IND vs NZ: ಏಕದಿನ ಸರಣಿಯಲ್ಲಾದರೂ ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್? ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ – India vs New zealand 1st odi probable playing xi in kannada


IND vs NZ: ರಿಷಬ್ ಪಂತ್ ಏಕದಿನ ಸರಣಿಯಲ್ಲಿ ಉಪನಾಯಕರಾಗಿರುವುದರಿಂದ ಅವರಿಗೂ ಸ್ಥಾನ ಪಕ್ಕ ಆಗಿದೆ. ಇದರೊಂದಿಗೆ ಪಂತ್ ವಿಕೆಟ್ ಕೀಪಿಂಗ್ ಕೂಡ ಮಾಡಲಿದ್ದಾರೆ.

IND vs NZ: ಏಕದಿನ ಸರಣಿಯಲ್ಲಾದರೂ ಸ್ಯಾಮ್ಸನ್​ಗೆ ಸಿಗುತ್ತಾ ಚಾನ್ಸ್? ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ

IND vs NZ

Image Credit source: true guess

ನ್ಯೂಜಿಲೆಂಡ್ (New Zealand) ವಿರುದ್ಧದ ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾಕ್ಕೆ ಇದೀಗ ಏಕದಿನ ಸರಣಿಯ ಸವಾಲು ಎದುರಾಗಿದೆ. ಶುಕ್ರವಾರದಿಂದ ಆಕ್ಲೆಂಡ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಆರಂಭಕ್ಕೂ ಮೊದಲು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯೆಂದರೆ ಭಾರತದ ಪ್ಲೇಯಿಂಗ್ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದು. ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ (Sanju Samson and Umran Malik ) ಅವರಂತಹ ಆಟಗಾರರಿಗೆ ಟಿ20 ಸರಣಿಯಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ಏಕದಿನ ಸರಣಿಯಲ್ಲದರೂ ಸಂಜುಗೆ ಅವಕಾಶ ಸಿಗುತ್ತಾ ಎಂಬುದು ನಾಳಿನ ಪಂದ್ಯದ ಟಾಸ್ ನಂತರ ಗೊತ್ತಾಗಲಿದೆ.

ಸ್ಯಾಮ್ಸನ್-ಉಮ್ರಾನ್​ಗೆ ಅವಕಾಶ ಸಿಗುವುದು ಕಷ್ಟ

ತಂಡದಲ್ಲಿ ರಿಷಬ್ ಪಂತ್ ರೂಪದಲ್ಲಿ ವಿಕೆಟ್ ಕೀಪರ್ ಇರುವುದರಿಂದ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗುವುದು ಕಷ್ಟವಾಗಿದೆ. ಹಾಗೆಯೇ ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಅವರಂತಹ ಬೌಲರ್‌ಗಳು ತಂಡದಲ್ಲಿ ಇರುವುದರಿಂದ ಉಮ್ರಾನ್ ಮಲಿಕ್​ಗೂ ಅವಕಾಶ ಸಿಗುವುದು ಅನುಮಾನವಾಗಿದೆ. ಆಲ್​ರೌಂಡರ್ ಕೋಟಾದಲ್ಲಿ ದೀಪಕ್ ಹೂಡಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ, ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಷ್‌ದೀಪ್ ಸಿಂಗ್‌ಗೆ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿದೆ ಎಂಬ ವರದಿಗಳಿವೆ.

ಆಡುವ ಹನ್ನೊಂದರಲ್ಲಿ ಅಗ್ರ 6 ಸ್ಥಾನ ಹೇಗಿರಲಿದೆ?

ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಅವರ ಸ್ಥಾನ ದೃಢಪಟ್ಟಿದೆ. ಇವರಲ್ಲದೇ ಸೂರ್ಯಕುಮಾರ್ ಯಾದವ್ ಕೂಡ ಆಡುವುದು ಖಚಿತವಾಗಿದೆ. ರಿಷಬ್ ಪಂತ್ ಏಕದಿನ ಸರಣಿಯಲ್ಲಿ ಉಪನಾಯಕರಾಗಿರುವುದರಿಂದ ಅವರಿಗೂ ಸ್ಥಾನ ಪಕ್ಕ ಆಗಿದೆ. ಇದರೊಂದಿಗೆ ಪಂತ್ ವಿಕೆಟ್ ಕೀಪಿಂಗ್ ಕೂಡ ಮಾಡಲಿದ್ದಾರೆ. ಇದೀಗ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಾಗಿ ದೀಪಕ್ ಹೂಡಾ ಮತ್ತು ಸ್ಯಾಮ್ಸನ್ ನಡುವೆ ಸ್ಪರ್ಧೆ ನಡೆಯಲಿದೆ. ಹೂಡಾ ಅವರು ಯುಟಿಲಿಟಿ ಪ್ಲೇಯರ್ ಆಗಿರುವುದರಿಂದ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಭಾಗಶಃ ಖಚಿತವಾಗಿದೆ.

ಬೌಲಿಂಗ್ ಜವಾಬ್ದಾರಿ ಯಾರಿಗೆ?

ಬೌಲಿಂಗ್ ಬಗ್ಗೆ ಮಾತನಾಡುವುದಾದರೆ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಅರ್ಷ್‌ದೀಪ್ ಸಿಂಗ್ ವೇಗದ ಬೌಲರ್ ಕೋಟಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲ್ಲಿದ್ದಾರೆ. ಸ್ಪಿನ್ ದಾಳಿಯಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಆಡುವುದು ಬಹುತೇಕ ಖಚಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಉಮ್ರಾನ್ ಮಲಿಕ್ ಬೆಂಚ್ ಮೇಲೆ ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ

ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI – ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್.

ತಾಜಾ ಸುದ್ದಿ

TV9 Kannada


Leave a Reply

Your email address will not be published.