಭಯ ತಂಡಗಳು ಹೀಗಿವೆ | IND Vs AFG Playing XI Indias first team batting without captain Rohit


IND Vs AFG Playing XI: ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಅತ್ಯಂತ ಸಮೀಪಕ್ಕೆ ಬಂದು ಅಂತಿಮ ರೇಸ್​ನಿಂದ ಹೊರಬಿದ್ದ ಅಫ್ಘಾನಿಸ್ತಾನ, ಟೀಂ ಇಂಡಿಯಾಕ್ಕೆ ಕೊನೆಯ ಎದುರಾಳಿಯಾಗಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಪ್ರಶಸ್ತಿ ರೇಸ್‌ನಿಂದ ಹೊರಗುಳಿದಿರುವ ಭಾರತ ಕ್ರಿಕೆಟ್ ತಂಡಕ್ಕೆ ಈಗ ಏಷ್ಯಾಕಪ್‌ನಲ್ಲಿ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ. ಎರಡು ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿತು. ಈಗ ತಮ್ಮ ಕೊನೆಯ ಪಂದ್ಯವನ್ನು ಗೆಲುವುನೊಂದಿಗೆ ಕೊನೆಗೊಳ್ಳಿಸಲು ಭಾರತ ಶತಾಯಗತಾಯ ಪ್ರಯತ್ನಿಸಲಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿ ಅತ್ಯಂತ ಸಮೀಪಕ್ಕೆ ಬಂದು ಅಂತಿಮ ರೇಸ್​ನಿಂದ ಹೊರಬಿದ್ದ ಅಫ್ಘಾನಿಸ್ತಾನ, ಟೀಂ ಇಂಡಿಯಾಕ್ಕೆ ಕೊನೆಯ ಎದುರಾಳಿಯಾಗಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

IND vs AFG: ಇಂದಿನ ಪ್ಲೇಯಿಂಗ್ XI

ಭಾರತ: ಕೆಎಲ್ ರಾಹುಲ್ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್.

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಜಜೈ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಕರೀಮ್ ಜನತ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ರಹ್ಮಾನ್, ಫರೀದ್ ಅಹ್ಮದ್, ಫಜಲ್ಹಕ್ ಫರೂಕ್.

ತಾಜಾ ಸುದ್ದಿ

TV9 Kannada


Leave a Reply

Your email address will not be published.