IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ | Shikhar dhawan t20i career over india vs ireland t20 series squad announced hardik pandya


IND VS IRE: ಧವನ್​ ನಿಂಗ್ ವಯಸ್ಸಾಯ್ತೋ! ಐಪಿಎಲ್​ನಲ್ಲಿ ಮಿಂಚಿದರೂ ಟಿ20 ತಂಡದಲ್ಲಿ ಗಬ್ಬರ್​ಗಿಲ್ಲ ಸ್ಥಾನ

ಶಿಖರ್ ಧವನ್

IND VS IRE: ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ತಂಡವನ್ನು ಆಯ್ಕೆ ಮಾಡಿದಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಶಿಖರ್ ಧವನ್‌ಗೆ ಕರೆ ಮಾಡಿ ಟಿ20ಯಲ್ಲಿ ಯುವಕರಿಗೆ ಅವಕಾಶ ನೀಡುವ ಚಿಂತನೆಯಲ್ಲಿದ್ದೇವೆ ಎಂದು ಧವನ್ ಬಳಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya) ತಂಡದ ನಾಯಕತ್ವ ಪಡೆದಿದ್ದು, ಸಂಜು ಸ್ಯಾಮ್ಸನ್ (Sanju Samson) ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ ಐಪಿಎಲ್‌ (IPL)ನಲ್ಲಿ ಅಮೋಘ ಪ್ರದರ್ಶನ ನೀಡಿದ ರಾಹುಲ್ ತ್ರಿಪಾಠಿ ತಂಡಕ್ಕೆ ಮೊದಲ ಪ್ರವೇಶ ಪಡೆದಿದ್ದಾರೆ. ಆದರೆ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಆಟಗಾರನಿಗೆ ಭಾರತದ ‘ಬಿ’ ತಂಡದಲ್ಲೂ ಅವಕಾಶ ನೀಡಲಾಗಿಲ್ಲ. ನಾವಿಲ್ಲಿ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಟಿ 20 ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ (Shikhar Dhawan) ಬಗ್ಗೆ ಮಾತನಾಡುತ್ತಿದ್ದೇವೆ. ಧವನ್​ಗೆ ಈಗ ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧದ ಟಿ 20 ಸರಣಿಗೂ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ಇದು ಧವನ್ ತಪ್ಪೇ?

ಶಿಖರ್ ಧವನ್ ಅವರಿಗೆ ವಯಸ್ಸಾಗಿದೆ ಮತ್ತು ಅವರ ಸ್ಟ್ರೈಕ್ ರೇಟ್ ಕೂಡ ತುಂಬಾ ಕಡಿಮೆಯಾಗಿದೆ ಎಂದು ಆಗಾಗ್ಗೆ ಆರೋಪಿಸುತ್ತಾರೆ, ಆದರೆ ದಿನೇಶ್ ಕಾರ್ತಿಕ್ ತಂಡದಲ್ಲಿ ಏನು ಮಾಡುತ್ತಿದ್ದಾರೆ? ಅವರ ವಯಸ್ಸು ಶಿಖರಕ್ಕಿಂತ ಹೆಚ್ಚು. ಅಲ್ಲದೆ, ಸ್ಟ್ರೈಕ್ ರೇಟ್ ವಿಚಾರಕ್ಕೆ ಬಂದರೆ ರಿಷಬ್ ಪಂತ್ ಕೂಡ ವೇಗವಾಗಿ ರನ್ ಗಳಿಸುವುದಿಲ್ಲ. ಅವರ ಸ್ಟ್ರೈಕ್ ರೇಟ್ 130ಕ್ಕಿಂತ ಕಡಿಮೆ ಇದೆ. ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ತಂಡವನ್ನು ಆಯ್ಕೆ ಮಾಡಿದಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಶಿಖರ್ ಧವನ್‌ಗೆ ಕರೆ ಮಾಡಿ ಟಿ20ಯಲ್ಲಿ ಯುವಕರಿಗೆ ಅವಕಾಶ ನೀಡುವ ಚಿಂತನೆಯಲ್ಲಿದ್ದೇವೆ ಎಂದು ಧವನ್ ಬಳಿ ಹೇಳಿದ್ದಾರೆ ಎಂದು ವರದಿಯಾಗಿದೆ. ಬಹುಶಃ ಅದಕ್ಕೇ ಧವನ್ ಐರ್ಲೆಂಡ್ ಸರಣಿಗೂ ಆಯ್ಕೆಯಾಗಲಿಲ್ಲ.

TV9 Kannada


Leave a Reply

Your email address will not be published.