Ind vs Aus: ಸೂರ್ಯ- ಕೊಹ್ಲಿ ಅರ್ಧಶತಕ.. ಸರಣಿ ಗೆದ್ದ ಭಾರತ..! ಕಾಂಗರೂಗಳಿಗೆ ಸೋಲಿನ ವಿದಾಯ | India vs Australia 3rd T20 Match Report IND vs AUS Today Match Full Scorecard


Ind vs Aus: ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ T20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

Ind vs Aus: ಸೂರ್ಯ- ಕೊಹ್ಲಿ ಅರ್ಧಶತಕ.. ಸರಣಿ ಗೆದ್ದ ಭಾರತ..! ಕಾಂಗರೂಗಳಿಗೆ ಸೋಲಿನ ವಿದಾಯ

TV9kannada Web Team

| Edited By: pruthvi Shankar

Sep 25, 2022 | 10:45 PM
ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ T20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಭಾರತ ತಂಡದ ಗೆಲುವಿನಲ್ಲಿ ಬ್ಯಾಟ್‌ನೊಂದಿಗೆ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮುನ್ನ ಅಕ್ಷರ್ ಪಟೇಲ್ ತಮ್ಮ ಮಹತ್ವದ ಜವಾಬ್ದಾರಿಯನ್ನು ಚೆಂಡಿನ ಮೂಲಕ ನಿಭಾಯಿಸಿದ್ದರು. ಈ ಮೊದಲು ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 7 ವಿಕೆಟ್‌ಗೆ 186 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಕೊನೆಯ ಓವರ್‌ನಲ್ಲಿ ಗೆಲುವಿನ ಗುರಿ ಸಾಧಿಸಿತು. ಹಾರ್ದಿಕ್ ಪಾಂಡ್ಯ ಅಂತಿಮವಾಗಿ ಗೆಲುವಿನ ಬೌಂಡರಿ ಬಾರಿಸಿ ಭಾರತಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.