IND vs BAN: ನಾವು ವಿಶ್ವಕಪ್‌ ಗೆಲ್ಲಲು ಇಲ್ಲಿಗೆ ಬಂದಿಲ್ಲ, ಆದರೆ ಭಾರತ..? ಬಾಂಗ್ಲಾ ನಾಯಕನ ಶಾಕಿಂಗ್ ಹೇಳಿಕೆ – India Here To Win T20 World Cup We Are Not says Bangladesh Captain Shakib Al Hasan


ಒಂದೆಡೆ, ಟಿ20 ವಿಶ್ವಕಪ್ (T20 World Cup) ಗೆದ್ದು ವಿಶ್ವ ಚಾಂಪಿಯನ್ ಎನಿಸಿಕೊಳ್ಳುವ ಸಲುವಾಗಿ ಎಲ್ಲಾ ತಂಡಗಳು ಶ್ರಮಿಸುತ್ತಿವೆ. ಅದರಂತೆ ಟಿ20 ವಿಶ್ವ ಚಾಂಪಿಯನ್ ಆಗಲು ಪ್ರತಿ ತಂಡವೂ ಬೆವರು ಹರಿಸುತ್ತಿದ್ದರೆ, ಮತ್ತೊಂದೆಡೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ತಮ್ಮ ತಂಡ ಟಿ20 ವಿಶ್ವಕಪ್ ಗೆಲ್ಲಲು ಬಂದಿಲ್ಲ ಎಂಬ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ನ.2 ರಂದು ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಕಣಕ್ಕಿಳಿಯಲಿದ್ದು, ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್, ಟಿ20 ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ಬಂದಿದೆ, ನಮ್ಮ ತಂಡವನ್ನಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಶಕೀಬ್ ಅಲ್ ಹಸನ್, ‘ವಿಶ್ವಕಪ್ ಗೆಲ್ಲುವ ಉದ್ದೇಶದಿಂದ ಇಲ್ಲಿಗೆ ಬಂದಿರೋದು ಭಾರತ, ನಾವಲ್ಲ’. ಬಾಂಗ್ಲಾದೇಶ, ಭಾರತವನ್ನು ಸೋಲಿಸಿದರೆ ಅದು ತಿರುಗುಬಾಣವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

TV9 Kannada


Leave a Reply

Your email address will not be published.