IND vs IRE: ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಲಿದ್ದು, ಇದು ಅವರಿಗೆ ವಿಶೇಷ ಸಂದರ್ಭವಾಗಿದೆ. ವಾಸ್ತವವಾಗಿ, 6 ತಿಂಗಳ ಹಿಂದೆ, ಹಾರ್ದಿಕ್ ಪಾಂಡ್ಯ ನಿರಂತರವಾಗಿ ಗಾಯಗಳೊಂದಿಗೆ ಹೋರಾಡುತ್ತಿದ್ದರಿಂದ ಅವರ ಭವಿಷ್ಯವು ಕತ್ತಲೆಯಲ್ಲಿತ್ತು.
ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ (Test against Englan) ವಿರುದ್ಧ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಟೆಸ್ಟ್ಗೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡ ಐರ್ಲೆಂಡ್ಗೆ ತೆರಳಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧ ಭಾರತ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ, ಇದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಟೀಂ ಇಂಡಿಯಾದ ಆಟಗಾರರಿಗೆ 3 ದಿನಗಳ ರಜೆ ಸಿಕ್ಕಿದ್ದು, ಆ ಬಳಿಕ ಎಲ್ಲಾ ಆಟಗಾರರು ಇದೀಗ ಮುಂಬೈನಿಂದ ಐರ್ಲೆಂಡ್ಗೆ ಹಾರಿದ್ದಾರೆ. ಯುಜ್ವೇಂದ್ರ ಚಹಾಲ್ ಐರ್ಲೆಂಡ್ಗೆ ತೆರಳುವ ಮೊದಲು ಟ್ವಿಟರ್ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಚಹಲ್ ಜೊತೆಗಿನ ಫೋಟೋದಲ್ಲಿ ರಿತುರಾಜ್ ಗಾಯಕ್ವಾಡ್ (Rituraj Gaikwad) ಕೂಡ ಇದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕೋಚ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರೂ ಆಗಿರುವ ವಿವಿಎಸ್ ಲಕ್ಷ್ಮಣ್ ಆಗಿರುತ್ತಾರೆ.
ಹಾರ್ದಿಕ್ ಪಾಂಡ್ಯಗೆ ವಿಶೇಷ ಸಂದರ್ಭ
ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಲಿದ್ದು, ಇದು ಅವರಿಗೆ ವಿಶೇಷ ಸಂದರ್ಭವಾಗಿದೆ. ವಾಸ್ತವವಾಗಿ, 6 ತಿಂಗಳ ಹಿಂದೆ, ಹಾರ್ದಿಕ್ ಪಾಂಡ್ಯ ನಿರಂತರವಾಗಿ ಗಾಯಗಳೊಂದಿಗೆ ಹೋರಾಡುತ್ತಿದ್ದರಿಂದ ಅವರ ಭವಿಷ್ಯವು ಕತ್ತಲೆಯಲ್ಲಿತ್ತು. ಆದರೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದ ತಕ್ಷಣ ಎಲ್ಲವೂ ಬದಲಾಯಿತು. ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದಾದ ಬಳಿಕ ಟೀಂ ಇಂಡಿಯಾಗೆ ವಾಪಸಾದ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿ ಇದೀಗ ಟೀಂ ಇಂಡಿಯಾದ ಜವಾಬ್ದಾರಿ ಹೊತ್ತಿದ್ದಾರೆ.